“ಮೈಸೂರು ಪುರಿ ಇರಲಿ’
“ಮೈಸೂರು ಪುರಿ ತಗೊಂಡ್ರೆ – ಇನ್ನೊಂದು ವಿಚಾರ ತಿಳೀಬೇಕು.
ಮೈಸೂರನವರೇ ಆದ ಭೈರಪ್ಪನೋರು ಗೊತ್ತಲ್ಲ?
ಗೊತ್ತಿಲ್ಲ ಅಂದ್ರೆ ಈ ಪುಸ್ತಕ ನೋಡಿ. ತಗೊಳ್ಳಿ. ದುಡ್ಡಿನ ಮಾತು ಆಮೇಲೆ ಇರಲಿ’
“ನಿಮಗೆ – ಓದಕ್ಕೆ ಬರೋಲ್ವಾ?’
“ಇಲ್ಲ, ಇಲ್ಲ ಓದುತ್ತೀನಿ’
“ಶುರುಮಾಡಿದ ಮೇಲೆ ಬರೋದು. ತಗೊಳ್ಳಿ.. ಮಿಕ್ಕದ್ದು ಆಮೇಲೆ..’ಅಂಗಡಿಗೆ ಬಂದವರೊಂದಿಗೆ ಹೀಗೆ ಕಳ್ಳೇಪುರಿ ಜೊತೆ ಸಂಭಾಷಣೆ ಬೆರೆಸುತ್ತಾ ಓದಿನ ರುಚಿ ಹತ್ತಿಸೋದು ಈ ಪ್ರಭಾಕರರ ತಂತ್ರಗಾರಿಕೆ. ಹೆಚ್ಚಾ ಕಮ್ಮಿ 10-15 ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದಾರೆ.
Advertisement
ಇವರದು ಮೈಸೂರ್ ಬ್ಯಾಂಕ್ ಕಾಲೋನಿ, ಶ್ರೀನಗರ, ರಾಜರಾಜೇಶ್ವರಿ ನಗರ – ಹೀಗೆ ಮೂರು ಕಡೆ ರಮ್ಯ ಕಡ್ಲೆàಪುರಿ ಅಂಗಡಿ ಇದೆ. ಇದರಲ್ಲಿ ಎರಡು ಕಡೆ ಭೈರಪ್ಪ, ಕುವೆಂಪು, ತೇಜಸ್ವಿ ಹೀಗೆ ಅನೇಕರ ಪುಸ್ತಕ ಇಟ್ಟಿದ್ದಾರೆ. ಹೊಸ ಕೃತಿ, ರೀ ಪ್ರಿಂಟ್ ಆದ ತಕ್ಷಣ ತಂದು ಓದುತ್ತಾರೆ, ಅದನ್ನು ಅಂಗಡಿಯಲ್ಲಿ ಇಡುತ್ತಾರೆ. ಗ್ರಾಹಕರ ಮುಖದಲ್ಲಿ ಓದಿನ ಗೆರೆಗಳನ್ನು ಹುಡುಕಿ, ಅಂದಾಜು ಮಾಡಿ- “ನೀವು ಏನಾದರೂ ಓದುತ್ತೀರಾ… ನೋಡಿ… ಅಲ್ಲಿ…’ ಅಂತ ಭೈರಪ್ಪನವರ ಉತ್ತರಕಾಂಡ ತೋರಿಸುತ್ತಾರೆ. ತರಾಸು ಅವರ ರಕ್ತರಾತ್ರಿ, ತಿರುಗುಬಾಣದ ಕಥೆ ಹೇಳುತ್ತಾರೆ. “ಟಿ.ವಿ ಮೊಬೈಲ್ ಬಿಟ್ಟು ಚೆನ್ನಾಗಿ ಪುಸ್ತಕ ಓದಬೇಕು..’ ಹೀಗೆ ತಿಳುವಳಿಕೆ ಹೇಳುತ್ತಾರೆ.ಅವರ ಸ್ವಲ್ಪ ಹಿಂದು ಮುಂದು ನೋಡಿದರೆ- ನೀವು ನನ್ನ ಸ್ನೇಹಿತರು ದುಡ್ಡು ಬೇಡ. ಓದಿದ ನಂತರ ಪುಸ್ತಕವನ್ನು ಮರೆಯದೆ ವಾಪಸ್ಸು ತಂದು ಕೊಡಬೇಕು ಅಂತ ಪ್ರೀತಿಯಿಂದ ಬೆನ್ನು ನೇವರಿಸುತ್ತಾರೆ.
ಪ್ರಭಾಕರರು ಓದಿದ ನಂತರವೇ ಪುಸ್ತಕವನ್ನು ಅಂಗಡಿಯಲ್ಲಿ ಇಡೋದು. ಅವರಿಗೆ ಉತ್ತರಕಾಂಡದಲ್ಲಿ ಭೈರಪ್ಪನವರು ಸೀತೆಯನ್ನು ಹೇಗೆ ತೋರಿಸಿದ್ದಾರೆ ಕೇಳಿ? ಹಾಗೇ ಜಲಪಾತದಲ್ಲಿ ಪ್ರಮುಖ ಪಾತ್ರದ ಬಗ್ಗೆ ಕೇಳಿ ನೋಡಿ. ಪಟಾರ್ ಅಂತ ಉತ್ತರ ಕೊಡುತ್ತಾರೆ. ಕುವೆಂಪು ಅಂದರೆ ಇವರಿಗೆ ಇಷ್ಟ. ಅದಕ್ಕೇ ಅವರ ಅಷ್ಟೂ ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ. ಒಟ್ಟಾರೆ ಇವರ ಬಳಿ 200-300 ಪುಸ್ತಕಗಳಿವೆ. ಖಾಲಿಯಾದಂತೆ ಅಂಗಡಿಗಳ ಶೋ ಕೇಸ್‌ನಲ್ಲಿ ತಂದು ತಂದು ಇಡುತ್ತಾರೆ.
ಪ್ರಭಾಕರ್ ಮೂಲತಃ ತಮಿಳುನಾಡಿನವರು. ಮನೆಭಾಷೆ ತಮಿಳು. ಆದರೆ ನಾಲಿಗೆಗೆ ಕನ್ನಡ ಕಲಾಯಿಯಾಗಿದೆ. ಕನ್ನಡ ಓದುವ ಹುಚ್ಚು ಕಾಲೇಜು ದಿನಗಳಿಂದಲೇ ಇದೆ.
Related Articles
“ಬೆಳಗ್ಗೆ ಎಲ್ಲಾ ಮೈ ಮುರಿಯೋಷ್ಟು ಕೆಲ್ಸ . ಅದಕ್ಕೆ, ರಾತ್ರಿ ಹೊತ್ತು ಓದೋಕೆ ಕೂರ್ತೀನಿ. 11.30ಕ್ಕೆ ಕೂತರೆ 1.30ರ ತನಕ ಓದೋದೇ. ಓದಬೇಕು ಸಾರ್. ಮನಸ್ಸಿದ್ದರೆ ಮಾರ್ಗ. ಜೀವನ ಪೂರ್ತಿ ಬರೀ ಕಷ್ಟ ಕಷ್ಟ ಅಂತ ಹೇಳ್ಕೊಂಡಿದ್ದರೆ ಕಾಲಹರಣವಾಗುತ್ತೆ ಅಷ್ಟೇ’ ಅಂತ ಹೇಳುತ್ತಲೇ… ಕುವೆಂಪು ರಾಮಾಯಣ ದರ್ಶನಂ ಓದ್ರೀ. ಈಗಿನ ಜನರೇಷನ್‌ನ ಹುಡುಗ, ಹುಡುಗಿಯರಿಗೆ ಇಂಥ ಪುಸ್ತಕ ಓದಬೇಕು’ ರಾಮಾಯಣ ದರ್ಶನಂ ಪುಸ್ತಕ ತೋರಿಸಿ ಬೆಂಗ್ಳೂರು ಕಡ್ಲೆàಪುರಿ ಕೊಟ್ಟರು.
Advertisement
ಪ್ರಭಾಕರ್ ಸುಮ್ಮನೆ ಪುಸ್ತಕ ಕೊಡೋ ಆಸಾಮಿಯಲ್ಲ. ಅದರೊಂದಿಗೆ “ಪ್ರಿಯ ಓದುಗರೇ,’ ಅಂತ ಪತ್ರ ಕೂಡ ಬರೆಯುತ್ತಾರೆ. ಪುಸ್ತಕ ಕಳೆದರೆ ಬೇಗ ತಿಳಿಸಿ. ಕಳೆದು ಹೋಯ್ತು ಅಂತ ಸ್ನೇಹ ಕಳೆದು ಕೊಳ್ಳಬೇಡಿ. ಅಂಗಡಿ ವ್ಯವಹಾರ ಬೇರೆ, ಪುಸ್ತಕದ ಓದು ಬೇರೆ. ಎರಡಕ್ಕೂ ಸಂಬಂಧವಿಲ್ಲ. ಕಳೆದರೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಬೇರೊಂದು ಪುಸ್ತಕ ಕೊಡಿಸಿ. ಆಗಲಿಲ್ಲವೇ, ಹೇಳಿ. ಆದರೆ ಗೆಳೆತನದಿಂದ ದೂರವಾಗುವುದು ಬೇಡ ಹೀಗಂತ- ಬರೆದಿಡುತ್ತಾರೆ. ಪ್ರಭಾಕರ್ ಲಾಗೆಗೆ ಕಡ್ಲೆàಪುರಿ ರುಚಿ ಹತ್ತಿಸುವುದು ಮಾತ್ರವಲ್ಲ, ಮನಸ್ಸಿಗೆ ಪುಸ್ತಕದ ಅಭಿರುಚಿಯನ್ನು ಮೂಡಿಸುತ್ತಾರೆ. ನಾದಸ್ವರಾ