Advertisement
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತ ಪ್ರಗತಿ ಪರಿಶೀಲಿ ಸಭೆಯಲ್ಲಿ ಮಾತನಾಡಿದರು. ಹಿಂದಿನ ಶಾಸಕರು ಹಾಗೂ ಅಧಿಕಾರಿಗಳು ಸೇರಿ ತಾಲ್ಲೂಕಿನಲ್ಲಿ ಏನೆಲ್ಲಾ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಮಾಹಿತಿ ನನಗಿದೆ, ವಿವಿಧ ಇಲಾಖೆಗಳ ಸೌಲಭ್ಯಗಳ ಹಂಚಿಕೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರೆ ಹಾವಳಿಗೆ ತುತ್ತಾಗಿ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ವಿಷಯದಲ್ಲಿ ಅರ್ಹ ಫಲಾನುಭವಿಗಳನ್ನು ವಂಚಿಸಿ ಕೇವಲ ತಮ್ಮ ಪಕ್ಷ ಬೆಂಬಲಿತರು ಎಂಬ ಕಾರಣಕ್ಕೆ ಮಾಜಿ ಶಾಸಕ ಹೇಳಿದವರಿಗೆ ಹಾಗೂ ಯಾವುದೇ ಮನೆ ಕಳೆದುಕೊಳ್ಳದವರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವೈಜ್ಞಾನಿಕವಾಗಿ ಮನೆಗಳಿಗೆ ಪರಿಹಾರ ನೀಡಲಾಗಿದ್ದು, ಇದನ್ನು ಮರು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಅರ್ಹರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು .
ಸಲಹೆ ಎಂದು ಬೇಕಾದರೂ ಸ್ವೀಕರಿಸಿ ಇಲ್ಲ ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಿ ಒಟ್ಟಿನಲ್ಲಿ ಜನರ ಕೆಲಸ ಮಾಡಬೇಕು ಇದಕ್ಕೆ ಒಪ್ಪದವರು ತಾವಾಗಿಯೇ ತಾಲ್ಲೂಕನ್ನು ಬಿಟ್ಟು ಹೊರಡುವಂತೆ ತಿಳಿಸಿದರು. ಪಟ್ಟಣದ ಪುರಸಭೆಗೆ ಬರುವ ಸಾರ್ವಜನಿಕರ ಜೇಬು ಖಾಲಿ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ದುಡ್ಡಿಲ್ಲದೆ ಇಲ್ಲಿ ಯಾವುದೇ ಕೆಲಸ ಆಗುವುದಿಲ್ಲ ಎಂಬ ಧೋರಣೆ ಜನರಲ್ಲಿದೆ ಇದು ಬದಲಾಗಬೇಕು ಇಲ್ಲದಿದ್ದರೆ ಅಂಥವರಿಗೆ ಬುದ್ದಿ ಕಲಿಸಲಾಗುವುದು. ಕಚೇರಿಗಳಲ್ಲಿ ಅಧಿಕಾರಿಗಳು ಮಾಡುವ ಕೆಲಸಗಳು ನನಗೇನು ಗೊತ್ತಾಗಲ್ಲ ಎಂದು ಲಂಚಕ್ಕೆ ಕೈಚಾಚ ಬೇಡಿ, ಮುಂದೆ ಒಂದು ಹಿಂದೆ ಒಂದು ಮಾಡುವ ಸ್ವಭಾವ ನನ್ನದಲ್ಲ ಸದಾ ಜನರ ಪರ ಕೆಲಸ ಮಾಡಿ, ನೀವು ಜನರ ಕೆಲಸವನ್ನು ಸರಿಯಾಗಿ ಮಾಡಿದರೆ ನನಗೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ ಕಡಿಮೆಯಾಗುತ್ತದೆ, ಒಳ್ಳೆಯ ಆಡಳಿತಕ್ಕೆ ನೀವು ಸಿದ್ದರಾಗುವ ಮೂಲಕ ಜನರ ಕೆಲಸ ಮಾಡಿ.
Related Articles
Advertisement
ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಣ್ಣ, ಶಿರಸ್ತೇದಾರ್ ನಂದಕುಮಾರ್, ಟ್ರೀಜಾ ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್, ಆರ್ಎಫ್ಓ ರತನ್ ಕುಮಾರ್, ಎಡಿಎಲ್ಆರ್ ಮುನಿಯಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಸಿದ್ದೇಗೌಡ, ಧರ್ಮರಾಜ್, ಡಾ.ಶರತ್ ಬಾಬು, ಮಧು, ಪುಷ್ಪಲತಾ ಸೇರಿದಂತೆ ಮತ್ತಿತರರು ಹಾಜರಿದ್ದರು.