Advertisement
ಕಾಬೂಲ್ ಚೋಲೆ ಮಸಾಲಾಬೇಕಾಗುವ ಪದಾರ್ಥ: ನೆನೆಸಿದ ಬಿಳಿಕಡ್ಲೆ-ಎರಡು ಕಪ್, ಸಣ್ಣಗೆ ಹೆಚ್ಚಿದ ಆಲೂಗಡ್ಡೆ – ಒಂದು, ಹೆಚ್ಚಿದ ಈರುಳ್ಳಿ – ಅರ್ಧ ಕಪ್, ಟೊಮೆಟೋ – ಒಂದು, ಶುಂಠಿಬೆಳ್ಳುಳ್ಳಿ ಪೇಸ್ಟ್ – ಎರಡು ಚಮಚ, ಹಸಿಮೆಣಸು- ಎರಡು, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಕೆಂಪು ಮೆಣಸಿನಹುಡಿ – ಒಂದು ಚಮಚ, ಚೋಲೆಮಸಾಲಾ – ಎರಡು ಚಮಚ, ಬೆಣ್ಣೆ – ಒಂದು ಚಮಚ, ಲಿಂಬೆರಸ – ನಾಲ್ಕು ಚಮಚ, ಉಪ್ಪು – ರುಚಿಗೆ.
ಬೇಕಾಗುವ ಪದಾರ್ಥ : ನೆನೆಸಿಟ್ಟ ಬಿಳಿಕಡ್ಲೆ – ಅರ್ಧ ಕಪ್, ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಟೊಮೆಟೋ – ಎರಡು ಚಮಚ, ದಾಳಿಂಬೆ – ಆರು ಚಮಚ, ಮೊಳಕೆ ಹೆಸರು ಮತ್ತು ಸ್ವೀಟ್‌ಕಾರ್ನ್ – ಎರಡು ಚಮಚ, ಚಾಟ್ ಮಸಾಲಾ – ಒಂದು ಚಮಚ, ಹುರಿದ ಗೋಡಂಬಿ – ನಾಲ್ಕು ಚಮಚ, ಲಿಂಬೆರಸ – ಎರಡು ಚಮಚ, ಕೊತ್ತಂಬರಿ ಸೊಪ್ಪು – ಎರಡು ಚಮಚ, ಟೊಮೆಟೋ ಸಾಸ್ – ಎರಡು ಚಮಚ, ಉಪ್ಪು – ರುಚಿಗೆ, ಲಿಜ್ಜತ್ ಹಪ್ಪಳ – ಆರು.
Related Articles
Advertisement
ಕಾಬೂಲ್ ಚೆನ್ನ ರಾಯತಬೇಕಾಗುವ ಪದಾರ್ಥ: ನೆನೆಸಿದ ಕಾಬೂಲ್ ಚೆನ್ನ- ಒಂದು ಕಪ್, ಆಲೂಗಡ್ಡೆ- ಒಂದು, ಕಾಯಿ ತುರಿ- ಆರು ಚಮಚ, ಇಂಗಿನ ಪುಡಿ – ಒಂದು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಹಸಿಮೆಣಸು- ಒಂದು, ಜೀರಿಗೆ- ಒಂದು ಚಮಚ, ಹೆಚ್ಚಿದ ಈರುಳ್ಳಿ – ಒಂದು, ಕ್ಯಾಪ್ಸಿಕಂ- ಒಂದು, ಕೊತ್ತಂಬರಿ ಸೊಪ್ಪು – ಎರಡು ಚಮಚ,ಉಪ್ಪು ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ : ನೆನೆಸಿಟ್ಟ ಬಿಳಿಕಡ್ಲೆಗೆ ಸ್ವಲ್ಪ ಅರಶಿಣ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ತೆಂಗಿನ ತುರಿಗೆ ಶುಂಠಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಇದಕ್ಕೆ ಸೇರಿಸಿ. ನಂತರ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ , ಹೆಚ್ಚಿದ ಈರುಳ್ಳಿ, ಟೊಮೆಟೋ, ಕ್ಯಾರೆಟ್ ತುರಿ, ಬಾಡಿಸಿದ ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈಗ ತಯಾರಾದ ರಾಯತಕ್ಕೆ ಇಂಗಿನ ಒಗ್ಗರಣೆಯನ್ನು ಸಾಸಿವೆ ಜೀರಿಗೆಯ ಜೊತೆ ನೀಡಿ. ಕಾಬೂಲ್ ಚೆನ್ನ ಕಟ್ಲೆಟ್
ಬೇಕಾಗುವ ಪದಾರ್ಥ : ನೆನೆಸಿ ಬೇಯಿಸಿದ ಕಾಬೂಲ್‌ಕಡ್ಲೆ – ಒಂದು ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಎರಡು ಚಮಚ, ಪನ್ನೀರು- ಎರಡು ಚಮಚ, ಹಸಿಮೆಣಸು – ಎರಡು, ಕೊತ್ತಂಬರಿ ಸೊಪ್ಪು- ಆರು ಚಮಚ, ಕಡ್ಲೆಹುಡಿ – ಎರಡು ಚಮಚ, ಧನಿಯಾ ಪುಡಿ- ಎರಡು ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಜೀರಾಪುಡಿ – ಒಂದು ಚಮಚ, ಕೆಂಪುಮೆಣಸಿನ ಪುಡಿ – ಒಂದು ಚಮಚ, ಗರಂಮಸಾಲಾ – ಒಂದು ಚಮಚ, ಲಿಂಬೆರಸ – ನಾಲ್ಕು ಚಮಚ, ಕಾರ್ನ್ಫ್ಲೋರ್ – ಒಂದು ಚಮಚ, ರಸ್ಕಿನ ಪುಡಿ – ಅರ್ಧ ಕಪ್, ಉಪ್ಪು – ರುಚಿಗೆ ಬೇಕಷ್ಟು. ವಿಧಾನ :- ಬೇಯಿಸಿದ ಕಾಬೂಲ್‌ಕಡ್ಲೆಗೆ ಉಪ್ಪು, ಅರಶಿಣ ಪುಡಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟು ಸೇರಿಸಿ ತರಿತರಿಯಾಗಿ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ರಸ್ಕಿನ ಪುಡಿ ಹೊರತು ಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ದಪ್ಪಗೆ ವಡೆತರ ತಟ್ಟಿ ರಸ್ಕಿನ ಪುಡಿಯಲ್ಲಿ ಹೊರಳಿಸಿ ಕಾದ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿ. ಗೀತಸದಾ, ಮೋಂತಿಮಾರು