Advertisement

ಗಗನ ಕುಸುಮವಾದ ಕಾಚೇನಹಳ್ಳಿ ಏತ ನೀರಾವರಿ ಯೋಜನೆ

12:39 PM Jul 09, 2019 | Team Udayavani |

ಚನ್ನರಾಯಪಟ್ಟಣ: ತಾಲೂಕಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಬರಗಾಲ ಆವರಿಸಿದೆ. ಆದರೆ ದಂಡಿ ಗನಹಳ್ಳಿ ಹೋಬಳಿಗೆ ಕಳೆದ 3 ದಶಕದಿಂದ ಬರಗಾಲ ಬಂದಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

Advertisement

ಚುನಾವಣೆ ಬಂದಾಗ ಮಾತ್ರ ನೆನಪು: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆಯಲ್ಲಿ ಮಾತ್ರ ದಂಡಿಗನಹಳ್ಳಿ ಹೋಬಳಿಯ ರೈತರ ಸಂಕಷ್ಟ ಎಲ್ಲಾ ರಾಜಕೀಯ ಪಕ್ಷದ ನಾಯಕರಿಗೆ ಅರ್ಥವಾಗುತ್ತದೆ. ಚುನಾವಣೆ ಮುಗಿದ ಬಳಿಕ ಆಡಳಿತಕ್ಕೆ ಬಂದ ಪಕ್ಷದವರು ಹಾಗೂ ಸೋಲು ಅನುಭವಿಸಿದವರು ಈ ಹೋಬಳಿಯ ಜನತೆಯ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಲು ಮುಂದಾಗದಿರುವುದು ವಿಪರ್ಯಾಸವೇ ಸರಿ.

ಹೈಕಮಾಡ್‌ ಕಡೆ ಕೈ ತೋರಿಸುವ ಕಾಂಗ್ರೆಸ್‌: ರಾಜ್ಯ ದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಅನುದಾನ ನೀಡಿ ದಂಡಿಗನಹಳ್ಳಿ ಹೋಬಳಿ ಆಲ ಗೊಂಡನಹಳ್ಳಿ ಹಾಗೂ ಕಾಚೇನಹಳ್ಳಿ ಏತನೀರಾವರಿಗೆ ಹಣ ಮೀಡಲಿಟ್ಟಿದೆಯಾದರು ಕಾಮಗಾರಿ ಪ್ರಾರಂಭ ಮಾಡಿ ಈ ಭಾಗದ ಜನರಿಗೆ ನೀರು ನೀಡಲು ಜಿಲ್ಲಾ ಮಂತ್ರಿ ರೇವಣ್ಣ ಹಿಂದೇಟು ಹಾಕುತ್ತಿ ದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಬೇಕಿರುವ ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡರು ಹೈಕಮಾಂಡ್‌ ಕಡೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ಮಾತು ಮರೆತ ದೇವೇಗೌಡರ ಕುಟುಂಬ: ದಂಡಿ ಗನಹಳ್ಳಿ ಹೋಬಳಿಯ ರೈತರು ಕಳೆದ 30 ವರ್ಷದಿಂದ ಕುಡಿವ ನೀರಿಗೆ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯ ಕೇಳಲು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಸಂಸ ದರ ಅಧಿಕಾರ ಅವಧಿ ಯಲ್ಲಿ ಒಮ್ಮೆಯೂ ಕ್ಷೇತ್ರದಲ್ಲಿ ಸಭೆ ಮಾಡಲು ಮುಂದಾಗಲಿಲ್ಲ. ಚುನಾವಣೆ ಸಮ ಯದಲ್ಲಿ ಕುಮಾರ ಸ್ವಾಮಿ, ದೇವೇಗೌಡ, ರೇವಣ್ಣ, ಪ್ರಜ್ವಲ್ ರೇವಣ್ಣ, ಡಾ.ಸೂರಜ್‌ ರೇವಣ್ಣ, ಭವಾನಿ ರೇವಣ್ಣ ಹೀಗೆ ಗೌಡರ ಕುಟುಂಬದವರು ವೇದಿಕೆ ಮೇಲೆ ನಿಂತು ಕಾಚೇನಹಳ್ಳಿ ಏತನೀರಾವರಿಯನ್ನು ಆರು ತಿಂಗಳಲ್ಲಿ ಪೂರ್ಣ ಮಾಡದೇ ಹೋದರೆ ರಾಜ ಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಕುಟುಂಬ ಸಮೇತ ತಿಳಿಸಿದರು.

ವಚನ ಭ್ರಷ್ಟ ಕುಟುಂಬ: ಕೊಟ್ಟಮಾತಿನಂತೆ ನಡೆದು ಕೊಳ್ಳುವಲ್ಲಿ ಗೌಡರ ಕುಟುಂಬ ಹಿಂದೇಟು ಹಾಕುತ್ತಿದೆ. ಪ್ರತಿ ಚುನಾವಣೆಯಲ್ಲಿ ದಂಡಿಗನಹಳ್ಳಿ ಹೋಬಳಿ ಯನ್ನು ಸಂಪೂರ್ಣ ನೀರಾವರಿ ಮಾಡುತ್ತೇವೆ ಗುಂಪು ಗ್ರಾಮ ಯೋಜನೆ ಮೂಲಕ ನದಿ ಮೂಲಕ ದಿನದ 24 ತಾಸು ಶುದ್ಧ ಕುಡಿಯುವ ನೀರು ಕೊಡುತ್ತೇವೆ ನಮ್ಮನ್ನು ವಿಧಾನ ಸೌಧಕ್ಕೆ ಕಳುಹಿಸಿ, ಲೋಕಸಭೆಗೆ ಕಳುಹಿಸಿ ಎಂದು ಪೊಳ್ಳು ಬರವಸೆ ನೀಡಿ ಅಧಿಕಾರಕ್ಕೆ ಬರುವ ಕುಟುಂಬಸ್ಥರು 30 ವರ್ಷದಿಂದ ವಚನ ಭ್ರಷ್ಟರಾಗಿದ್ದಾರೆ.

Advertisement

ಚುನಾವಣಾ ದಾಳವಾಗುತ್ತಿರುವ ಯೋಜನೆ: ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಕೇವಲ ದಂಡಿಗನಹಳ್ಳಿ ಹೋಬಳಿಗೆ ಮಾತ್ರ ಅನುಕೂಲವಾಗು ವುದಿಲ್ಲ. ನಾಲ್ಕಾರು ತಾಲೂಕಿನ ರೈತರು ಇದರ ಫ‌ಲ ಉಣ್ಣಲಿದ್ದಾರೆ. ತಾಲೂಕಿಗೆ ಸುಮಾರು 9,489 ಎಕರೆ ಪ್ರದೇಶಗಳಿಗೆ ನೀರು ಹರಿಯತ್ತದೆ. ಹೊಳೆನರಸೀಪುರ ತಾಲೂಕಿಗೆ 1,558 ಎಕರೆ ಪ್ರದೇಶ, ಅರಸೀಕೆರೆ 1,420 ಎಕರೆ ಪ್ರದೇಶ, ಹಾಸನ ತಾಲೂಕಿಗೆ 133 ಎಕರೆ ಪ್ರದೇಶಗಳಿಗೆ ಅನುಕೂಲವಾಗುತ್ತದೆ. ಇದನ್ನು ಅರಿತಿ ದ್ದರೂ ಈ ನಾಲ್ಕು ತಾಲೂಕಿನ ಶಾಸಕ ಜಿಲ್ಲಾ ಮಂತ್ರಿ ರೇವಣ್ಣ ಹಾಗೂ ಜಿಲ್ಲೆಯ ಲೋಕಸಭಾ ಸದಸ್ಯರಾಗಿದ್ದ ದೇವೇಗೌಡರು ಮೂರು ದಶಕದಿಂದ ಚುನಾವಣಾ ದಾಳವನ್ನಾಗಿ ಏತನೀರಾವರಿಯನ್ನು ಉಪಯೋಗಿಸಿ ಕೊಳ್ಳುತ್ತಿದ್ದಾರೆ.

300 ಮೀ. ಕಲ್ಲು ಬಂಡೆ ಕಾಮಗಾರಿಗೆ ಅಡ್ಡಿ: ದಂಡಗನಹಳ್ಳಿ ಬಳಿ 300 ಮೀ. ಕಲ್ಲು ಬಂಡೆ ಸಿಕ್ಕಿದ್ದು 7 ವರ್ಷದಿಂದ ಬಂಡೆ ಒಡೆಯವ ಕಾರ್ಯ ನಡೆ ಯುತ್ತಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಹೇಳುತ್ತಿದ್ದಾರೆ.ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಆದೇಶ ಮಾಡಿದರೆ ಒಂದು ವಾರದಲ್ಲಿ ಮುಕ್ತಾಯ ಮಾಡುತ್ತಾರೆ. ಆದರೆ ಅಧಿಕಾರಿಗಳ ಬೇಜವಬ್ದಾರಿ ಯಿಂದ ಕಾಮಗಾರಿ ನಡೆಯುತ್ತಿಲ್ಲ.

ಮಂದಗತಿಯಲ್ಲಿ ಕಾಮಗಾರಿ: 1991 ಡಿ.27 ರಂದು ಅಂದಿನ ಕಾಂಗ್ರೆಸ್‌ ಸರ್ಕಾರ 8.9 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರಿಂದ ಕಾಂಗ್ರೆಸ್‌ ಪಕ್ಷದ ಸಂಸದರಾಗಿದ್ದ ಜಿ.ಪುಟ್ಟಸ್ವಾಮಿಗೌಡ ಶಂಕು ಸ್ಥಾಪನೆ ಮಾಡಿ ಕಾಮಗಾರಿಯನ್ನು ಪ್ರಾರಂಭಿಸಿದರು ನಂತರದ ದಿವಸಗಳಲ್ಲಿ ಅವರ ಸೋಲುಂಡ ಬಳಿಕ ಈ ಯೋಜನೆಯ ಕಾಮಗಾರಿಯು ಮಂದಗತಿಯಲ್ಲಿ ಕುಂಟುತ್ತಾ ತೆವಳುತ್ತಾ ಸಾಗಿದೆ.

ಬಿಜೆಪಿ ಸರ್ಕಾರಿ ಹೆಚ್ಚು ಅನುದಾನ ನೀಡಿತ್ತು: ಬಿಜೆಪಿ ಅಧಿಕಾರಾವಧಿಯಲ್ಲಿ ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಸುರೇಶ್‌ಕುಮಾರ್‌ ಸ್ಥಳ ಪರಿಶೀಲನೆ ಮಾಡಿದ್ದಲ್ಲದೇ ಎಲ್ಲಿಯವರೆಗೆ ನೀರು ಹರಿಯುತ್ತದೆ ಹಾಗೂ ಆ ಭಾಗದ ಜನತೆ ಅನುಭವಿಸುತ್ತಿರುವ ಕಷ್ಟವನ್ನು ಕಣ್ಣಾರೆ ಪರೀಕ್ಷಿಸಿ ಈ ಯೋಜನೆಗೆ ಅತಿ ಹೆಚ್ಚು 67 ಕೋಟಿ ರೂ. ಹಣ ಬಿಡುಗಡೆ ಮಾಡಿ ಕಾಮಗಾರಿ ಚುರುಕುಗೊಳಿಸಿದ್ದರು.

ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೊದಲನೇ ಹಂತಕ್ಕೆ ನೀರು ಹರಿಸಿತು. 2ನೇ ಹಂತಕ್ಕೆ 6 ತಿಂಗಳಲ್ಲಿ ನೀರು ಹರಿಸುವ ಭರವಸೆ ನೀಡಿ ಇತ್ತ ಗಮನ ಹರಿಸಲಿಲ್ಲ. ಈಗ ಇಲ್ಲಿನ ಶಾಸಕ ರೇವಣ್ಣ ರಾಜ್ಯದ ಸೂಪರ್‌ ಸಿಎಂ ಎಂಬ ಖ್ಯಾತಿ ಪಡೆದಿದ್ದು ಜಿಲ್ಲಾ ಮಂತ್ರಿಯಾಗಿದ್ದಾರೆ ಅವರು ಮನಸ್ಸು ಮಾಡಿದರೆ 2 ತಿಂಗಳಲ್ಲಿ 2ನೇ ಹಂತದ ಯೋಜನೆ ಪೂರ್ಣಗೊಳಿಸಿ 3ನೇ ಹಂತದ ಕಾಮಗಾರಿ ಪ್ರಾರಂಭಿಸ ಬಹುದಿತ್ತು. ಆದರೆ ಅವರು ಇತ್ತ ಸುಳಿಯುತ್ತಿಲ್ಲ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next