ಶಹಾಪುರ: ಕಳೆದ ಒಂದು ತಿಂಗಳಿಂದ ನಿರಂತರವಾಗಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಸಂಬಂಧಿಸಿದ ಅಕಾರಿ ವರ್ಗ ಜನಪ್ರತಿನಿಧಿಗಳಾಗಲಿ ಸೂಕ್ತ ಸ್ಪಂದನೆ ನೀಡದಿರುವುದನ್ನು ಖಂಡಿಸಿ ಇಲ್ಲಿನ ಕರವೇ ಕಾರ್ಯಕರ್ತರು ರೈತರ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ರೈತರ ಬೇಡಿಕೆಗಳಿಗೆ ಸ್ಪಂ ದಿಸದ ಸರ್ಕಾರ ಇದ್ದರೂ ಅಷ್ಟೆ ಸತ್ತರೂ ಅಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಆಡಳಿತ ಹಾಗೂ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉ.ಕ ಕರವೇ ಅಧ್ಯಕ್ಷ ಶರಣು ಗದ್ದುಗೆ, ಕಳೆದ ನಾಲ್ಕು ವರ್ಷದಿಂದ ಬರಗಾಳದ ಗಾಯಕ್ಕೆ ರೈತರು ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಂದ ವಿಮೆ ಹಣ ಕಟ್ಟಿಕೊಂಡ ವಿಮಾ ಕಂಪನಿಗಳು ಬೆಳೆ ನಷ್ಟ ಕುರಿತು ಪರಿಶೀಲನೆ ನಡೆಸಿ ಸಮರ್ಪಕ ವಿಮಾ ಹಣ ರೈತರ ಅಕೌಂಟ್‌ಗೆ ಜಮೆ ಮಾಡದೆ ಅನ್ಯಾಯ ಎಸಗುತ್ತಿದ್ದಾರೆ. ಇದನ್ನು ಸಂಬಂಧಿ ಸಿದಿ
ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸದೆ ರೈತರ ಬೇಡಿಕೆಗೆ ಸ್ಪಂಧಿಸುತ್ತಿಲ್ಲ. ಅಲ್ಲದೆ ಜನಪ್ರತಿನಿದಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರಿಗೆ ಸ್ಪಂದನೆ ಸಿಗುತ್ತಿಲ್ಲ. ಅವರ ಕಷ್ಟ ಕೇಳ್ಳೋರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಸಿಬಿ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಜರುಗಿತು. ಈ ಸಂದರ್ಭದಲ್ಲಿ ಮಲ್ಲಣ್ಣಗೌಡ ಪರಿವಾಣ, ಮಹೇಶ ಸುಬೇದಾರ, ಭೀಮರಾಯ ಕಾಂಗ್ರೆಸ್, ವೆಂಕಟೇಶ, ನಾಗು ಅವಂಟಿ, ವಿಶಾಲ ದೋರನಹಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.