ನಾಯಕ ಹಿಂದೂ, ನಾಯಕಿ ಮುಸ್ಲಿಂ.. ಇವರಿಬ್ಬರ ನಡುವೆ ಪ್ರೇಮಾಂಕುರ.. ಪ್ರೀತಿಯ ಅಮಲಿನಲ್ಲಿ ತೇಲಾಡುತ್ತಿರುವ ಜೋಡಿಗೆ ಅಡ್ಡ ಬರುವ ಧರ್ಮ, ಅಲ್ಲಿಂದ “ಯುದ್ಧ ಶುರು’… ಇಂತಹ “ಸೂಕ್ಷ್ಮ’ ಅಂಶ ಗಳನ್ನು ಒಳಗೊಂಡಿರುವ ಕಥೆಯ ಜೊತೆಗೆ ಒಂದೊಳ್ಳೆಯ ಸಂದೇಶ ದೊಂದಿಗೆ ತೆರೆಗೆ ಬಂದಿರುವ ಚಿತ್ರ “ಕಾಗದ’. ಇಡೀ ಸಿನಿಮಾದ ಮುಖ್ಯ ಉದ್ದೇಶ ಪ್ರೀತಿ ಹಾಗೂ ಮಾನವೀಯತೆ. ಅಂತಿಮವಾಗಿ ಮನುಷ್ಯನಲ್ಲಿ ಇರಬೇಕಾದ ಗುಣ ಮನುಷ್ಯತೆ ಹೊರತು ದ್ವೇಷವಲ್ಲ. ಜಾತಿ-ಧರ್ಮದ ಸಂಘರ್ಷಕ್ಕಿಂತ ಪ್ರೀತಿ, ಸ್ನೇಹದ ಆಲಿಂಗನ ಮುಖ್ಯ ಎಂಬ ಅಂಶದೊಂದಿಗೆ ಮೂಡಿ ಬಂದಿರುವ ಚಿತ್ರವಿದು.
ಇದೊಂದು ಟೀನೇಜ್ ಲವ್‌ಸ್ಟೋರಿ. ಹಾಗಾಗಿ, ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿರುವ ಬಿಲ್ಡಪ್‌ಗ್ಳಿಂದ ಚಿತ್ರ ಮುಕ್ತ. ನಮ್ಮ ಸುತ್ತಲ ಪರಿಸರದಲ್ಲೇ ನಡೆಯುವ ಕಥೆಯಂತೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಥೆಯ ಬಗ್ಗೆ ಹೇಳುವುದಾದರೆ ಆಟ, ಪಾಠ ಎರಡರಲ್ಲೂ ಮುಂದಿರುವ ನಾಯಕ ಶಿವುಗೆ, ಆಯೇಷಾಳೊಂದಿಗೆ ಪ್ರೇಮಾಂಕುರ. ಈ ಮುಗ್ಧ ಜೋಡಿಯ ನೋಟ, ಭೇಟಿ, ಪ್ರೀತಿಯ ಸೇತುವೆಯಾಗುವ ಕಾಗದ ಒಂದು ಕಡೆಯಾದರೆ, ಊರ ಮಂದಿಯ ಪೂಜೆ, ಜಾತ್ರೆಯ ಚರ್ಚೆ.. ಈ ನಡುವೆಯೇ ಊರಲ್ಲೊಂದು ನಮಾಜ್‌ಗೆ ಮಸೀದಿ ಕಟ್ಟಿಸಬೇಕೆಂಬ ಕನಸಿನ ಮೌಳಿ.. ಹೀಗೆ ಸಾಗುವ ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ.
ಮುಖ್ಯವಾಗಿ ಈ ಸಿನಿಮಾ ಭೈರವಕೋಟೆ ಹಾಗೂ ಕೆಂಪ್ನಳ್ಳಿ ಎಂಬ ಎರಡು ಊರುಗಳ ಮಧ್ಯೆ ನಡೆಯುವ ಕಥೆ ಹೊಂದಿದೆ. ಹಾಗಾಗಿ, ಚಿತ್ರದಲ್ಲಿ ಒಂದಷ್ಟು ಗ್ರಾಮೀಣ ಸೊಗಡನ್ನು ನೋಡಬಹುದು.
ಒಂದು ಪ್ರಯತ್ನವಾಗಿ “ಕಾಗದ’ ಮೆಚ್ಚುಗೆ ಪಡೆಯುವ ಸಿನಿಮಾ. ಸಾಮಾನ್ಯವಾಗಿ ಹಿಂದೂ- ಮುಸ್ಲಿಂ ಲವ್‌ಸ್ಟೋರಿ ಕಥೆ ಮಾಡುವಾಗ ಇರುವ ರೆಗ್ಯುಲರ್ ಅಂಶಗಳನ್ನು ಬಿಟ್ಟು ಒಂದಷ್ಟು ಹೊಸದನ್ನು ಹೇಳಲು ತಂಡ ಪ್ರಯತ್ನಿಸಿದೆ.
ನಾಯಕ ಆದಿತ್ಯ ಭರವಸೆ ಮೂಡಿಸಿದ್ದಾರೆ. ಮುಗ್ಧ ಹುಡುಗನ ಪ್ರೀತಿ, ಈ ನಡುವಿನ ಗೊಂದಲ, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ರೀತಿ.. ಇಂತಹ ಸನ್ನಿವೇಶಗಳಲ್ಲಿ ಆದಿತ್ಯ ಗಮನ ಸೆಳೆಯುತ್ತಾರೆ. ನಾಯಕಿ ಅಂಕಿತಾ ಜಯರಾಂ ಭವಿಷ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕಿ ಯಾಗುವ ಲಕ್ಷಣ ತೋರಿದ್ದಾರೆ. ಉಳಿ ದಂತೆ ಬಲರಾಜವಾಡಿ ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು, ನೇಹಾ ಪಾಟೀಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಆರ್.ಪಿ