ವಿಜಯಪುರ: ನಗರದಲ್ಲಿ ಭಾನುವಾರ 9 ಕೇಂದ್ರಗಳಲ್ಲಿ ನಡೆದ ಕೆ-ಸೆಟ್ ಪರೀಕ್ಷೆಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 4614 ಪರೀಕ್ಷಾರ್ಥಿಗಳು ಹಾಜರಾಗಿದ್ದರು.
ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 6,736 ವಿದ್ಯಾರ್ಥಿಗಳ ಪೈಕಿ 2,199 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಕೆ–ಸೆಟ್ ಪರೀಕ್ಷೆ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನೋಡೆಲ್ ಅಧಿಕಾರಿ ಪ್ರೊ.ನಾಮದೇವಗೌಡ ತಿಳಿಸಿದರು.
ಕೋವಿಡ್– 19 ಹಿನ್ನೆಲೆಯಲ್ಲಿ ಮಾರ್ಗಸೂಚನೆ ಅನ್ವಯ ಪರೀಕ್ಷಾರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಸರ್, ಗ್ಲೌಜ್‍ಗಳನ್ನು ಬಳಸಿ, ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದರು.
ಇದನ್ನೂ ಓದಿ:ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು
ಪರೀಕ್ಷಾ ಕೇಂದ್ರಕ್ಕೆ ತೆರಳುವ ವೇಳೆಯಲ್ಲೇ ನಗರದಲ್ಲಿ ಮಳೆ ಸುರಿದ ಕಾರಣ ಹಾಗೂ ಪರೀಕ್ಷಾ ಕೇಂದ್ರಗಳ ಬಗ್ಗೆ ಸರಿಯಾದ ಮಾಹಿತಿ ಲಭಿಸದೇ ಕೆಲ ಪರೀಕ್ಷಾರ್ಥಿಗಳು ತೊಂದರೆ ಅನುಭವಿಸಿದರು.