Advertisement

ಕಾಡಯ್ಯನವರದ್ದು ಅಪರೂಪದ ವ್ಯಕ್ತಿತ್ವ: ಸಿಎಂ

05:56 PM Mar 07, 2022 | Team Udayavani |

ಹುಬ್ಬಳ್ಳಿ: ಕಾಡಯ್ಯ ಅಜ್ಜನವರದ್ದು ಅಪರೂಪದ ವ್ಯಕ್ತಿತ್ವ. ಮಗುವಿನಂಥ ಮನಸ್ಸು, ಸ್ಪಷ್ಟ ವಿಚಾರ, ನೇರನುಡಿ, ಕಲ್ಮಶವಿಲ್ಲದವರು. ಯಾರಿಗೂ ಕೆಟ್ಟದ್ದನ್ನು ಬಯಸದೆ ಲೋಕ ಕಲ್ಯಾಣ ಬಯಸಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕೇಶ್ವಾಪುರ ಕುಸುಗಲ್ಲ ರಸ್ತೆಯ ಕೆ.ಜಿ. ಗಾರ್ಡನ್‌ದಲ್ಲಿ ರವಿವಾರ ಹಮ್ಮಿಕೊಂಡಿದ್ದ ಲಿಂ| ಶ್ರೀ ವೇ.ಮೂ. ಕಾಡಯ್ಯ ಗು. ಹಿರೇಮಠ ಅವರ 81ನೇ ಜನ್ಮ ಸಂಸ್ಮರಣ ದಿನಾಚರಣೆ ಹಾಗೂ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು ಮಾನವೀಯ ಮೂರ್ತಿ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿನ ಎಲ್ಲರೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದ ಅವರ ನೆನಪುಗಳು ಚಿರಸ್ಥಾಯಿ. ರೈತರ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿದ್ದರು. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುತ್ತಿದ್ದರು ಎಂದರು.

ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರಾಜಕೀಯದವರ ಮೇಲೆ ಒಂದಲ್ಲಾ ಒಂದು ಆರೋಪ ಇದ್ದೇ ಇರುತ್ತದೆ. ಆದರೆ ಕಾಡಯ್ಯ ಅವರ ಮೇಲೆ ಅಂತಹ ಯಾವುದೇ ಆರೋಪವಿರಲಿಲ್ಲ. ಮನಸ್ಸಿನಲ್ಲಿ ಸ್ಪಷ್ಟವಾದ ಉದ್ದೇಶವಿಟ್ಟುಕೊಂಡು ಕೆಲಸ ಮಾಡಿದ್ದರು ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಮಾನವೀಯ ಮೂರ್ತಿ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು.

Advertisement

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಸೂಡಿಯ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಹಾವೇರಿಯ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅಮೃತ ದೇಸಾಯಿ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿ ಜಂಗಮಾಭಿವೃದ್ಧಿ ಸಂಸ್ಥೆಯ ಗೌರವಾಧ್ಯಕ್ಷ ಆರ್‌.ಎಂ. ಹಿರೇಮಠ, ಪ್ರಕಾಶ ಬೆಂಡಿಗೇರಿ, ಬಸಯ್ಯ ಹಿರೇಮಠ, ಗದಿಗೆಯ್ಯ ಹಿರೇಮಠ, ಮಂಜುನಾಥ ಉಡುಪಿ, ಚೆನ್ನಯ್ಯ ಚುಳಕಿಮಠ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next