ಚನ್ನರಾಯಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಬಸವೇಶ್ವರಸ್ವಾಮಿ ಯ 91ನೇ ಬೃಹತ್ ದನಗಳ ಜಾತ್ರಾ ಮಹೋತ್ಸವಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಧರ್ಮ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವದ ಹಿನ್ನೆಲೆ ಕಬ್ಬಳಿ ಗ್ರಾಮದ ಬಸವೇಶ್ವರ ಸ್ವಾಮಿ ಮೆರೆವ ವಿಗ್ರಹ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು, ಬಾಳೆಕಂದು, ತಳಿರು- ತೋರಣ ಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 7 ಗಂಟೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಚುಂಚಶ್ರೀ ಗಳನ್ನು ಭಕ್ತರು ಪಾದಪೂಜೆ ಮಾಡಿ ಸ್ವಾಗತಿಸಿದರು.
ಅಡ್ಡಪಲ್ಲಕ್ಕಿ ಮೆರವಣಿಗೆ: ಮೆರೆವ ವಿಗ್ರಹ ದೇಗು ಲದ ಗರ್ಭಗುಡಿಯಲ್ಲಿ ವಿವಿಧ ಬಗೆಯ ಪುಷ್ಪ ಹಾಗೂ ಒಡವೆ-ವಸ್ತ್ರಗಳಿಂದ ಸಿಂಗರಿಸಲಾಗಿದ್ದು, ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ಗ್ರಾಮದ ಮಧ್ಯದಲ್ಲಿರುವ ಉತ್ಸವ ಮೂರ್ತಿ ದೇಗುಲದಿಂದ ಬಸವೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ಮಂಗಳವಾದ್ಯದೊಂದಿಗೆ ಆರಂಭ ಗೊಂಡು ಗ್ರಾಮದ ರಾಜಬೀದಿಯಲ್ಲಿ ವೈಭವದಿಂದ ಸಾಗಿತು.
ಅಲ್ಲಿಂದ ಬೋರೆ ಮೇಲಿನ ಶ್ರೀ ಕ್ಷೇತ್ರದ ಮೂಲ ಸನ್ನಿಧಿಗೆ ಆಗಮಿಸಿತು. ಧರ್ಮ ಧ್ವಜಾರೋಹಣ: ಶ್ರೀಕ್ಷೇತ್ರದ ಆವರಣ ದಲ್ಲಿ ಶ್ರೀಗಳು ಧರ್ಮ ಧ್ವಜಾರೋಹಣ ನೆರವೇರಿಸಿ ಸನ್ನಿಧಿಯಲ್ಲಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ದರು, ದೇವಾಲದಯ ಮುಂಭಾಗದಲ್ಲಿ ಕಲ್ಯಾಣಿ ಯಲ್ಲಿ ಗಂಗಾಪೂಜೆ ನೆರವೇರಿಸಿದ ಮೇಲೆ, ದೇವಾ ಲಯದ ಆವರಣದಲ್ಲಿ ಗೋವಿನ ಪೂಜೆ ಮಾಡಲಾಯಿತು.
ವಿವಿಧ ಪೂಜೆ: ಬಸವೇಶ್ವರ ಮೂಲ ವಿಗ್ರಹ ಹಾಗೂ ಗರ್ಭಗುಡಿಯ ಹಿಂಭಾಗದಲ್ಲಿನ ವಿಗ್ರಹಕ್ಕೆ ಜಲಾಭಿಷೆಕ, ಪಂಚಾಮೃತ ಅಭಿಷೇಕ, ರುದ್ರಾಭಿ ಷೇಕ, ಪುಷ್ಪಾರ್ಚನೆ, ಅರಿಶಿನ ಕುಂಕು ಮಾರ್ಚನೆ ಯನ್ನು ನಿರ್ಮಲಾನಂದನಾಥ ಶ್ರೀಗಳು ನೆರೆವೇರಿಸಿದರು.
ಪೂಜೆಯನ್ನು ನೆರವೇರಿಸಿ ಮಹಾ ಮಂಗ ಳಾರಿ ಮಾಡಿ ಭಕ್ತರಿಗೆ ತೀರ್ಥ ನೀಡಿದರು. ಈ ವೇಳೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವಟು ಗಳಿಂದ ಮಂತ್ರಪಠನೆ ನೆರವೇರಿತು. ಹಾಸನ ಶಾಖಾಮಠದ ಶಂಭುನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಮಠದ ಶಿವ ಪುತ್ರ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ತಾಪಂ ಮಾಜಿ ಸದಸ್ಯ ರಾದ ಎಂ.ಆರ್. ವಾಸು, ಪುಟ್ಟರಾಜು, ಪ್ರಮೀಳಾ ಪ್ರಕಾಶ್, ಕಬ್ಬಳಿ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.