Advertisement

Kadambotsava: ಮಾರ್ಚ್ 5, 6 ರಂದು ಬನವಾಸಿಯಲ್ಲಿ ಕದಂಬೋತ್ಸವ: ಜಿಲ್ಲಾಧಿಕಾರಿ

07:43 PM Feb 20, 2024 | |

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಉತ್ಸವವಾದ ಕದಂಬೋತ್ವವವನ್ನು ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ವೈಭವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

Advertisement

ಮಂಗಳವಾರ ಸಂಜೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು‌ . ಕದಂಬೋತ್ಸವದ ಅಂಗವಾಗಿ ಮಾರ್ಚ್ 3 ರಂದು ಗುಡ್ನಾಪುರದಿಂದ ಕದಂಬ ಜ್ಯೋತಿ ಹೊರಡಲಿದ್ದು, ಆ ದಿನ ಸಂಜೆ ಗುಡ್ನಾಪುರದಲ್ಲಿ ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕದಂಬೋತ್ಸವದ ಅಂಗವಾಗಿ ನಡೆಯುವ ಕ್ರೀಡಾ ಸ್ಪರ್ಧೆಗಳ ನೊಂದಣಿಯನ್ನು ಫೆಬ್ರವರಿ 21 ರಿಂದ 25 ರ ವರೆಗೆ ಮಾಡಿಕೊಳ್ಳಬಹುದಾಗಿದ್ದು, ಫೆಬ್ರವರಿ 27 ರಿಂದ 29 ರ ವರೆಗೆ ಎಲ್ಲಾ ಸ್ಪರ್ಧೆಗಳು ನಡೆಯಲಿವೆ. ಸ್ಪರ್ದೆಗಳಿಗೆ ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರವಿ ನಾಯಕ್ ಮೊ.ಸಂ. 7899104699 ಅವರನ್ನು ಸಂಪರ್ಕಿಸಬಹುದಾಗಿದ್ದು, ಕುಸ್ತಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ ಎಂದರು.

ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ಅತ್ಯಂತ ವೈಭವದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕದಂಬೋತ್ಸವದಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Mayor: ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ ಚಂಡೀಗಢ ಮೇಯರ್… ಸುಪ್ರೀಂ ಕೋರ್ಟ್ ತೀರ್ಪು

Advertisement
Advertisement

Udayavani is now on Telegram. Click here to join our channel and stay updated with the latest news.

Next