Advertisement
ವಿಧಾನಸೌಧದಲ್ಲಿ ಗುರುವಾರ ಕೊರೊನಾ ನಿರ್ವಹಣೆ ಕುರಿತ ತಜ್ಞರ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕೊರೊನಾ ಸಾವಿನ ಪ್ರಮಾಣವೂ ಶೇ.0.05 ರಷ್ಟಿದ್ದು ನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ 2500ರ ಗಡಿ ತಲುಪಿದ್ದು ರಾಜ್ಯದ ಎಲ್ಲ ಭಾಗಗಳಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಿದರು.
Related Articles
Advertisement
ಸೆರೋ ಸಮೀಕ್ಷೆಯಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ, ರೋಗ ಲಕ್ಷಣ ಇಲ್ಲದವರ ಸಂಖ್ಯೆ ಹೆಚ್ಚಳ, ಶೇ.16 ರಷ್ಟು ಜನರಲ್ಲಿ ಕೊರೊನಾ ತಡೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವ ಅಂಶ ಪತ್ತೆಯಾಗಿತ್ತು ಎಂದು ತಿಳಿಸಿದರು.
ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ತಜ್ಞರು ನೀಡಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿ ಪಾಲಿಸುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ತಿಳಿಸಿದರು.
ತಪಾಸಣೆಇತ್ತೀಚೆಗೆ ಉಪ ಚುನಾವಣೆ ನಡೆದ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಪರೀಕ್ಷೆ ಹೆಚ್ಚು ನಡೆಸಲು ತಜ್ಞರ ಸಮಿತಿ ಸಲಹೆ ನೀಡಿದೆ. ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಸೇರಿದಂತೆ ಮತಗಟ್ಟೆ ಸೇರಿ ವಿವಿಧೆಡೆ ಕೆಲಸ ಮಾಡಿದವರನ್ನು ತಪಾಸಣೆ ಮಾಡಲು ತಿಳಿಸಿದ್ದಾರೆ. ಆ ಕೆಲಸ ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಕೊರೊನಾದಿಂದ ಮೃತಪಟ್ಟ 11 ಸಾವಿರ ಪ್ರಕರಣಗಳ ಬಗ್ಗೆಯೂ ಅಧ್ಯಯನ ನಡೆಸಲು ಸಹ ತಜ್ಞರಿಗೆ ತಿಳಿಸಲಾಗಿದೆ. ಯಾವ್ಯಾವ ವಯಸ್ಸಿನವರು, ಯಾವ್ಯಾವ ರೀತಿಯ ಬೇರೆ ಆರೋಗ್ಯ ಸಮಸ್ಯೆ ಇತ್ತು. ಕೊರೊನಾ ಬಂದ ನಂತರ ಕಾಣಿಸಿಕೊಂಡ ಸಮಸ್ಯೆಗಳು ಸೇರಿ ಎಲ್ಲ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು. ಕೊರೊನೇತರ ಪ್ರಕರಣಗಳಲ್ಲಿ ಕೆಲವರು ಆರೋಗ್ಯ ಸಮಸ್ಯೆ ಬಂದರೆ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲು ನೋವು ಇದ್ದರೂ ಆಸ್ಪತ್ರೆಗೆ ಹೋಗುತ್ತಿಲ್ಲ. ಆ ರೀತಿ ಮಾಡಬಾರದು. ದಯವಿಟ್ಟು ಹೋಗಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.