Advertisement

ಸಿದ್ದರಾಮಯ್ಯಗೆ ಸಂಕಟ ಆರಂಭವಾದಾಗ ಬಿಜೆಪಿ ನೆನಪಾಗುತ್ತದೆ‌: ಈಶ್ವರಪ್ಪ

09:48 AM Nov 17, 2019 | keerthan |

ಶಿವಮೊಗ್ಗ: ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು. ಆದರೆ ಏಕೆ ಅಧಿಕಾರ ಕಳೆದುಕೊಂಡರು‌. ಸಿದ್ದರಾಮಯ್ಯಗೆ ಸಂಕಟ ಆರಂಭವಾದಾಗ ಬಿಜೆಪಿ ನೆನಪಾಗುತ್ತದೆ‌ ಎಂದು ಗ್ರಾಮೀಣಾಭಿವೃದ್ಧಿ ಸಚಿಚ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು,  ಬಿಜೆಪಿಗೆ ಪೂರ್ಣ ಬಹುಮತ ಇರುವ ಸಂದರ್ಭದಲ್ಲಿ ಕೆಲವು ಶಾಸಕರನ್ನು ಅನರ್ಹರನ್ನಾಗಿಸಲು ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಕುತಂತ್ರ ರಾಜಕಾರಣ ಮಾಡಿದ್ದರು. ಈಗ ಸುಪ್ರೀಂ ಕೋರ್ಟ್ ತೀರ್ಪು ತುಂಬಾ ಚೆನ್ನಾಗಿ ಬಂದಿದೆ. ಅನರ್ಹ ಶಾಸಕರು ಚುನಾವಣೆಗೆ ನಿಂತು ಗೆಲುವು ಸಾಧಿಸಲಿದ್ದಾರೆ‌. ಉಪ ಚುನಾವಣೆಯಲ್ಲಿ ಹದಿನೈದು ಸ್ಥಾನ ಗೆಲ್ಲಲಿದ್ದೇವೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಎದುರಾಗುವುದಿಲ್ಲ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲ್ಲ ಎಂದು ಸಿದ್ದರಾಮಯ್ಯ ಹಾಗೂ ದೇವೇಗೌಡರು ಹೇಳಿದ್ದರು‌. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡಂಕಿ ದಾಟಲಿಲ್ಲ. ಬದಲಿಗೆ ತಲಾ ಒಂದು ಕ್ಷೇತ್ರದಲ್ಲಿ ಗೆದ್ದರು ಅಷ್ಟೇ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದೂ ಸ್ಥಾನದಲ್ಲೂ ಗೆಲ್ಲಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೇಳುವುದೆಲ್ಲಾ ಸುಳ್ಳು. ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿಯಾಗುವುದಿಲ್ಲ ಎಂದರು. ಆದರೆ ಮೋದಿ ಇಡೀ ವಿಶ್ವವೇ ನೋಡುವಂತಹ ಪ್ರಧಾನಿಯಾಗಿದ್ದಾರೆ. ಸಿದ್ದರಾಮಯ್ಯ ಹೇಳುವುದೆಲ್ಲಾ ಸುಳ್ಳಾಗುತ್ತದೆ. ಬಿಜೆಪಿ ಹೇಳುವುದೆಲ್ಲಾ ನಿಜವಾಗುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಮೇಲೆ ಟೀಕೆ ಮುಂದುವರಿಸಿದ ಈಶ್ವರಪ್ಪ, ಆಡಳಿತ ಪಕ್ಷದ ಮೇಲೆ ಟೀಕೆ ಮಾಡುವುದೇ ವಿರೋಧ ಪಕ್ಷದ ‌ಕೆಲಸ. ಬಿಜೆಪಿ ಬಗ್ಗೆ ಆಪಾದನೆ ಮಾಡುವುದೇ ಕಾಂಗ್ರೆಸ್ ಗೆ ಕೆಲಸವಾಗಿದೆ. ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡುವುದೇ ಕೆಲಸ. ಸಿದ್ದರಾಮಯ್ಯ ಅವರು ಸರ್ವಾಧಿಕಾರಿ ರೀತಿ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್ ನಲ್ಲಿ ಏನುಬೇಕಾದರೂ ನಡೆಯುತ್ತದೆ ಎಂದರು.

Advertisement

ಈ ನಿಮಿಷದವರೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿಲ್ಲ ಎಂದ ಈಶ್ವರಪ್ಪ. ಜೆಡಿಎಸ್ ನವರಿಗೆ ಉಪಚುನಾವಣೆಯಲ್ಲಿ‌ ನಿಲ್ಲಲು ಜನರೇ ಸಿಕ್ಕಿಲ್ಲ. ಹೀಗಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next