Advertisement

ಹಸೆಮಣೆ ಏರಲು ಸಿದ್ದರಾದ ಕಬೀರ್ ಸಿಂಗ್ ದುಹಾನ್

02:58 PM Jun 18, 2023 | Team Udayavani |

ಕನ್ನಡದಲ್ಲಿ ಚಿತ್ರರಂಗದಲ್ಲಿ “ಪೈಲ್ವಾನ್‌’, “ಉದ್ಘರ್ಷ’, “ಹೆಬ್ಬುಲಿ’, “ಕಬ್ಜ’ ಹೀಗೆ ಹಲವು ಸಿನಿಮಾಗಳಲ್ಲಿ ಖಳ ನಟನಾಗಿ ಅಬ್ಬರಿಸಿರುವ ಬಹುಭಾಷಾ ನಟ ಕಬೀರ್‌ ಸಿಂಗ್‌ ದುಹಾನ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

Advertisement

ಇದೇ ಜೂನ್‌ 23ರಂದು ಕಬೀರ್‌ ಸಿಂಗ್‌ ದುಹಾನ್‌ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಸೀಮಾ ಚಹಾಲ್‌ ಎನ್ನುವ ಶಿಕ್ಷಕಿ ಯನ್ನು ವರಿಸಲಿದ್ದಾರೆ.

ಮೂರು ದಿನಗಳ ಕಾಲ ದೆಹಲಿಯ ಖಾಸಗಿ ರೆಸಾರ್ಟ್‌ ನಲ್ಲಿ ಕಬೀರ್‌ ಮತ್ತು ಸೀಮಾ ಚಹಾಲ್‌ ವಿವಾಹ ಮಹೋತ್ಸವ ನಡೆಯಲಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next