Advertisement

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

12:31 AM May 10, 2024 | Team Udayavani |

ಬೆಳ್ತಂಗಡಿ: ತನ್ನನ್ನು ನಂಬಿ ಬಂದವರಿಗೆ ನ್ಯಾಯಕೊಡಿಸಿಯೇ ಸಿದ್ಧ ಎಂಬ ಜಾಯಮಾನದಿಂದಲೇ ಸಾವಿರಾರು ಅಭಿಮಾನಿ ವರ್ಗವನ್ನು ಸಂಪಾದಿಸಿದ, ಬೆಳ್ತಂಗಡಿ ಕಂಡ ಅಪ್ರತಿಮ ರಾಜಕಾರಣಿ, ಹೃದಯ ಶ್ರೀಮಂತಿಕೆಯ ಕೆ. ವಸಂತ ಬಂಗೇರ ಕಾಲದಲ್ಲಿ ಲೀನರಾಗಿದ್ದಾರೆ. ಮೇ 9ರಂದು ಅವರ ಹುಟ್ಟೂರು ಕುವೆಟ್ಟು ಗ್ರಾಮದ ಕೇದೆಯ ಮಣ್ಣಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.

Advertisement

ಮೇ 9ರಂದು ಮುಂಜಾನೆ 3.30ಕ್ಕೆ ಪಾರ್ಥಿವ ಶರೀರವು ಅವರ ಬೆಳ್ತಂಗಡಿ ಹಳೆಕೋಟೆ ಮನೆಗೆ ತರಲಾಯಿತು. ಸಕಲ ವಿಧಿ ನೆರವೇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಬೆಳಗ್ಗೆ 8.45ಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸಾರ್ವಜನಿಕ ದರ್ಶನಕ್ಕಾಗಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣಕ್ಕೆ ತರಲಾಯಿತು. ಅಲ್ಲಿ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ಸರಕಾರಿ ಗೌರವ
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಎಸ್‌ಪಿ ಸಿ.ಬಿ. ರಿಷ್ಯಂತ್‌, ಪುತ್ತೂರು ಎಸಿ ಜುಬಿನ್‌ ಮೊಹಪಾತ್ರ, ತಹಶೀಲ್ದಾರ್‌ ಪೃಥ್ವಿ ಸಾನಿಕಮ್‌, ಶಾಸಕ ಹರೀಶ್‌ ಪೂಂಜ, ವಿ.ಪ.ಸದಸ್ಯರಾದ ಕೆ. ಹರೀಶ್‌ ಕುಮಾರ್‌, ಕೆ. ಪ್ರತಾಪಸಿಂಹ ನಾಯಕ್‌, ವೃತ್ತನಿರೀಕ್ಷಕ ಸುಬ್ಟಾಪುರ್‌ ಮಠ ಸಮ್ಮುಖದಲ್ಲಿ ಮಧ್ಯಾಹ್ನ 12.45ರ ವೇಳೆ 3 ಸುತ್ತು ಗುಂಡು ಹಾರಿಸುವ ಮೂಲಕ ಸರಕಾರಿ ಗೌರವ ಸಲ್ಲಿಸಲಾಯಿತು.

ಕಿರಿಯ ಪುತ್ರಿಯಿಂದ ಅಗ್ನಿಸ್ಪರ್ಶ
ಮಧ್ಯಾಹ್ನ 1.30ರ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಗುರುವಾಯನಕೆರೆ ಮಾರ್ಗವಾಗಿ ಕುವೆಟ್ಟು ಗ್ರಾಮದ ಮದ್ದಡ್ಕ ಕೇದೆ ಹೊಸಮನೆಗೆ ತರಲಾಯಿತು. ಬಿಲ್ಲವ ಸಮುದಾಯದ ಪದ್ಧತಿಯಂತೆ ಸಂಜೆ 3.45ರಿಂದ 4.15ರ ಅವಧಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕಿರಿಯ ಪುತ್ರಿ ಬಿನುತಾ ಅಗ್ನಿ ಸ್ಪರ್ಶಿಸಿದರು.

ಅಂಗಡಿ ಮುಂಗಟ್ಟು ಬಂದ್‌
ಬೆಳ್ತಂಗಡಿ ಹಾಗೂ ಮದ್ದಡ್ಕ ಪೇಟೆಯ ವರ್ತಕರು ಅಂಗಡಿಗಳನ್ನು ಮುಚ್ಚಿ ಗೌರವ ಸಲ್ಲಿಸಿದರು. ಪಕ್ಷಾತೀ ತವಾಗಿ ರಾಜಕೀಯ ನಾಯಕರು ಸೇರಿದ್ದರು.

Advertisement

ಕೋಟ ಶ್ರೀನಿವಾಸ ಪೂಜಾರಿ, ಪದ್ಮರಾಜ್‌ ಆರ್‌. ಪೂಜಾರಿ, ಕೆ. ಗಂಗಾಧರ ಗೌಡ, ಅಭಯಚಂದ್ರ ಜೈನ್‌, ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಕೃಷ್ಣ ಜೆ. ಪಾಲೆಮಾರ್‌, ಜೆ.ಆರ್‌.ಲೋಬೋ, ಉಮನಾಥ್‌ ಕೋಟ್ಯಾನ್‌, ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ರುಕ್ಮಯ ಪೂಜಾರಿ, ಬಂಗೇರರ ಸಹೋದರ ಕೆ. ಪ್ರಭಾಕರ ಬಂಗೇರ, ಐವನ್‌ ಡಿ’ಸೋಜಾ, ಸೋಲೂರು ಮಠದ ಪೀಠಾಧೀಶ ಬಲೊÂಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿ, ಕಲ್ಲಡ್ಕ ಪ್ರಭಾಕರ್‌ ಭಟ್‌, ಬೆಳ್ತಂಗಡಿ ಬಿಷಪ್‌ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್‌. ಸತೀಶ್ಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸಹಿತ ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ರಕ್ಷಿತ್‌ ಶಿವರಾಂ, ರಂಜನ್‌ ಜಿ. ಗೌಡ, ಅಭಿನಂದನ್‌ ಹರೀಶ್‌ ಕುಮಾರ್‌, ಸಿಯೋನ್‌ ಆಶ್ರಮದ ಆಡಳಿತಾಧಿಕಾರಿ ಯು.ಸಿ. ಪೌಲೋಸ್‌, ಕೆ. ವಸಂತ ಸಾಲಿಯಾನ್‌, ಕಸಾಪ ಅಧ್ಯಕ್ಷ ಯದುಪತಿ ಗೌಡ, ಸೋಮನಾಥ್‌ ನಾಯಕ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ಮಹೇಶ್‌ ಶೆಟ್ಟಿ ತಿಮರೊಡಿ, ಸತ್ಯಜಿತ್‌ ಸುರತ್ಕಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next