Advertisement

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

12:41 AM May 24, 2022 | Team Udayavani |

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲದಲ್ಲಿ ಜೂ. 1ರಿಂದ 10ರ ತನಕ ನಡೆಯ ಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗತಕಾಲದ ಇತಿಹಾಸ ಮರುಕಳಿಸುವಂತೆ ಅತ್ಯಂತ ವೈಭವೋ
ಪೇತವಾಗಿ ಸಮಗ್ರ ಜೀರ್ಣೋ ದ್ಧಾರ ಕಾಮಗಾರಿ ಸಾಗುತ್ತಿದೆ.

Advertisement

ಇತಿಹಾಸ
ತೌಳವ ರಾಜ ರಾಮಭೋಜ ಪುತ್ರಕಾ ಮೇಷ್ಠಿ ಮಾಡಿದ್ದು, ಆಗ ಪ್ರೇರಣೆಯಾದಂತೆ ನಾರಾಯಣನ ವಿಶೇಷ ಸಾನ್ನಿಧ್ಯ
ವನ್ನು ಪ್ರತಿಷ್ಠಾಪನೆ ಮಾಡಿದರು. ಅದು ಅನಂತೇಶ್ವರ ದೇಗುಲ. ಅಲ್ಲದೆ ಅನಂತೇಶ್ವರ ದೇಗುಲದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯಗಳನ್ನು ಸ್ಥಾಪಿಸಿದ. ಅದರಲ್ಲೊಂದು ಕಡಿಯಾಳಿ ದೇಗುಲ ಎನ್ನುವುದು ಪ್ರತೀತಿ. ಬೈಲೂರು ಮಹಿಷಮರ್ದಿನೀ, ಕನ್ನರ್ಪಾಡಿ ಜಯದುರ್ಗೆ, ಪುತ್ತೂರು ದುರ್ಗಾ ಪರಮೇಶ್ವರೀ ಉಳಿದ ಮೂರು ದೇಗುಲಗಳು.

ಕೃಷ್ಣಮಠದ ನಂಟು
ಉಡುಪಿ ಶ್ರೀಕೃಷ್ಣ ಮಠಕ್ಕೂ ಕಡಿಯಾಳಿ ದೇಗುಲಕ್ಕೂ ನಿಕಟ ಸಂಬಂಧವಿದೆ. ಪರ್ಯಾಯ ಪೀಠ ವನ್ನೇರುವ ಸ್ವಾಮಿಗಳು ಮೊದಲು ತಾಯಿಯ ಬಳಿ ಬಂದು ಪ್ರಾರ್ಥನೆ ಸಲ್ಲಿಸುವುದು ಸಂಪ್ರ ದಾಯ. ಪ್ರತೀ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆಯನ್ನು ಈ ದೇಗುಲದಲ್ಲಿ ನಡೆಸಿಕೊಂಡು ಬಂದಿದ್ದಾರೆ.

ಜೀರ್ಣೋದ್ಧಾರ ಪ್ರಕ್ರಿಯೆ
2018ರ ಜ. 24ರಂದು ಹಿಂದಿನ ಜೀರ್ಣೋದ್ಧಾರ ಸಮಿತಿಯಿಂದ ಪ್ರಾರಂಭಗೊಂಡು ದೇವಸ್ಥಾನದ ಸುತ್ತು ಪೌಳಿ, ಹೊರಾಂಗಣ, ಸುಬ್ರಹ್ಮಣ್ಯ ಗುಡಿ, ನಾಗಬನ, ನಂದಿ ಕೋಣ ಗುಡಿಯನ್ನು ಸಂಪೂರ್ಣ ಕೆಡವಲಾಗಿತ್ತು. ಇದರಲ್ಲಿ ನಂದಿಕೋಣ ಗುಡಿಯನ್ನು ನವೀಕರಿಸ ಲಾಗಿದೆ. ಆದರೆ ಅತೀ ಪ್ರಮುಖವಾದ ಸುತ್ತು ಪೌಳಿ, ಪ್ರಾಂಗಣದ ಕಾಮಗಾರಿಯು ಪ್ರಾರಂಭವಾಗದೆ ಭಕ್ತರಿಗೆ ಭಾರೀ ತೊಂದರೆಯಾಗುತ್ತಿತ್ತು. ಹೀಗಾಗಿ ನೂತನ ದೇವಸ್ಥಾನ ಸಮಿತಿಯ ಕೋರಿಕೆಯಂತೆ ಸಮಸ್ತ ಗ್ರಾಮಸ್ಥರ ಸಭೆ ನಡೆಸಿ 2020ರ ಜ. 22ರಂದು ಶಾಸಕ ಕೆ. ರಘುಪತಿಭಟ್‌ ಗೌರವಾಧ್ಯಕ್ಷರಾಗಿ, ಶ್ರೀನಾಗೇಶ್‌ ಹೆಗ್ಡೆ ಅಧ್ಯಕ್ಷರಾಗಿ, ಕೆ. ರಾಘವೇಂದ್ರ ಕಿಣಿ ಪ್ರಧಾನ ಕಾರ್ಯದರ್ಶಿಯಾಗಿ 17 ಮಂದಿ ಸಮಿತಿ ಸದಸ್ಯ ರಿರುವ ನೂತನ ಜೀರ್ಣೋದ್ಧಾರ ಸಮಿತಿಯನ್ನು ಆರಿಸಲಾಯಿತು. ಇದರಂತೆ ರಾಜ್ಯ ಸರಕಾರ 2021ರ ಫೆ. 25ರಂದು ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.

ಗ್ರಾಮಸ್ಥರ ಕರಸೇವೆ
ಕರಸೇವೆ ಎಲ್ಲ ದೇಗುಲಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ದೇಗುಲದಲ್ಲಿ ನಿರಂತರವಾಗಿ ನಡೆಯುತ್ತಿರುವುದು ವಿಶೇಷ. ಸುಬ್ರಹ್ಮಣ್ಯ ಗುಡಿ, ಸಂಪೂರ್ಣ ಸುತ್ತುಪೌಳಿಯ ಅಡಿಪಾಯ ಕಾಮಗಾರಿ, ಬೆಡ್‌ ಕಾಂಕ್ರಿಟೀಕರಣ, ಪಾದೆಕಲ್ಲು ಕಟ್ಟುವುದು ಸೇರಿದಂತೆ ಸಮಸ್ತ ಕೆಲಸವನ್ನು 300-400 ಗ್ರಾಮಸ್ಥರು ದಿನನಿತ್ಯ ಮಾಡಿರುವುದು ವಿಶೇಷ. ಕೋವಿಡ್‌ ಸಂದರ್ಭದಲ್ಲೂ ದಿನಾಲು ಸಂಜೆ 4ರಿಂದ ರಾತ್ರಿ 9ರ ತನಕ 46 ದಿನಗಳ ಕರಸೇವೆ ಮಾಡಿದ್ದಾರೆ. ಈಗಲೂ ನೂರಾರು ಭಕ್ತರು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಬಾಡಿಗೆ ರಹಿತ ಕಲ್ಯಾಣ ಮಂಟಪ
ಡಾ| ಕಟ್ಟೆ ರವಿರಾಜ್‌ ವಿ. ಆಚಾರ್ಯರ ನೂತನ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ 10 ಸಾವಿರ ಚದರ ಅಡಿಯ ನೂತನ ಶರ್ವಾಣಿ ಕಲ್ಯಾಣ ಮಂಟಪ ನಿರ್ಮಾಣಗೊಳ್ಳುತ್ತಿದೆ. ಇದನ್ನು ವಿವಾಹ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ಸಾರ್ವಜನಿಕರಿಂದ ಬಾಡಿಗೆ ಪಡೆಯದೆ ಉಚಿತವಾಗಿ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next