ಬಾಗಲಕೋಟೆ: ಸುಪ್ರೀಂಕೋರ್ಟ್ ಆದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಮಾಜಿ ಸಿಎಂ ಸಿದ್ದರಾಮಯ್ಯನವರ ದಡ್ಡರಾಗಬಿಟ್ಟಿರಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಈಶ್ಚರಪ್ಪನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,ಕಾಂಗ್ರೆಸ್ ಪಕ್ಷ ಸಂಪೂರ್ಣ ಜಾತಿವಾದಿ ಆಗಿದೆ. ಜಾತಿವಾದಿ ಕಾಂಗ್ರೆಸ್ ಪಕ್ಷ ತಿರಸ್ಕಾರ ಮಾಡಿ,ಆದರೆ ಬಿಜೆಪಿ ಪಕ್ಷ ಗೋ ಹತ್ಯೆ ನಿಷೇಧ ಜಾರಿ ತಂದಿವೆ. ಕ್ರಾಂತಿ ಕಾರಿ ಬದಲಾವಣೆ ತರುವುದಕ್ಕೆ ಬಜೆಪಿ ಪಕ್ಷ ಹೋರಟಿದೆ. ಭಾರತೀಯ ಸಂಸ್ಕೃತಿಯ ನಾವು ನಿರ್ಮಾಣ ಮಾಡುತ್ತೇವೆ ಎಂದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಸಿಎಂ ಸೀಟಿಗಾಗಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ,ಕಾಂಗ್ರೆಸ್ ಜಾತಿವಾದಿ ಪಕ್ಷವಾಗಿದೆ. ಕಾಂಗ್ರೆಸ್ ನಮ್ಮನ್ನು ಅಧಿಕಾರಕ್ಕೆ ತನ್ನಿ ಅಂತಾರೆ. ಆದ್ರೆ ಇವರು ಅಧಿಕಾರಕ್ಕೆ ಬಂದ್ರೆ ಈ ಪಿ.ಎಫ್.ಐ ನಿಷೇಧ,ಗೋಹತ್ಯೆ ನಿಷೇಧ ಮೊದಲಾದ ಕಾಯ್ದೆಗಳನ್ನು ಅವರು ವಾಪಸ್ ಜಾರಿ ಮಾಡ್ತಾರೆ. ಸಿದ್ಧರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಸೋತ್ರೂ ಬುದ್ದಿ ಬರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೆಜೆಪಿ ಕಟ್ಟಿ ಅಪರಾಧ ಮಾಡಿದ್ದೆ,ಆದರೆ ಶೆಟ್ಟರ ತರಹ…:B. S. Yediyurappa
Related Articles
ಕಾಂಗ್ರೆಸ್ ನಾಯಕರು,ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ ಸೋಲುತ್ತಿದೆ ಎಂದು,ನಮ್ಮಲ್ಲಿ ಸಮರ್ಥ ನಾಯಕತ್ವ ,ಸಂಘಟನೆ ,ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಸಾಮಾನ್ಯರ ಸರ್ಕಾರ ವಾಗಿದೆ.ಈಗ ಜಾತಿವಾದಿ ಕಾಂಗ್ರೆಸ್ ಪಕ್ಷವನ್ನ ಸೋಲಿಸಲು ಜನ ನಿರ್ಧರಿಸಿದ್ದಾರೆ ಎಂದರು.
ರಾಷ್ಟ್ರವಾದಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈವತ್ತಿನ ತನ ಯಾರಿಗೂ ಬಹುಮತ ಸಿಕ್ಕಿಲ್ಲ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಭಾರಿ108 ಸೀಟ್ ವರೆಗೆ ಬರುತಿತ್ತು,ಆದ್ರೆ ಈ ಭಾರಿ ಬಹುಮತ ಬಂದೇ ಬರುತ್ತೆ,ನಮ್ಮಲ್ಲಿ ಸಮರ್ಥ ನಾಯಕತ್ವ,ಸಂಘಟನೆ, ಅಭಿವೃದ್ಧಿಯನ್ನ ನೋಡಿ ಬಿಜೆಪಿಯನ್ನ ಗೆಲ್ಲಿಸುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು, ಇದೇ ಸಮಯದಲ್ಲಿ,ಮುಸ್ಲಿಂ ಸಮಾಜಕ್ಕೆ 4% ಮೀಸಲಾತಿ ರದ್ದತಿಗೆ ಸುಪ್ರೀ ತಡೆ ವಿಚಾರವಾಗಿ, ಬಿಜೆಪಿ ಪಕ್ಷದ ವರೆಗೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಸಿದ್ಧರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸುಪ್ರೀಂ ಕೋರ್ಟ್ ಆ ಕೆ.ಎಸ್. ಈಶ್ವರಪ್ಪದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರ ಎಂದು ವ್ಯಂಗ್ಯ ವಾಡಿ,ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದೇಶ ಕೊಟ್ಟಿಲ್ಲ ಎಂದರು.
ನಾವು ಸುಪ್ರೀಂ ಕೋರ್ಟ್ ನಲ್ಲಿ ಹೋರಾಡ್ತೇವೆ ಎಂದು, ಸಿದ್ಧರಾಮಯ್ಯ ಅವರು ಇಂದಲ್ಲ ನಾಳೆ ಜೈಲಿಗೆ ಹೋಗುತ್ತಾರೆ. ಡಿ.ಕೆ.ಶಿವಕುನಾರ್ ತಿಹಾರ್ ಜೈಲಿಗೆ ಹೋಗಿ ಬಂದರು, ಅರ್ಕಾವತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗುತ್ತಾರೆ. ಇದು ಒಂದು ಪ್ರಕರಣ ಹೇಳಿದ್ದೇನೆ. ಇಂದಲ್ಲ ನಾಳೆ ಇಬ್ಬರೂ ಜೈಲಿಗೆ ಹೋಗುತ್ತಾರೆ ಎಂದು, ಇನ್ನೊಬ್ಬ ಕಾಂಟ್ರ್ಯಾಕ್ಟರ್ ಕೆಂಪಯ್ಯ ಪ್ರಧಾನಿಗೆ ಪತ್ರ ಬರೆದು 40 % ಕಮೀಷನ್ ಅಂತ ಪತ್ರ ಬರೆದರು,ಅದನ್ನ ಆಧಾರವಾಗಿ ಇಟ್ಟುಕೊಂಡು 40% ಕಮೀಷನ್ ಅಂತ ಹತ್ತು ಕಡೆ ಕೂಗ್ತಾರೆ, 40% ದಾಖಲಾತಿಗಳಿದ್ರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
ರಾಜ್ಯದಲ್ಲಿ ಲಿಂಗಾಯತ ಅಸ್ತ್ರ ಪ್ರಯೋಗ ವಿಚಾರವಾಗಿ ಮಾತನಾಡಿ, ಲಿಂಗಾಯತರನ್ನು ಒಡೆದು ಛಿದ್ರ ಮಾಡಿದ ಕಾಂಗ್ರೆಸ್ “ಗೆ ಬುದ್ದಿಕಲಿಸಬೇಕು. ಬಸವಣ್ಣನವರ ಕೇವಲ ವೀರಶೈವ-ಲಿಂಗಾಯತರ ನಾಯಕ ಅಲ್ಲ ಇಡೀ ಮಾನವ ಕುಲಕ್ಕೆ ನಾಯಕ. ಧರ್ಮವನ್ನು ಒಡೆದ ಬಗ್ಗೆ ಎಲ್ಲರಿಗೂ ತಿಳಿಸುತ್ತಾ ಇದ್ದೇವೆ.ಜಾತಿ ಒಡೆದು ವಿಷ ಬೀಜ ಬಿತ್ತಿದವರು ಕಾಂಗ್ರೆಸ್ಸಿಗರು, ಜನರು ಅವರಿಗೆ ಬುದ್ದಿ ಕಲಿಸ್ತಾರೆ ಎಂದರು.
ಸಿದ್ಧರಾಮಯ್ಯ ಮೊದಲು ಲಿಂಗಾಯತ ಸಿಎಂ’ಗಳು ಭಷ್ಟರು ಅಂತ ಹೇಳಿದಿರು..ಮತ್ತೆ ನಾನು ಬೊಮ್ಮಾಯಿ ಅವರಿಗೆ ಮಾತ್ರ ಅಂದೆ ಅಂತಾರೆ. ಜಾತಿಗಳನ್ನು ಒಡೆಯುವ ಕಾಂಗ್ರೆಸ್ ಪಕ್ಷಕ್ಕೆ ಜನ ಅವರಿಗೆ ಬುದ್ದಿಕಲಿಸಲು ನಾವು ಲಿಂಗಾಯತ ವಿಚಾರ ಪ್ರಸ್ತಾಪಿಸಿದ್ದೇವೆ. ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ವಿಚಾರವಾಗಿ ಮಾತನಾಡಿ, ದ್ರೋಹಿಗಳಿಗೆ ಬುದ್ದಿ ಕಲಿಸಲು ವರಿಷ್ಠರು ಸಭೆ ಮಾಡುತ್ತಾರೆ. ಅವರಿಗೆ ಎಲ್ಲ ಅಧಿಕಾರಿಗಳನ್ನು ಕೊಟ್ಟಿವೆ,ಟೋಪಿ ಹಾಕಿಕೊಂಡ ಎರಡು ನಿಮಿಷ ದಲ್ಲಿ ಏಕೆ ತೆಗೆದರು,ಈಗಲೂ ಸಹ ಕಾಂಗ್ರೆಸ್ ಪಕ್ಷಕ್ಕ ಒದ್ದು ಹೂರಗೆ ಬರಬೇಕು ಎಂದು ಸವಾಲ್ ಹಾಕಿ,ಅವರ ತಂದೆಯವರ ಆತ್ಮಕ್ಕೆ ಶಾಂತಿ ಸಿಗಬೇಕೆಂದ್ರೆ ಅವರು ಕಾಂಗ್ರೆಸ್ ಬಿಟ್ಟು ಬರಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ನಿಷೇಧ ಬಿಲ್ ವಾಪಸ್ ಪಡೀತಿವಿ ಅಂತಾರಲ್ಲ,ಆವಾಗ ಜಗದೀಶ ಶೆಟ್ಟರ್ ಗೆದ್ದರೆ,ಗೆಲ್ಲಲ್ಲ,ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ,ಬರಲ್ಲ,ಒಂದು ವೇಳೆ ಬಿಲ್ ಪಾಸ್ ಮಾಡೋಕೆ ಕೈ ಎತ್ತುತ್ತಾರಾ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ ನವರು,ಬಿಜೆಪಿ ಪಕ್ಷವನ್ನು ತಾಯಿ ಅಂತಿದ್ದರು,ಪಕ್ಷವನ್ನು ಬಿಟ್ಟು ತಾಯಿಗೆ ದ್ರೋಹ ಮಾಡಿದರು ಎಂದು ಜಗದೀಶ ಶೆಟ್ಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ಕೆಟ್ಟ ಮಗ, ಕೆಟ್ಟ ಗಂಡ ಇರಬಹುದು ಆದ್ರೆ ಕೆಟ್ಟ ತಾಯಿ(ಬಿಜೆಪಿ) ಇರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಆಕ್ರೋಶ ಹೂರಹಾಕಿದರು.