Advertisement
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮಾಲೋಚನ ಸಭೆ ನಡೆಸಿದ ಅವರು, ಕಡಬದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಲು ಸರಕಾರದಿಂದ ಸೂಚನೆ ಇದೆ. ಆದರೆ ಹೊಸದಾಗಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸೂಕ್ತ ಸ್ಥಳ, ಕೋರ್ಸ್‌ಗಳು, ಪರಿಸರದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಸ್ಥಳೀಯವಾಗಿ ಲಭ್ಯವಿರುವ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿ ಕಾಲೇಜು ಶಿಕ್ಷಣ ಆಯುಕ್ತರಿಗೆ ವರದಿ ಸಲ್ಲಿಸಬೇಕಿದೆ ಎಂದು ಹೇಳಿದರು.
Related Articles
Advertisement
ತಾಲೂಕು ಪಂಚಾಯತ್ ಸದಸ್ಯರಾದ ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ನಿವೃತ್ತ ಶಿಕ್ಷಕರಾದ ತಮ್ಮಯ್ಯ ಗೌಡ ಸುಳ್ಯ, ಜನಾರ್ದನ ಗೌಡ ಪಣೆಮಜಲು, ಸ್ಕರಿಯ ಕಳಾರ, ವಿ.ಎಂ. ಕುರಿಯನ್, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ, ಸದಸ್ಯರಾದ ಸಿ.ಜೆ. ಸೈಮನ್, ಹನೀಫ್ ಕೆ.ಎಂ., ಕೃಷ್ಣಪ್ಪ ಪೂಜಾರಿ, ಕೃಷ್ಣಪ್ಪ ನಾಯ್ಕ, ಶರೀಫ್ ಎ.ಎಸ್., ಜಯಂತಿ ಗಣಪಯ್ಯ, ನೀಲಾವತಿ ಶಿವರಾಮ, ರೇವತಿ, ಶಾಲಿನಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಶಿಕ್ಷಕರಾದ ವಿಜಯಕುಮಾರ್ ಅಬ್ದುಲ್ ಖಾದರ್, ಪ್ರಮುಖರಾದ ಸ್ಟೀಫನ್ ಕುತ್ಯಾಡಿ, ಥಾಮಸ್ ಇಡೆಯಾಳ ಉಪಸ್ಥಿತರಿದ್ದರು.
ಪದವಿ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜು ಉಪನ್ಯಾಸಕ ಸಲಿನ್ ಕೆ.ಪಿ. ನಿರೂಪಿಸಿ, ವಂದಿಸಿದರು.
ವಿಜ್ಞಾನ ತರಗತಿ ಆರಂಭಿಸಲು ಮನವಿಹೊಸ ಪದವಿ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಷಯಗಳ ಜತೆಗೆ ವಿಜ್ಞಾನ ವಿಭಾಗವನ್ನೂ ಅಗತ್ಯವಾಗಿ ಆರಂಭಿಸಬೇಕೆಂಬ ಬೇಡಿಕೆ ವ್ಯಕ್ತ ವಾಯಿತು. ಕಡಬ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದೊಡ್ಡ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಉತ್ತಮ ಫಲಿ ತಾಂಶ ದಾಖಲಾಗುತ್ತಿದೆ. ಸುತ್ತಲಿನ ಪ.ಪೂ. ಕಾಲೇಜುಗಳಲ್ಲೂ ವಿಜ್ಞಾನ ವಿದ್ಯಾರ್ಥಿಗಳಿದ್ದಾರೆ. ವಿಜ್ಞಾನ ವಿಭಾಗ ಆರಂಭಿಸಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಭಿಕರು ಅಧಿಕಾರಿಗಲಿಗೆ ಮನವರಿಕೆ ಮಾಡಿಕೊಟ್ಟರು. ನಿರ್ಣಯ ಮಂಡನೆ
ಕಡಬದಲ್ಲಿ ಸರಕಾರಿ ಪ್ರ.ದರ್ಜೆ ಕಾಲೇಜನ್ನು ತಾತ್ಕಾಲಿಕ ಕಟ್ಟಡದಲ್ಲಿ ಪ್ರಾರಂಭಿಸು ವುದಾದರೆ ಪ್ರಥಮ ವರ್ಷದಲ್ಲಿ ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಇತ್ಯಾದಿಗಳನ್ನು ಒದಗಿಸಲು ಸಹಕರಿಸುವುದಾಗಿ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ನಿರ್ಣಯ ಕೈಗೊಂಡು, ಅದರ ಪ್ರತಿಯನ್ನು ಅಧಿಕಾರಿಗಳಿಗೆ ನೀಡಿದರು. ಸ್ಥಳ ಪರಿಶೀಲನೆ
ಸಭೆಯ ಬಳಿಕ ಜಂಟಿ ನಿರ್ದೇಶಕರು, ಸಮನ್ವಯಾಧಿಕಾರಿ, ಜನಪ್ರತಿನಿಧಿಗಳು ಪದವಿ ಪೂರ್ವ ಕಾಲೇಜಿನ ಬಳಿ ಪದವಿ ಕಾಲೇಜಿಗೆ ನಿಗದಿಪಡಿಸಿದ ಜಮೀನು ಹಾಗೂ ತಾತ್ಕಾಲಿಕ ನೆಲೆಯಲ್ಲಿ ಕಾಲೇಜು ಆರಂಭಿಸಲು ಪ್ರಸ್ತಾವಿಸಲಾದ ಕಡಬ ಸ.ಮಾ.ಹಿ.ಪ್ರಾ. ಶಾಲೆಗೆ ತೆರಳಿ ಅಲ್ಲಿನ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿ ಕೆಲವು ಸೌಕರ್ಯಗಳನ್ನು ಕಲ್ಪಿಸಿ ಕಾಲೇಜನ್ನು ತಾತ್ಕಾಲಿಕವಾಗಿ ತೆರೆಯುವ ಬಗ್ಗೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.