Advertisement

Kaatera Review: ಕುಲುಮೆಯಲ್ಲಿ ಕಾದ ಕಾಟೇರ

11:44 AM Jan 19, 2024 | Team Udayavani |

ಜಾತಿ ಪದ್ಧತಿ, ಮರ್ಯಾದ ಹತ್ಯೆ, ಗೇಣಿದಾರಿಕೆ, ಜೀತಪದ್ದತಿ, ಬಂಡವಾಳ ಶಾಹಿಯ ದೌರ್ಜನ್ಯ ಎಲ್ಲ ಕಾಲಕ್ಕೂ ಪ್ರಸುತ್ತವಾಗಿರುತ್ತದೆ, ಆದರೆ ಬೇರೆ ಬೇರೆ ರೂಪದಲ್ಲಿ. ಈ ಪ್ರಮುಖ ವಿಷಯಗಳನ್ನು ಆಧರಿಸಿ ರೂಪಗೊಂಡ ಚಿತ್ರವೇ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕಾಟೇರ’.

Advertisement

ದರ್ಶನ್‌ ಕುಲುಮೆಯಲ್ಲಿ ಕಬ್ಬಿಣ ಬಡಿಯುವ ಕೆಲಸ ಮಾಡುವ ಕಾಟೇರ ಸಮಾಜದಲ್ಲಿನ ರೈತರ ಮೇಲಿನ ದೌರ್ಜನ್ಯ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದನ್ನು ತಮ್ಮ ಅದ್ಭುತ ನಟೆನೆಯ ಮೂಲಕ ಪ್ರೇಕ್ಷಕರಿಗೆ ಹಬ್ಬದೂಟವನ್ನು ಬಡಿಸಿದ್ದಾರೆ.

ದರ್ಶನ ಮೊದಲಿನಿಂದಲೂ ಸಾಹಸ ದೃಶ್ಯಗಳಿಗೆ ಹೆಸರುವಾಸಿ. ಇದೇ ಸಂಪ್ರದಾಯ ಕಾಟೇರ ಚಿತ್ರದ ಮೂಲಕ ಉತ್ತುಂಗಕ್ಕೇರುವಂತೆ ಮಾಡಿದ್ದಾರೆ ನಿರ್ದೇಶಕ ತರುಣ ಸುಧೀರ್‌. 70ರ ದಶಕದ ಕಥೆಗೆ ಆಧುನಿಕ ರೂಪ ಕೊಟ್ಟು ಭರ್ಜರಿಯಾಗಿ ಮೂಡಿ ಬರುವಂತೆ ನಿರ್ದೇಶಿಸಿದ್ದಾರೆ. 3 ಗಂಟೆಯ ಚಿತ್ರ ಕ್ಷಣವೂ ಪ್ರೇಕ್ಷಕರರಿಗೆ ಕಣ್ಣು ಮುಚ್ಚಲು ಬಿಡುವುದಿಲ್ಲ. ಮಾರಿಯನ್ನು ಊರಿಗೆ ತರುವ ದೃಶ್ಯಗಳು, ಬಾವಿಯಲ್ಲಿನ ಸಾಹಸ ದೃಶ್ಯಗಳು, ದರ್ಶನ್‌ ಮತ್ತು ಆರಾಧನಾರ ನಡುವಿನ ಸುಮಧುರ ಪ್ರೀತಿಯನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ.

ಕಾಟೇರ ಚಿತ್ರವನ್ನು ದರ್ಶನ ತಮ್ಮ ಅಭಿನಯದ ಮೂಲಕ ಹೊತ್ತು ಸಾಗುತ್ತಾರೆ. ನಿಜ ಘಟನೆಗಳಿಗೆ  ಸಿನೆಮಾದ ರೂಪ ನೀಡಿರುವುದು ಉತ್ತಮ ಪ್ರಯತ್ನವಾಗಿದೆ. ಚಿತ್ರದ ನಾಯಕಿ ಮಾಲಾಶ್ರೀಯವರ ಮಗಳು ಆರಾಧನಾರವರ ನಟನೆ ತುಂಬಾ ಪ್ರಬುದ್ಧವಾಗಿದ್ದು, ಮೊದಲ ಸಿನೆಮಾದಲ್ಲಿಯೇ ಭರವಸೆ ಮೂಡಿಸಿದ್ದಾರೆ.

ಹಿರಿಯ ಕಲಾವಿದರಾದ ಶ್ರುತಿ, ಕುಮಾರ್‌ಗೊàವಿಂದ್‌, ವೈಜ್ಯನಾಥ್‌ ಬಿರಾದರರ ಅಭಿನಯ ತುಂಬಾ ಮನೋಜ್ಞವಾಗಿದ್ದು ತಮ್ಮ ಪ್ರತಿಭೆಗೆ ತಕ್ಕಂತೆ ನಟನೆ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಖಳನಟ ಪಾತ್ರಧಾರಿಗಳಾದ ಹಿರಿಯ ನಟ ವಿನೋದ್‌ ಆಳ್ವ ಮತ್ತು ತೆಲುಗಿನ ಜಗಪತಿ ಬಾಬರವರ ನಟನೆ ದರ್ಶನರವರಿಗೆ ಸರಿ ಸಮನಾಗಿದ್ದು ಇಬ್ಬರು ಜಮೀನಾªರರ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಸಂಗೀತ ಕೇಳಲು ಇಂಪಾಗಿದ್ದು, ಹರಿಕೃಷ್ಣರ ಹಾಡು, ಹಿನ್ನೆಲೆ ಸಂಗೀತ ಹೊಸದಾಗಿದೆ.

Advertisement

ಕಾಟೇರ ದರ್ಶನ್‌ ಸಿನಿ ಪಯಣದ ಒಂದು ಉತ್ತಮ ಚಿತ್ರ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

-ರಾಸುಮ ಭಟ್‌

ಕುವೆಂಪು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next