Advertisement

Kadri ಕಂಬಳ-ಕದ್ರಿ ಮೈದಾನ ರಸ್ತೆ ಅವ್ಯವಸ್ಥೆ

03:47 PM Dec 12, 2024 | Team Udayavani |

ಕದ್ರಿ: ಕದ್ರಿ ಕಂಬಳದಿಂದ ಕದ್ರಿ ಮೈದಾನ ಮೂಲಕ ಕದ್ರಿ ದೇವಸ್ಥಾನ ರಸ್ತೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ರಸ್ತೆ ಯುದ್ದಕ್ಕೂ ಹೊಂಡ ಗುಂಡಿ
ಗಳಿಂದ ಕೂಡಿದ್ದು, ಸಂಚಾರ ನಡೆಸಲು ವಾಹನ ಸವಾ ರರು ಪರದಾಡುತ್ತಿದ್ದಾರೆ.

Advertisement

ಸುಮಾರು ಒಂದು ವರ್ಷದಿಂದ ರಸ್ತೆ ಸಂಚಾರಕ್ಕೆ ಅಯೋಗ್ಯ ವಾಗಿದೆ. ಕದ್ರಿ ಕಂಬಳದಿಂದ ರಸ್ತೆ ತಿರುವು ಜಾಗದಲ್ಲಿ ಬೃಹತ್‌ ಹೊಂಡ ಗುಂಡುಗಳು ನಿರ್ಮಾಣವಾಗಿವೆ.

ದ್ವಿಚಕ್ರ ವಾಹನ ಸವಾರಿ ಯಂತೂ ಇಲ್ಲಿ ನರಕ ಸದೃಶ. ಮತ್ತೂಂದೆಡೆ ಮಳೆ ನೀರು ಹರಿದು ಬರುವ ವೇಳೆ ಮಣ್ಣು ಕೊಚ್ಚಿಕೊಂಡು ಬಂದ ರಸ್ತೆಗೆ ಸೇರಿದ್ದು, ಇದೀಗ ರಸ್ತೆ ಧೂಳಿನಿಂದ ಕೂಡಿದೆ. ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸು ವುದು ಮತ್ತೂಂದು ಸಮಸ್ಯೆ. ಈ ಹಿಂದೆ ಈ ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿದ್ದು, ಅಗೆದ ಜಾಗಕ್ಕೆ ತೇಪೆ ಹಾಕಲಾಗಿದೆ. ಆದರೂ ಇದು ಸಂಚಾರಕ್ಕೆ ಸಹಕಾರಿಯಾಗಿಲ್ಲ. ಕಳೆದವಾರ ಸುರಿದ ಮಳೆಯಿಂದ ರಸ್ತೆ ಕೊಚ್ಚಿಹೋಗಿ ಹೊಂಡ ನಿರ್ಮಾಣವಾಗಿದ್ದು, ಸ್ಥಳೀಯರು ಆ ಜಾಗಕ್ಕೆ ಕಲ್ಲುಗಳನ್ನು ಹಾಕಿದ್ದಾರೆ.

ನಡೆದಾಡುವುದೇ ಪ್ರಯಾಸದಾಯಕ
ಈ ರಸ್ತೆಯ ಸುತ್ತಮುತ್ತ ಹಲವಾರು ಮನೆಗಳಿದ್ದು, ಅವುಗಳಲ್ಲಿರುವ ಹಿರಿಯ ನಾಗರಿಕರು, ಮಕ್ಕಳು ಇದೇ ರಸ್ತೆಯನ್ನು ಬಳಸಬೇಕು. ಹಿರಿಯ ನಾಗರಿಕರಿಗೆ ಇಲ್ಲಿ ನಡೆದಾಡುವುದೇ ಪ್ರಯಾಸದಾಯಕ. ಮಕ್ಕಳು ಶಾಲೆಗೆ ತೆರಳುವ ವೇಳೆ ಮುಖ ಮುಚ್ಚಿ ತೆರಳಬೇಕಾದ ಅನಿವಾರ್ಯವಿದೆ.

ಫುಟ್‌ಪಾತ್‌ ಅಪೂರ್ಣ
ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿ ಫುಟ್‌ಪಾತ್‌ ನಿರ್ಮಿಸುವ ಕೆಲಸವಾಗುತ್ತಿದೆ. ಆ ಕಾರ್ಯ ಪೂರ್ಣಗೊಂಡಿಲ್ಲ. ಪಾದಚಾರಿಗಳಿಗೆ ನಡೆದಾಡಲು ಸರಿಯಾದ ವ್ಯವಸ್ಥೆ ಇಲ್ಲವಾಗಿದ್ದು, ಅಪಾಯ ಎದುರಿಸಿಕೊಂಡು ರಸ್ತೆಯಲ್ಲೇ ಓಡಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next