ಬೆಂಗಳೂರು: ಸಚಿವ ಸಂಪುಟದಿಂದ ಹಿರಿಯರನ್ನು ಕೈಬಿಡುವ ಬಗ್ಗೆ ಕೇಂದ್ರದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ನಾವು ಬದ್ಧರಿದ್ದೇವೆ. ಅದರಲ್ಲಿ ಚರ್ಚೆ ಮಾಡುವ ವಿಷಯವೇನಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಬಳಿಕ ಚುನಾವಣೆ ಬರುತ್ತದೆ. ಅದಕ್ಕೆ ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಪೂರ್ಣ ಬಹುಮತ ಬರಬೇಕಿದೆ ಎಂದರು.
ಇದನ್ನೂ ಓದಿ:ಶೆಟ್ಟರ್ ಸಿಟ್ಟು, ಹಿರಿಯರ ನಡೆ: ನೂತನ ಸಿಎಂ ಬೊಮ್ಮಾಯಿಗೆ ಸಂಕಟ
ಬಿಎಸ್ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರರು. ಆದರೆ ದುರಾದೃಷ್ಟವೆಂದರೆ ಜನರು ಆಡಳಿತ ಮಾಡಿ ಎಂದು ಅಧಿಕಾರ ಕೊಡುತ್ತಾರೆ ಅದರೆ ಪೂರ್ಣ ಬಹುಮತವಿಲ್ಲ. ಹೀಗಾಗಿ ಒಂದಲ್ಲ ಒಂದು ಗೊಂದಲವಾಗುತ್ತಿದೆ. ನಾಲ್ಕು ಬಾರಿಯೂ ಹೀಗೆ ಆಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಗಟ್ಟಿ ಮಾಡುತ್ತೇವೆ. ಸರ್ಕಾರ ಮತ್ತು ಸಂಘಟನೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮೊದಲು ಸಂಘ ಪರಿವಾರದ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರ ಜೊತೆ ಕೆ.ಎಸ್. ಈಶ್ವರಪ್ಪ ಚರ್ಚೆ ನಡೆಸಿದರು. ಈ ಬಗ್ಗೆ ಕೇಳಿದಾಗ ಇದು ಸೌಹಾರ್ದ ಭೇಟಿಯಷ್ಟೇ ಎಂದರು.