Advertisement

ಟಿಪ್ಪು ಜಯಂತಿ ಆಚರಿಸಿದರೆ ಮೈತ್ರಿ ಸರಕಾರ ಪತನ: ಈಶ್ವರಪ್ಪ ಎಚ್ಚರಿಕೆ

06:00 PM Oct 16, 2018 | udayavani editorial |

ಬೆಂಗಳೂರು : ರಾಜ್ಯದಲ್ಲಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಜನರ ವಿರೋಧದ ನಡುವೆಯೂ ಒಂದೊಮ್ಮೆ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾದರೆ ಅದಕ್ಕೆ ತಕ್ಕ ಶಾಸ್ತಿಯಾಗುವುದು ನಿಶ್ಚಿತ ಎಂದು ಹಿರಿಯ ಬಿಜೆಪಿ ನಾಯಕ ಕೆ ಎಸ್‌ ಈಶ್ವರಪ್ಪ ಗುಡುಗಿದ್ದಾರೆ.

Advertisement

ವಿಧಾನ ಸೌಧದಲ್ಲಿ ಇಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು “ಈ ಹಿಂದೆ ಟಿಪ್ಪು ಜಯಂತಿ ಆಚರಿಸಿದವರು ಅಧಿಕಾರ ಕಳೆದುಕೊಂಡಿದ್ದಾರೆ; ಇದು ಎಲ್ಲರಿಗೂ ಗೊತ್ತಿರುವ ಸತ್ಯ; ಟಿಪ್ಪು ಖಡ್ಗವನ್ನು ವಿದೇಶದಿಂದ ತಂದವರ ಗತಿ ಏನಾಯಿತು ಎಂಬುದು ಕೂಡ ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದರು. 

“ಟಿಪ್ಪು ಜಯಂತಿ ಆಚರಣೆಯಿಂದ ಕೊಡಗಿನಲ್ಲಿ ಜನರ ಮಾರಣ ಹೋಮವಾಗಿದೆ; ಹಿಂದುಗಳ ಮೇಲೆ ದೌರ್ಜನ್ಯ ನಡೆಯಲು ಅದು ಕಾರಣವಾಗಿದೆ’ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು. 

“ಆದುದರಿಂದ ರಾಜ್ಯದಲ್ಲಿನ ಮೈತ್ರಿ ಸರಕಾರ ಪಾಠ ಕಲಿಯಬೇಕು; ವಿವಾದಾತ್ಮಕ ಟಿಪ್ಪು ಜಯಂತಿ ಆಚರಿಸಿ ಜನರ ಭಾವನೆಯನ್ನು ಅವಮಾನಿಸಬಾರದು; ಟಿಪ್ಪು ಜಯಂತಿ ಆಚರಿಸಿದಲ್ಲಿ ರಾಜ್ಯದಲ್ಲಿನ ಮೈತ್ರಿ ಸರಕಾರ ಪತನದತ್ತ ಸಾಗುವುದು ನಿಶ್ಚಿತ’ ಎಂದು ಈಶ್ವರಪ್ಪ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next