Advertisement
ಬೆಳಗ್ಗೆ 6.15ರ ವೇಳೆಗೆ ಸಂಬಂಧಿ ಪ್ರಸನ್ನ ಶೆಟ್ಟಿ ಜತೆ ಯಲ್ಲಿ ಕಡಿಯಾಳಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕೃಷ್ಣಮಠಕ್ಕೆ ಹೋಗಲೆಂದು ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಮಣಿಪಾಲ ಕಡೆ ಯಿಂದ ಬಂದ ರಿಕ್ಷಾ ಢಿಕ್ಕಿ ಹೊಡೆದು ಗೀತಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ರಿಕ್ಷಾ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಉಡುಪಿ-ಮಣಿಪಾಲ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಕಡಿಯಾಳಿ ಭಾಗದಲ್ಲಿ ಒಂದು ಭಾಗದ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ವಾಹನಗಳು ಹೊಸ ರಸ್ತೆಯಲ್ಲಿಯೇ ವೇಗ ವಾಗಿ ಸಾಗುತ್ತಿವೆ. ಕಾಮಗಾರಿ ಪೂರ್ಣ ವಾಗದೆ ಇದಿರುವು ದರಿಂದ ಸೂಚನಾ ಫಲಕ ಅಳವಡಿಕೆ, ಝೀಬ್ರಾ ಕ್ರಾಸ್, ಡಿವೈಡರ್ ಮೊದಲಾದವುಗಳನ್ನು ಮಾಡಿಲ್ಲ. ಆದರೆ ಇಲ್ಲಿ ತಾತ್ಕಾಲಿಕವಾಗಿಯೂ ಪೊಲೀಸ್ ಸಿಬಂದಿಯನ್ನು ಕೂಡ ನಿಯೋ ಜಿಸಿಲ್ಲ. ಈ ಭಾಗದಲ್ಲಿ ಹಿಂದೆ ಮರಣಾಂತಿಕವೆನಿಸುವ ಅಪಘಾತ ಸಂಭವಿಸಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಶ್ರಮ ಜೀವಿ
ಗೀತಾ ಕಡಿಯಾಳಿಯ ನಿವಾಸಿ ಯಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಶ್ರಮಜೀವಿಯಾಗಿ ಗುರುತಿಸಿ ಕೊಂಡಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಚಟು ವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಮೃತರು ಪತಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿ ಯನ್ನು ಅಗಲಿದ್ದಾರೆ. ನಿಧನಕ್ಕೆ ಕಡಿಯಾಳಿ ಗಣೇಶೋತ್ಸವ ಸಮಿತಿ ಸಂತಾಪ ಸೂಚಿಸಿದೆ.