Advertisement
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಅರೆಕಾಲಿಕ ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಡಿವಳಿಕೆ, ಸಂಸ್ಕಾರ, ಆಚಾರ-ವಿಚಾರ ಶುದ್ಧವಾಗಿರಬೇಕು. ಆಗ ಮಾತ್ರ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮ್ಮ ವೇಷಭೂಷಣಗಳ ಬದಲಾಗಿ ವರ್ತನೆಯಿಂದ ವ್ಯಕ್ತಿತ್ವ ಹಿರಿದಾಗುತ್ತದೆ. ಆದ್ದರಿಂದ ಗ್ರಾಮದ ಜನರ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದರು.
Related Articles
Advertisement
ಇದನ್ನೂ ಓದಿ:ಒಂದು ನಗರದ ಹನ್ನೊಂದು ಕಥೆಗಳಲ್ಲಿ ನಾವೆಲ್ಲಿ ?
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಅರೆಕಾಲಿಕ ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಡಿವಳಿಕೆ, ಸಂಸ್ಕಾರ, ಆಚಾರ-ವಿಚಾರ ಶುದ್ಧವಾಗಿರಬೇಕು. ಆಗ ಮಾತ್ರ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ. ನಮ್ಮ ವೇಷಭೂಷಣಗಳ ಬದಲಾಗಿ ವರ್ತನೆಯಿಂದ ವ್ಯಕ್ತಿತ್ವ ಹಿರಿದಾಗುತ್ತದೆ. ಆದ್ದರಿಂದ ಗ್ರಾಮದ ಜನರ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದರು. ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸಿದ್ರಾಮ ಪ್ರಾಸ್ತಾವಿಕ ಮಾತನಾಡಿ, ಸ್ವಯಂ ಸೇವಕರು ತರಬೇತಿ ಸದುಪಯೋಗ ಪಡೆದು ಗ್ರಾಮಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳಲ್ಲಿ ವ್ಯಾಜ್ಯಗಳಾಗುತ್ತವೆ. ಅಂತಹ ವ್ಯಾಜ್ಯ ನಿಭಾಯಿಸಿ ಅವರಿಗೆ ಕಾನೂನಿನ ಅರಿವು ಮೂಡಿಸಿ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.
ಸಂಘದ ಅಧ್ಯಕ್ಷ ಜಗದೀಶ ಜಗತಾಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯಾ ಧೀಶರುಗಳಾದ ಶಶಿಕಾಂತ ಭಾವಿಕಟ್ಟಿ, ಝರಿನಾ, ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ, ಪ್ರಕಾಶ ವಿ.ಎಂ, ಧನರಾಜ ಬಿರಾದಾರ, ಆರ್ .ಪಿ. ಗೌಡ, ವಿನಾಯಕರಾವ್ ಸಿಂಧೆ ವೇದಿಕೆಯಲ್ಲಿದ್ದರು.
ಪಶು ವೈದ್ಯಾಧಿ ಕಾರಿ ಡಾ| ಗೌತಮ ಅರಳಿ, ನಿವೃತ್ತ ಅಧಿ ಕಾರಿ ಭೀಮಾಶಂಕರ ಅಂಬಲಗಿ, ನ್ಯಾಯಾ ಧೀಶರಾದ ಝರಿನಾ, ಜಿಲ್ಲಾ ಕಾರಾಗೃಹ ವ್ಯವಸ್ಥಾಪಕ ಶರಣಬಸಪ್ಪ ಸ್ವಯಂ ಸೇವಕರಿಗೆ ತರಬೇತಿ ನೀಡಿದರು.