ಚೆನ್ನೈ: ಬಂಗಾಲಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಿರು ವ ಳ್ಳೂರು ಜಿಲ್ಲೆ ಯಲ್ಲಿ ಒಂದೇ ದಿನ 30.2 ಸೆಂ.ಮೀ. ಮಳೆಯಾಗಿದೆ.
ಯಾವುದೇ ನಗರ ಪ್ರದೇಶವನ್ನು ನಾಶ ಮಾಡಿ ಬಿಡುವ ಸಾಮರ್ಥ್ಯವಿರುವಷ್ಟು ಮಳೆಯಾ ದರೂ ಜಿಲ್ಲೆಯಲ್ಲಿ ತೆರೆದ ಪ್ರದೇಶಗಳು ಹಾಗೂ ಚೋಳಾ ವರಂ ಸೇರಿದಂತೆ ಹಲವು ಜಲಾಶಯವಿರುವ ಕಾರಣ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಜಿಲ್ಲೆಯ ರೆಡ್ ಹಿಲ್ಸ್ ಲೇಕ್ ಪ್ರದೇಶದಲ್ಲಿ 24 ಗಂಟೆಯಲ್ಲಿ 27.2 ಸೆ.ಮೀ. ಮಳೆಯಾಗಿದ್ದು, 24 ಗಂಟೆ ಗಳ ಅವಧಿಯಲ್ಲಿ 25.5 ಸೆ.ಮೀ ಮಳೆಯಾಗಿದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರದ ದತ್ತಾಂಶದಲ್ಲಿ ತಿಳಿಸಲಾಗಿದೆ.
ಇದಲ್ಲದೇ, ಪೊನ್ನೇರಿ, ತಾಮರೈಪಾಕ್ಕಂ, ಗುಮ್ಮಿಡಿ ಪೊಂಡಿ, ಉತ್ತುಕೊಟ್ಟೈ ರೈಲು ನಿಲ್ದಾಣಗಳ ಹಳಿಗಳು ಸೇರಿ ದಂತೆ ಜಿಲ್ಲೆಯ ಹಲವು ರೈಲು ನಿಲ್ದಾಣಗಳು ಜಲಾ ವೃತಗೊಂಡ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಳಿ ಸಲಾಗಿದೆ. ಚೆನ್ನೈಯಲ್ಲೂ ಭಾರೀ ಮಳೆಯಾದ ಕಾರಣ ಹಳಿಗಳಲ್ಲಿ ನೀರು ತುಂಬಿದ್ದು, ಚೆನ್ನೈ ಬೆಂಗಳೂರು, ಚೆನ್ನೈ ಮೈಸೂರು, ಮಾಲ್ಗುಡಿ ಎಕ್ಸ್‌ಪ್ರೆಸ್ ಸೇರಿದಂತೆ ನೈಋತ್ಯ ರೈಲ್ವೇಯಿಂದ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಅಣೆಕಟ್ಟುಗಳು ಭರ್ತಿ: ಇತ್ತ ಭಾರೀ ಮಳೆಯಿಂದಾಗಿ ಜಲಾಶಯಗಳು ತ್ವರಿತವಾಗಿ ಭರ್ತಿಯಾಗುತ್ತಿದ್ದು ಪೊಂಡಿ, ಚೋಳಾವರಂ, ಕಣ್ಣನ್‌ಕೊಟ್ಟೈ, ಥೆರ್ವೋಯ್ ಕಂಡಿಗೈ, ಚೆಂಬರಂಬಾಕ್ಕಂ, ವೀರನಂ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಸ್ಥಿರವಾಗಿ ಹೆಚ್ಚುತ್ತಲೇ ಇದೆ ಎಂದು ಜಲ ಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ. ಗುರುವಾರವೂ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ