ಶಿವಮೊಗ್ಗ: ನೆಹರು ಈ ದೇಶವನ್ನು ಮೂರು ಭಾಗ ಮಾಡಿದವರು. ಅವರ ಹೆಸರು ಹೇಳಿಕೊಂಡು ಬೇಕಾದರೆ ಕಾಂಗ್ರೆಸ್ ಕಾರ್ಯಕ್ರಮ ಮಾಡಲಿ. ಯಾರದ್ದೋ ಕೆಟ್ಟ ಹೆಸರು ಹೇಳಿಕೊಂಡು ನಾವು ಹೋಗುವುದಿಲ್ಲ. ತಿಹಾರ್ ಜೈಲಿನಲ್ಲಿದ್ದ ಡಿಕೆಶಿ ಇವರ ನಾಯಕ, ಅಗ್ರಹಾರ ಜೈಲನಲ್ಲಿದ್ದ ನಲಪಾಡ್ ಇವರ ನಾಯಕ ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತಾನಾಡಿದ ಅವರು, ಸಿಎಂ ಬದಲಾಗುತ್ತಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕುಡುಕರ ಮಾತಿಗೆ ಬೆಲೆ ಕೊಡಲ್ಲ. ಇವರ ಅವಧಿಯಲ್ಲಿ ಮೂರು ಸಿಎಂ ಆಗಿಲ್ವ. ವಿರೇಂದ್ರ ಪಾಟೀಲ ಹೆಸರು ಹೇಳಿ ನೀರು ಕುಡಿತಿದ್ದೇನೆ. ಅಂತಹ ಸಿಎಂ ಅವರನ್ನೇ ಇವರು ಏರ್ಪೋರ್ಟ್ ನಲ್ಲೇ ಬದಲಾಯಿಸಿದ್ದರು. ಸಿಎಂ ಬದಲಾಗಲಿ ಎಂಬುದು ಅವರ ಭಾವನೆ ಇರಬಹುದು ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇದ್ದವರೇನು?. ಇಂದಿರಾಗಾಂಧಿಗೆ ಧಿಕ್ಕಾರ ಕೂಗಿದ ಸಿದ್ದರಾಮಯ್ಯ ಈಗ ಸಿಎಂ ಆಗಲು ಜೈಕಾರ ಹಾಕುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕುತ್ಯಾರು : ಸಾವಿನಲ್ಲೂ ಒಂದಾದ ಕೃಷಿಕ ದಂಪತಿ : ಒಂದೇ ಚಿತೆಯಲ್ಲಿ ಅಂತಿಮ ಸಂಸ್ಕಾರ
ಪ್ರವಾಹ ಪೀಡಿತರಿಗೆ ನೆರವಾಗುವ ಬದಲು ಧ್ವಜ ವಿತರಣೆ ಕುರಿತ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ರಾಜ್ಯದಲ್ಲಿ ಮಳೆ ಇದ್ದಾಗಲೇ ಸಿದ್ದರಾಮೋತ್ಸವ ಮಾಡಿದ್ದಾರೆ. 75 ಕೋಟಿ ರೂ. ಹುಟ್ಟಿದ ಹಬ್ಬಕ್ಕೆ ಯಾರ ದುಡ್ಡು ಬಳಕೆಯಾಗಿದೆ ಎಂಬುದರ ಲೆಕ್ಕ ಸಾರ್ವಜನಿಕರಿಗೆ ಕೊಡಲಿ. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಲು ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ರಾಷ್ಟ್ರ ಭಕ್ತರ ಸಂತತಿ ನಮ್ಮದು. ಕಾಂಗ್ರೆಸ್ ನವರದ್ದು ಜಿನ್ನಾ ಸಂತತಿನಾ? ರಾಷ್ಟ್ರಧ್ವಜ ದ ಬಣ್ಣವೇ ಗೊತ್ತಿಲ್ಲ, ಕೆಂಪು ಬಿಳಿ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.