Advertisement
ಮಂಗಳೂರು ವಿವಿ ತಂಡವು ರಾಜಸ್ಥಾನದ ಕೋಟ ವಿವಿ ತಂಡವನ್ನು 46-31 ಅಂಕಗಳಿಂದ ಸೋಲುಣಿಸಿತು. ಇನ್ನುಳಿದ ಕ್ವಾರ್ಟರ್ ಪೈನಲ್ ಪಂದ್ಯಗಳಲ್ಲಿ ಪಂಜಾಬ್‌ನ ಗುರುಕಾಶಿ ವಿವಿ ತಂಡವನ್ನು ಹರ್ಯಾದ ಚೌಧರಿ ಬನ್ಸಿಲಾಲ್ ವಿವಿ ತಂಡ 35-39 ಅಂಕಗಳಿಂದ ಸೋಲಿಸಿದೆ. ಔರಂಗಬಾದ್‌ನ ಡಾ| ಬಿಎಎಂ ವಿವಿ ಮತ್ತು ಚೆನ್ನೈನ ವೇಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡದ ನಡುವೆ ಆರಂಭದಲ್ಲಿ ಸಮಬಲದ ಹೋರಾಟ (35-35) ನಡೆದು, ಹೆಚ್ಚುವರಿ ಅವಧಿಯಲ್ಲಿ ವೆಲ್ಸ್ ತಂಡ 7 (7-5) ಅಂಕಗಳೊಂದಿಗೆ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು. ಹರಿಯಾಣದ ಮಹರ್ಷಿ ದಯಾನಂದ ವಿವಿ ತಂಡವು ಎಸ್‌ಜೆಐಟಿ ವಿವಿ ತಂಡವನ್ನು 43-31 ಅಂಕಗಳಿಂದ ಸೋಲಿಸಿದೆ.
ನ. 26ರಂದು ಮಂಗಳೂರು ವಿ.ವಿ. ಮತ್ತು ಹರ್ಯಾಣದ ಚೌಧರಿ ಬನ್ಸಿಲಾಲ್ ವಿವಿ ಹಾಗೂ ಚೆನ್ನೈನ ವೇಲ್ಸ್ ಮತ್ತು ಹರ್ಯಾಣದ ಮಹರ್ಷಿ ದಯಾನಂದ ವಿವಿ ತಂಡಗಳ ನಡುವೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾಟ ನಡೆಯಲಿದೆ. ಇದರ ಜತೆಗೆ ಪ್ರಶಸ್ತಿ ಪ್ರದಾನ, ಸಮಾರೋಪ ನಡೆಯಲಿದೆ.