Advertisement

ಕಬಿನಿ ಪ್ರವಾಹಕ್ಕೆ ಸಿಲುಕಿದ ಬೊಕ್ಕಳ್ಳಿ

11:46 AM Aug 13, 2018 | |

ನಂಜನಗೂಡು: ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿಯ ಬೊಕ್ಕಳ್ಳಿ ಗ್ರಾಮ ಈ ಬಾರಿಯೂ ಕಪಿಲೆಯ ಪ್ರವಾಹಕ್ಕೆ ಸಿಲುಕಿದ್ದು, ಇದರಿಂದ ಇಲ್ಲಿನ 14ಕ್ಕೂ ಹೆಚ್ಚು ಕುಟುಂಬಗಳಿಗೆ‌ ಸರ್ಕಾರಿ ಶಾಲೆಯೇ ಆಶ್ರಯ ತಾಣವಾಗಿ ಪರಿಣಮಿಸಿದೆ.

Advertisement

ಗಂಜಿ ಕೇಂದ್ರ ಎಂದರೆ ಬರಲೊಪ್ಪದ ಇಲ್ಲಿನ ಜನತೆಗೆ ನಿರಾಶ್ರಿತರ ಆಶ್ರಯತಾಣವೆಂದು ಮರುನಾಮಕರಣ ಮಾಡಿದ ಉಪತಹಶೀಲ್ದಾರ್‌ ಬಾಲಸುಬ್ರಹ್ಮಣ್ಯಂ ಅವರೆಲ್ಲರ ಮನೆಗಳಿಗೆ ಬೀಗ ಹಾಕಿಸಿ, ಶಾಲೆಗೆ ಕರೆ ತಂದಿದ್ದಾರೆ.

ಇವರೆಲ್ಲರಿಗೆ ನಂಜನಗೂಡಿನ ದೇವಾಲಯದ ದಾಸೋಹ ಭವನದ ಊಟ ತರಿಸಿ ಅದರ ಉಸ್ತುವಾರಿಯನ್ನು ಹುಳಿಮಾವು ಪಿಡಿಒ ರಾಮಚಂದ್ರ ಸಿಬ್ಬಂದಿ ಮಹೇಶರಿಗೆ ವಸಿಹಿದ್ದಾರೆ ಇಲ್ಲಿ ಈಗ ಹದಿನಾಲ್ಕು ಕುಟುಂಬಗಳ ಸುಮಾರು 50ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ.

ಕಪಿಲೆಯ ಅಬ್ಬರಕ್ಕೆ ಕಾರಣ: ನಂಜನಗೂಡು ಕಪಿಲೆಯ ಈ ಅಬ್ಬರಕ್ಕೆ ಮರಳು ಮಾಫಿಯಾ ಹಾಗೂ ಮರಗಳ ಮಾರಣ ಹೋಮವೇ ಕಾರಣ ಎಂದು ತಾಲೂಕು ರೈತ ಸಂಘದ ಹೊರಾಟಗಾರ ಬೊಕ್ಕಳ್ಳಿ ನಂಜುಂಡಸ್ವಾಮಿ ಆಕ್ರೋಷ ವ್ಯಕ್ತ ಪಡಿಸಿದರು.

ಹಣದ ಧಾಹಕ್ಕಾಗಿ ಅಧಿಕಾರಿಗಳೊಡನೆ ಸೇರಿಕೊಂಡ ದುಷ್ಕರ್ಮಿಗಳು ನದಿ ಪಾತ್ರದೂದ್ದಕ್ಕೂ ಬೇಕಾಬಿಟ್ಟಿಯಾಗಿ ಮರಳು ಬಸಿದರು. ಇನ್ನೂ ನದಿಪಾತ್ರದ ದಂಡೆಯೂದ್ದಕ್ಕೂ ತಾನೇ ತಾನಾಗಿ ಬೆಳೆದು ನಿಂತ ಮರಗಳನ್ನು ಸಹ ಅಕ್ರಮವಾಗಿ ಕಡಿದು ಮಾರಿಕೊಂಡರು ಅವರ ಪಾಪದ ಫ‌ಲವನ್ನು ಇಂದು ನಾವು ಉಣ್ಣ ಬೇಕಿದೆ ಎಂದು ಹೇಳಿದರು.

Advertisement

ಪರಿಹಾರ ಅಗತ್ಯ: ಪ್ರಕೃತಿ ಕೋಪಕ್ಕೋಳಗಾಗಿ ರೈತರಿಗೆ ಸಾಕಷ್ಟು ಹಾನಿಯಾಗಿದೆ ನಾಟಿ. ಪೈರು ಹೊಟ್ಲುಗಾಗಿ ಕೃಕರಿಗೆ ಪ್ರತಿ ಎಕರೆಗೆ ಸಹಸ್ರಾರು ರೂ. ಖರ್ಚಾಗಿದ್ದು ಈಗ ಪ್ರವಾಹಕ್ಕೆ ಸಿಲುಕಿ ಅವುಗಳೆಲ್ಲ ನಷ್ಟವಾಗಿದ್ದು ಸರ್ಕಾರ ಪ್ರತಿಯೊಬ್ಬರಿಗೆ ಪರಿಹಾರದ ಹಣದೊಂದಿಗೆ ಉಚಿತವಾಗಿ ಗೊಬ್ಬರ ಬಿತ್ತನೆ ಬೀಜ ನೀಡಬೇಕು ಎಂದು ಒತ್ತಾಯಿಸಿದರು.

ಸುರಕ್ಷೆಗೆ ಕ್ರಮ: ನೀರಿನಿಂದಾವೃತ ವಾಗಿರುವ ಮನೆಗಳನ್ನು  ಪಟ್ಟಿ ಮಾಡಿ ಸ್ಥಳಾಂತರಿಸಬೇಕು ಇದಕ್ಕಾಗಿ ಗ್ರಾಪಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಈಗಾಗಲೇ ಅನೇಕ ಮನೆಗಳ ಒಳಗೆ ನೀರು ಪ್ರವೇಶಿಸಿದೆ. ನೀರಿನ ಹರಿವು ಕಡಿಮೆಯಾದ ಮೇಲೆ ಮನೆಗಳ ಸುರಕ್ಷತೆಗೆ ಕ್ರಮ ವಹಿಸಲಾಗುವುದು ಎಂದು ಉಪತಹಶೀಲ್ದಾರ್‌ ಬಾಲಸುಬ್ರಹ್ಮಣ್ಯಂ ತಿಳಿಸಿದರು.

ತಾಪಂ ಉಪಾದ್ಯಕ್ಷ ಗೊಂದರಾಜು ಮಾತನಾಡಿ, ಕಾಮಗಾರಿ ಮಾಡುವಾಗಲೇ ಸರಿಯಾಗಿ ಮಾಡಿ ಎಂದರೆ ಮಾಡಿಲ್ಲ ಈ ನಮ್ಮೂರ ಹೆಸರಿನ ಸೇತುವೆ ಊರ ಬಾಗಿಲನಲ್ಲೆ ಬಿರುಕು ಬಿಟ್ಟಿದೆ ಇದು ಕಳಪೆಯಲ್ಲದೆ ಬೇರಿನ್ನೇನು ಎಂದುಆಕ್ರೋಶ ವ್ಯಕ್ತ ಪಡಿಸಿದರು

ಕೇವಲ 80,000 ಕ್ಯೂಸೆಕ್ಸ್‌ ನೀರು ಎಂದ ಅಧಿಕಾರಿಗಳನ್ನು ಶುಕ್ರವಾರ ಪ್ರವಾಸಿ ಮಂದಿರದ ಆವರಣ ಪ್ರವೇಶಿಸದ ನೀರು ಶನಿವಾರ ಸುತ್ತುವರಿದಿರುವದು ಶಿನಿವಾರ ಚಾಮರಾಜನಗರದ ರಸ್ತೆಗೆ ಮುತ್ತಿಕ್ಕುತ್ತಿರುವ ನೀರಿನ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಾಗದೆ ಮೌನವಹಿಸಿದರು.

ದುಸ್ಸಾಹಸಕ್ಕಿಳಿದ ಮಕ್ಕಳು ಬೊಕ್ಕಳ್ಳಿ ಗ್ರಾಮದ ಮಕ್ಕಳು ಹಿರಿಯರ ಕಣ್ತಪ್ಪಿಸಿ ಇಲ್ಲಿನ ಮಕ್ಕಳು ಪ್ರವಾಹದಲ್ಲಿ ತೆಪ್ಪದ ಯಾತ್ರೆ ನಡೆಸಿ ಪೋಷಕರಲ್ಲಿ ಆಂತ ಮೂಡಿಸಿದರೆ, ಕೆಲ ಯುವಕರು ಕಪಿಲೆಯ ನೆರೆಯಲ್ಲಿ  ಮೀನು ಹಿಡಿದು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next