Advertisement
ಬೆಳಗ್ಗೆ 9.45 ಕ್ಕೆ ನಾಡೋಜ ಡಾ| ಮಹೇಶ್ ಜೋಷಿ ಸಮ್ಮೇಳನವನ್ನು ಉದ್ಘಾಟಿಸುವರು. ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ವಸ್ತು ಪ್ರದರ್ಶನವನ್ನು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಲಾ ಪ್ರದರ್ಶನವನ್ನು ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರು ಉದ್ಘಾಟಿಸುವರು.
ಸಮಾರೋಪ ಸಮಾರಂಭ ಸಂಜೆ 4.30 ಕ್ಕೆ ಆರಂಭವಾಗಲಿದೆ. ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಸಮಾರೋಪ ಭಾಷಣ ಮಾಡುವರು. ಸಮ್ಮೇಳನಾಧ್ಯಕ್ಷ ನಾ| ಕಾರಂತ ಪೆರಾಜೆ ಸಮ್ಮೇಳನದ ವಿಮರ್ಶೆ ಮಾಡುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Related Articles
ಅಕ್ಷರ ಜಾತ್ರೆಗೆ ಇಲ್ಲಿಯ ಸರಕಾರಿ ಪ.ಪೂ. ಕಾಲೇಜು ಆವರಣದ ಬಿ.ಟಿ.ಆರಿಗ ಜೈನ್ ಸಭಾಂಗಣದಲ್ಲಿ ಕುಲ್ಕುಂದ ಶಿವರಾವ್ ವೇದಿಕೆ ಸಜ್ಜಾಗಿದೆ. ಸಮ್ಮೇಳನದ ಸಿದ್ಧತೆಯಲ್ಲಿ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಒಳಗೊಂಡಿದ್ದು,ಯುವಜನರನ್ನು ಕನ್ನಡದೊಂದಿಗೆ ಬೆಸೆಯುವ ಕೆಲಸ ನಡೆದಿದೆ. ವಿದ್ಯಾರ್ಥಿಗಳೇ ಸಭಾಂಗಣ, ವೇದಿಕೆ ಹಾಗೂ ಕಾಲೇಜಿನ ಪರಿಸರವನ್ನು ಸಿಂಗರಿಸಿದ್ದಾರೆ. ಈಗಾಗಲೇ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನಕ್ಕೆ ಮಳಿಗೆಗಳು ಸಿದ್ಧಗೊಂಡಿವೆ.
Advertisement