Advertisement

14ಕ್ಕೆ ವಡ್ಡಗೆರೆ ಕೆರೆಗೆ ಕಬಿನಿ ನೀರು

12:32 PM Dec 07, 2019 | Team Udayavani |

ಗುಂಡ್ಲುಪೇಟೆ: ಡಿ.14ರಂದು ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಕಬಿನಿ ನೀರು ಹರಿಸಲಾಗುವುದು ಎಂದು ಎಂದು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು.

Advertisement

ತಾಲೂಕಿನ ಕೊಡಸೋಗೆಯಲ್ಲಿ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಕಬಿನಿ ನದಿ ಮೂಲದಿಂದ ನೀರು ಹರಿಸುವ ಕಾರ್ಯವನ್ನು ಡಿ.14ರಂದು ಸಚಿವ ಸುರೇಶ್‌ ಕುಮಾರ್‌ ನೆರವೇರಿಸಲಿದ್ದಾರೆ. ಜಿಲ್ಲೆಯ ಕೆರೆಗಳಿಗೆ ನದಿ ಮೂಲದ ನೀರು ತುಂಬಿಸಲು ಕಾರಣರಾದ ಸಿಎಂ ಯಡಿಯೂರಪ್ಪ ಅವರಿಂದಲೇ ಚಾಲನೆ ಕೊಡಲು ಉದ್ದೇಶಿಸಿದ್ದರೂ, ದಿನಾಂಕಗಳು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಚಿವ ಸುರೇಶ್‌ ಕುಮಾರ್‌ ಅವರಿಂದ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ರೈತರ ಜನತೆಯ ಪರವಾಗಿ ಸನ್ಮಾನಿಸಲಾಗುವುದು ಎಂದರು.

ಪಾಪಿಗಳಿಗೆ ಎಚ್ಚರಿಕೆ ಗಂಟೆ: ಹೈದರಾಬಾದ್‌ ಮೂಲದ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ ಪೊಲೀಸ್‌ ಅಧಿಕಾರಿ ವಿಶ್ವನಾಥ್‌ ಸಜ್ಜನರ್‌ ದುರ್ಜನರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಇದು ಪಾಪಿಗಳಿಗೆ ಎಚ್ಚರಿಕೆಯ ಗಂಟೆ. ಹತ್ಯೆ ವಿಚಾರದಲ್ಲಿ ವಿಳಂಬವಿಲ್ಲದೆ ನ್ಯಾಯ ದೊರಕಿದಂತಾಗಿದ್ದು, ಅವರ ಕುಟುಂಬಕ್ಕೂ ಸ್ವಲ್ಪವಾದರೂ ಸಮಾಧಾನ ದೊರಕಿದೆ ಎಂದು ಹೇಳಿದರು.

ಈ ವೇಳೆ ಮುಖಂಡ ಕೊಡಸೋಗೆ ಶಿವಬಸಪ್ಪ, ಮಹದೇವ ಪ್ರಸಾದ್‌, ರಾಜು, ಮಲ್ಲಿಕಾರ್ಜುನ್‌, ಜಗದೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next