Advertisement

ಕಬ್ಜ 25ನೇ ದಿನದ ಸಂಭ್ರಮ: ಕಬ್ಜ 2 ಪೋಸ್ಟರ್ ರಿಲೀಸ್

11:45 AM Apr 20, 2023 | Team Udayavani |

ಆರ್‌.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ” ಕಬ್ಜ ‘ 25 ದಿನಗಳನ್ನು ಪೂರೈಸಿದೆ. ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ, ಬಿಡುಗಡೆ ನಂತರವೂ ಸಿನಿಪ್ರಿಯರ ಮನ ಗೆದ್ದಿತ್ತು. ಈ ಖುಷಿಯನ್ನು ಚಿತ್ರತಂಡ 25ನೇ ದಿನದಂದು ಸಂಭ್ರಮಿಸಿದೆ.

Advertisement

ಚಿತ್ರಕ್ಕೆ ದುಡಿದ ತಾಂತ್ರಿಕ ವರ್ಗಕ್ಕೆ ನೆನಪಿನ ಕಾಣಿಕೆ ನೀಡುವ ಮೂಲಕ ಚಿತ್ರದ ಯಶಸ್ಸಿನ ನೆನಪನ್ನು ಶಾಶ್ವತಗೊಳಿಸಿದೆ. ಮಾಜಿ ಸಚಿವ ಹೆಚ್‌.ಎಂ.ರೇವಣ್ಣ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಬ್ಜ-2 ಪೋಸ್ಟರ್‌ ರಿಲೀಸ್‌

ಚಿತ್ರದ 25ನೇ ದಿನದ ಸಂಭ್ರಮದ ವೇಳೆಯೇ ಆರ್‌.ಚಂದ್ರು “ಕಬ್ಜ-2′ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಮರದ ಚೇರ್‌, ಪಕ್ಕದಲ್ಲೊಂದು ಗನ್‌ ಇಟ್ಟಿರುವ ಪೋಸ್ಟರ್‌ ಸಖತ್‌ ಕುತೂಹಲ ಸೃಷ್ಟಿಸಿರುವುದಂತೂ ಸುಳ್ಳಲ್ಲ.

ಕಬ್ಜ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ ಮತ್ತು ಶ್ರೀಯಾ ಸರಣ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರು ಕ್ಯಾಮಿಯೋ ಮಾಡಿದ್ದರು. ಆರ್ ಚಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next