Advertisement

ಕಡಬ : ಕೋಳಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ

09:09 PM Nov 07, 2021 | Team Udayavani |

ಕಡಬ : ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬದ ಕೊಂಬಾರು ಕಮರ್ಕಜೆಯಲ್ಲಿ ಭಾನುವಾರ ನಡೆದಿದೆ.

Advertisement

ಕೋಳಿ ಹಿಡಿಯಲು ಪ್ರಯತ್ನಿಸುವ ವೇಳೆ ಚಿರತೆ ಅಚಾನಕ್ಕಾಗಿ ಕೋಳಿ ಸಮೇತ ಬಾವಿಗೆ ಬಿದ್ದಿದೆ. ಕೋಳಿ ಸಾವನ್ನಪ್ಪಿದೆ.

ರಾಮಯ್ಯ ಎಂಬವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು,  ಸ್ಥಳಕ್ಕೆ ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸುರಕ್ಷತೆಗಳೊಂದಿಗೆ ರಕ್ಷಣಾ ಕಾರ್ಯ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next