ಕಡಬ : ಇಲ್ಲಿನ ಶ್ರೀ ಶ್ರೀ ಕಂಠಸ್ವಾಮಿ ಮತ್ತು ಶ್ರೀ ಮಹಾಗಣ ಪತಿ ದೇವಸ್ಥಾನದಲ್ಲಿ 24ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ವಿಶೇಷ ಪೂಜೆಯು ಜರಗಿತು.
ಬೆಳಗ್ಗೆ ಮಹಾಗಣಪತಿ ಹೋಮ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕುದ್ಮಾರು ಸಂಗೀತ ಪ್ರತಿಷ್ಠಾನದ ಶ್ರೀಕಾಂತ್ ಕುದ್ಮಾರು ಅವರ ಶಿಷ್ಯ ಬಳಗ ದಿಂದ ಕಡಬ ಸಂಗೀತ ಶಾಲೆಯ ವಾರ್ಷಿ ಕೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ ದೇವಸ್ಥಾನದ ಶ್ರೀ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ಸಭಾ ವೇದಿಕೆಯಲ್ಲಿ ಜರಗಿತು.
ಸಂಜೆ ಕಡಬ ಶ್ರೀ ದುರ್ಗಾಂಬಿಕಾ ಭಜನ ಮಂಡಳಿ, ಶ್ರೀ ಅಯ್ಯಪ್ಪ ಭಜನ ಮಂಡಳಿ ಮೂರಾಜೆ ಹಾಗೂ ಪಿಜಕಳ ಶ್ರೀ ಮಹಾವಿಷ್ಣು ಭಜನ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ ಜರಗಿತು. ರಾತ್ರಿ ಕಡ್ಯ ವಾಸುದೇವ ಭಟ್ ಮತ್ತು ಬಳಗದವರಿಂದ ಭಕ್ತಿಸಂಗೀತ ನೆರವೇರಿತು. ಅನಂತರ ಶಿವಪೂಜೆ, ರಂಗಪೂಜೆ, ಮಹಾಪೂಜೆ ಜರಗಿತು.
ಜಾತ್ರೆ ಸಮಿತಿಯ ಗೌರವಾಧ್ಯಕ್ಷ ಕೆ. ಗೋಪಾಲ ರಾವ್, ಅಧ್ಯಕ್ಷ ಸತೀಶ್ ನಾೖಕ್ ಮೇಲಿನಮನೆ, ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಸದಸ್ಯರಾದ ಕೇಶವ ಬೈಪಡಿತ್ತಾಯ (ಅರ್ಚಕರು), ಮೋಹನದಾಸ್ ಎಂ.ಎಸ್. ಮೂರಾಜೆ, ಗಂಗಾಧರ ನಾೖಕ್ ಅಗ್ರಸಾಲೆ, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಗೀತಾ ಬಾಲಕೃಷ್ಣ, ಸಾವಿತ್ರಿ ಟಿ. ನಾೖಕ್ ಬೆದ್ರಾಜೆ, ಕೇಶವ ಮುಳಿಮಜಲು, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಧರಣೇಂದ್ರ ಜೈನ್ ಬೆದ್ರಾಜೆ, ಆನಂದ ಆಂಗಡಿಮನೆ, ಶಾಲಿನಿ ಸತೀಶ್ ನಾೖಕ್ ಮೇಲಿನಮನೆ, ನೀಲಾವತಿ ಶಿವರಾಂ ಎಂ.ಎಸ್. ಮುಂಗ್ಲಿಮನೆ, ತಮ್ಮಯ್ಯ ನಾೖಕ್ ಕುಕ್ಕೆರೆಬೆಟ್ಟು, ಮೋನಪ್ಪ ಕುಂಬಾರ ಪಾಲೋಳಿ, ಚಂದ್ರಶೇಖರ ಕರ್ಕೇರ ಪೆಲತ್ತೋಡಿ, ಜಿನ್ನಪ್ಪ ಸಾಲ್ಯಾನ್ ಉಪ ಸ್ಥಿತರಿದ್ದರು. ರಾತ್ರಿ ಮಹಾ ಪೂಜೆಯ ಬಳಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಮರ್ದಾಳ: ಶಿವರಾತ್ರಿಪೂಜೆ
ಮರ್ದಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ ಮಹಾಗಣಪತಿ ಹೋಮ ನಡೆದು ವಿಶೇಷ ಪೂಜೆ ಜರಗಿತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್‌ಕುಮಾರ್ ಬಲ್ಲಾಳ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಕೋಶಾಧಿಕಾರಿ ಸುಂದರ ಕರ್ಕೇರ ಮತ್ರಾಡಿ, ಕಾರ್ಯ ದರ್ಶಿ ಪ್ರಶಾಂತ್ ರೈ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ., ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಪೂವಪ್ಪ ಗೌಡ ಐತ್ತೂರು, ಪ್ರಮುಖರಾದ ರಾಧಾಕೃಷ್ಣ ಭಟ್ ಪಿಲಿಮಜಲು, ಸಂಜೀವ ಶೆಟ್ಟಿ ಅತ್ಯಡ್ಕ, ನಾರಾಯಣ ಶೆಟ್ಟಿ ಅತ್ಯಡ್ಕ, ತಮ್ಮಯ್ಯ ಗೌಡ ಸುಳ್ಯ, ಜಗನ್ನಾಥ ಶೆಟ್ಟಿ ಆಜನ, ಚಿನ್ನಪ್ಪ ಗೌಡ, ಸತೀಶ್ ರೈ ಮೈಕಾಜೆ ಉಪಸ್ಥಿತರಿದ್ದರು.