Advertisement

ನಾಳೆ ಕೆ-ಸೆಟ್‌: 12,361 ಅಭ್ಯರ್ಥಿಗಳ ನೋಂದಣಿ

05:41 PM Sep 26, 2020 | Suhan S |

ಕಲಬುರಗಿ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಸೆ.27ರಂದು ನಡೆಯಲಿದ್ದು, ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣ ಸೇರಿದಂತೆ ನಗರದಲ್ಲಿ 15 ಉಪಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿವೆ.

Advertisement

41 ವಿಷಯಗಳಿಗಾಗಿ ಕೆ-ಸೆಟ್‌ ಪರೀಕ್ಷೆ ನಡೆಯಲಿದೆ. ಒಟ್ಟು 12,361 ವಿದ್ಯಾರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗುವಿವಿ ಆವರಣ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯ, ನೂತನ ಪದವಿ ಮಹಾವಿದ್ಯಾಲಯ, ವ್ಹಿ.ಜಿ. ಮಹಿಳಾ ಮಹಾವಿದ್ಯಾಲಯ, ಎಂ.ಎಸ್‌.ಐ. ಮಹಾವಿದ್ಯಾಲಯ, ಎಸ್‌.ಬಿ. ವಿಜ್ಞಾನ ಮಹಾವಿದ್ಯಾಲಯ, ಕಲಾ ಮಹಾವಿದ್ಯಾಲಯ, ವಾಣಿಜ್ಯಮಹಾವಿದ್ಯಾಲಯ, ಎಸ್‌.ಬಿ. ಶಿಕ್ಷಣ ಸಂಸ್ಥೆ, ಗೋದುತಾಯಿ ಇಂಜಿನಿಯರಿಂಗ್‌ ಕಾಲೇಜು, ಎನ್‌.ವಿ. ಮಹಾವಿದ್ಯಾಲಯ, ಪಿ.ಡಿ.ಎ ಇಂಜಿನಿಯರಿಂಗ್‌, ರೇಶ್ಮಿ ಮಹಾವಿದ್ಯಾಲಯ, ಡಾ| ಅಂಬೇಡ್ಕರ್‌ ಮಹಾವಿದ್ಯಾಲಯ, ಪಿಪ್ಲೊ ಹೋಮಿ ಇರಾನಿ ಮಹಾವಿದ್ಯಾಲಯವನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ನೋಡಲ್‌ ಅಧಿಕಾರಿ ಪ್ರೋ| ಚಂದ್ರಕಾಂತ ಕೆಳಮನಿ ಆರ್‌. ತಿಳಿಸಿದ್ದಾರೆ.

ಪ್ರಥಮ ಮತ್ತು ದ್ವಿತೀಯ ಪತ್ರಿಕೆ 9.30ರಿಂದ ಮಧ್ಯಾಹ್ನ 1.00ಗಂಟೆ ವರೆಗೆ ನಡೆಯಲಿದೆ. ಇದು ಬಹು ಆಯ್ಕೆಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ತಮ್ಮ ನಿಖರವಾದ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳ ಮಾಹಿತಿಗಾಗಿ www.gugu.ac.in,  http//kset.uni_mysore.ac.in  ವೆಬ್‌ಸೈಟ್‌ ಅಥವಾ ಇದಲ್ಲದೇ ವಿಶೇಷವಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗಾಗಿ kset.gukonline.in  ವೆಬ್‌ಸೈಟ್‌ ರೂಪಿಸಿದ್ದು, ಇಲ್ಲಿ ಕೂಡ ಉಪಕೇಂದ್ರ ಹಾಗೂ ಬ್ಲಾಕ್‌ ನಂಬರ್‌ನ ಮಾಹಿತಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ. ಎಲ್ಲ ಅಭ್ಯರ್ಥಿಗಳು ಬೆಳಿಗ್ಗೆ 8 ಗಂಟೆಗೆ ಪರೀಕ್ಷೆ ಕೇಂದ್ರದಲ್ಲಿ ಹಾಜರಾಗುವುದರ ಜತೆಗೆ ಕಡ್ಡಾಯವಾಗಿ ಮುಖ ಕವಚ (ಫೇಸ್‌ ಮಾಸ್ಕ್) ಮತ್ತು ಪರೀಕ್ಷೆಯ ಪ್ರವೇಶ ಪತ್ರವನ್ನು ತರಬೇಕು. ಯಾವುದೇ ಕಾರಣದಿಂದ ಪರೀಕ್ಷಾ ಪ್ರವೇಶ ಪತ್ರ ಇರದ ಪಕ್ಷದಲ್ಲಿ ಅಭ್ಯರ್ಥಿಗಳು ತಾವು ಅರ್ಜಿ ಶುಲ್ಕ ಸಂದಾಯ ಮಾಡಿದ ರಶೀದಿ ವಿಳಾಸದ ದೃಢೀಕರಣ ಹಾಗೂ ಪಾಸ್‌ ಪೋರ್ಟ್‌ನ ಭಾವಚಿತ್ರ ಲಗತ್ತಿಸಿದ ಗುರುತಿನ ಚೀಟಿ ಹಾಗೂ ಸೂಕ್ತ ಕಾರಣಗಳೊಂದಿಗೆ ನೋಡಲ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ದಾಖಲಾತಿ ಮನದಟ್ಟಾದ ನಂತರ ಪರೀಕ್ಷೆ ಪ್ರವೇಶ ಪತ್ರ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next