Advertisement

ಕಾಬೂಲ್‌ನತ್ತ ಬರುತ್ತಿದ್ದ ಐದು ರಾಕೆಟ್‌ ಛೇದನ!

11:54 PM Aug 30, 2021 | Team Udayavani |

ಕಾಬೂಲ್‌: ಸೋಮವಾರವೂ ಕಾಬೂಲ್‌ ವಿಮಾನ ನಿಲ್ದಾಣವನ್ನು ಗುರಿ ಯಾಗಿಸಿಕೊಂಡು ರಾಕೆಟ್‌ ದಾಳಿ ನಡೆಸ ಲಾಗಿದೆ. ನುಗ್ಗಿಬಂದ ಇನ್ನೂ 5 ರಾಕೆಟ್‌ಗಳನ್ನು ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಮೂಲಕ ಛೇದಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಐಸಿಸ್‌-ಕೆ ಈ ದಾಳಿಯ ಹೊಣೆ ಹೊತ್ತು ಕೊಂಡಿದೆ. ಸಾವು ನೋವಿನ ಮಾಹಿತಿ ಲಭ್ಯ ವಾಗಿಲ್ಲ. ದಾಳಿ ನಡುವೆ ವಿಮಾನ ನಿಲ್ದಾಣ ದಲ್ಲಿ ಸ್ಥಳಾಂತರ ಪ್ರಕ್ರಿಯೆ, ವಿಮಾನಗಳ ಅವ ತರಣ - ಉಡ್ಡಯನ ನಿರಂತರವಾಗಿ ಸಾಗಿದೆ.

ರವಿವಾರ ಕಾಬೂಲ್‌ನಲ್ಲಿ ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮಕ್ಕಳ ಸಹಿತ 10 ಮಂದಿ ಮೃತಪಟ್ಟಿದ್ದಾರೆ ಎಂದು ಟೋಲೋ ನ್ಯೂಸ್‌ ವರದಿ ಮಾಡಿದೆ. ಇದರ ಬೆನ್ನಲ್ಲೇ ತಾಲಿಬಾನ್‌ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಉಗ್ರರು ಲೈವ್‌! :

ಅಫ್ಘಾನ್‌ನಲ್ಲಿ ಸುದ್ದಿಯ ನೇರ ಪ್ರಸಾರ ಸಂದರ್ಭದಲ್ಲೇ ಸುದ್ದಿ ಮನೆಗೆ ನುಗ್ಗಿದ ಉಗ್ರರು, ಸುದ್ದಿವಾಚಕ ನಿಗೆ ಬಂದೂಕು ತೋರಿಸಿ ತಮ್ಮ ಸಂದೇಶ ಓದುವಂತೆ ಸೂಚಿಸಿದ್ದಾರೆ. ಭಯಭೀತ ನಿರೂಪಕ ತಡವರಿ ಸುತ್ತ, “ತಾಲಿಬಾನಿಗಳಿಗೆ ಹೆದರಬೇಡಿ, ಇಸ್ಲಾಮಿಕ್‌ ಎಮಿರೇಟ್ಸ್‌ಗೆ ಜನರು ಸಹಕಾರ ನೀಡಬೇಕು. ತಾಲಿ ಬಾನ್‌ ನಿಮ್ಮ ಸುರಕ್ಷೆಯನ್ನು ನೋಡಿಕೊಳ್ಳಲಿದೆ’ ಎಂಬ ಸಂದೇಶ ಓದಿದ್ದಾನೆ. ಈ ವೀಡಿಯೋ ವೈರಲ್‌ ಆಗಿದೆ.

Advertisement

 

ಭಾರತಕ್ಕೆ ಅಪಾಯವಿಲ್ಲ’  :

ಭಾರತವು ನಮಗೆ ಅತ್ಯಂತ ಮುಖ್ಯ ವಾದ ದೇಶ. ಹಾಗಾಗಿ ನಮ್ಮಿಂದ ಭಾರತಕ್ಕೆ ಯಾವ ಅಪಾಯವೂ ಎದುರಾಗದು ಎಂದು ತಾಲಿ ಬಾನ್‌ ವಕ್ತಾರ ಝಬೀಹುಲ್ಲಾ ಮುಜಾಹಿದ್‌ ಹೇಳಿದ್ದಾನೆ. ಸಂದರ್ಶನ ವೊಂದ  ರಲ್ಲಿ ಭಾರತ-ಅಫ್ಘಾನ್‌ನ ಬಾಂಧವ್ಯ ವನ್ನು ಸ್ಮರಿಸಿರುವ ಮುಜಾಹಿದ್‌, ತಾಲಿ ಬಾನಿ ಆಡಳಿತ ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ. ಪಾಕ್‌ ನೊಂದಿಗೆ ಸೇರಿ ತಾಲಿಬಾನ್‌ ಭಾರತದ ವಿರುದ್ಧ ಸಂಚು ರೂಪಿಸುತ್ತಿದೆ ಎಂಬ ಆರೋಪ ಆಧಾರರಹಿತ. ಭಾರತಕ್ಕೆ ಈ ಭರವಸೆ ನೀಡುತ್ತಿದ್ದೇವೆ ಎಂದಿದ್ದಾನೆ. ಇತ್ತೀಚೆಗಷ್ಟೇ ಇದೇ ಮುಜಾಹಿದ್‌ ಈಚೆಗೆ ಪಾಕ್‌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ “ಪಾಕಿಸ್ಥಾನವು ನಮ್ಮ ಎರಡನೇ ಮನೆಯಿದ್ದಂತೆ’ ಎಂದು ಹೇಳಿದ್ದ.

Advertisement

Udayavani is now on Telegram. Click here to join our channel and stay updated with the latest news.

Next