Advertisement

ವೃದ್ಧೆಗೆ ಮಾಸಾಶನ ವಿತರಣೆ

07:33 PM May 08, 2021 | Team Udayavani |

ಕೆ.ಆರ್‌.ಪೇಟೆ: ರಾಜ್ಯದಲ್ಲಿ ಜನತಾ ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದನಿರ್ಗತಿಕರು, ಬಡವರಿಗೆ ಔಷಧಿ ಮತ್ತಿತರಕೆಲಸಕ್ಕೆ ಆರ್ಥಿಕ ತೊಂದರೆಯಾಗಬಾರದುಎಂದು ನಿರ್ಗತಿಕರ ಮನೆಗಳಿಗೆ ನೇರವಾಗಿನಗದು ನೆರವು ಸೇರಿದಂತೆ ವಿವಿಧಯೋಜನೆಯನ್ನು ಡಾ.ವೀರೇಂದ್ರಹೆಗ್ಗಡೆದಂಪತಿ ಮುಂದುವರಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೋಜನಾಧಿಕಾರಿ ಮಮತಾಶೆಟ್ಟಿ ತಿಳಿಸಿದರು.

Advertisement

ತಾಲೂಕಿನ ಬೂಕನಕೆರೆ ಗ್ರಾಮದಲ್ಲಿಶ್ರೀಕ್ಷೇತ್ರದ ನಿಧಿಯಿಂದ ನಿರ್ಗತಿಕ ಯೋಜನೆಯಡಿ ವೃದ್ಧೆªಯೊಬ್ಬರಿಗೆ ಮಾಸಾಶನ ವಿತರಣೆಮಾಡಿ ಮಾತನಾಡಿದರು. ಈಗ ಮಹಾಮಾರಿಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿಸಾವಿರಾರು ಕುಟುಂಬಗಳ ನೋವಿಗೆ ಕಾರಣವಾ ಗಿದೆ. ನಾವು ನಮ್ಮ ಎಲ್ಲಾ ಪ್ರತಿನಿಧಿಗಳನ್ನುಬಳಸಿ ತಾಲೂಕಿನಲ್ಲಿ ಗುರುತಿಸಿರುವ 64ಬಡವರು, ನಿರ್ಗತಿಕರಿಗೆ ತಲಾ 750 ರಿಂದ1000 ರೂ.ಗಳವರೆಗೆ 48500 ರೂ.ಗಳನ್ನುಅವರ ಮನೆಗಳಿಗೆ ತೆರಳಿ ವಿತರಣೆ ಮಾಡಿದ್ದೇವೆ. ಲಾಕ್‌ಡೌನ್‌ ಮುಂದುವರಿದರೆಪೂಜ್ಯರ ಸೂಚನೆಯಂತೆ ಮತ್ತಷ್ಟು ಆರ್ಥಿಕನೆರವು ನೀಡಲಾಗುತ್ತದೆ ಎಂದರು.

ವಾಹನಗಳ ವ್ಯವಸ್ಥೆ: ಕೊರೊನಾದಿಂದಾಗಿಗ್ರಾಮೀಣ ಭಾಗದ ಜನರಿಗೆ ವಾಹನಕ್ಕೆತೊಂದರೆಯಾಗುತ್ತಿರುವುದನ್ನು ಗಮನಿಸಿರುವಪೂಜ್ಯರು ಕೊರೊನಾ ಪೀಡಿತರಿಗೆ ಅನುಕೂಲವಾಗಲಿ ಎಂದು ತಾಲೂಕಿನಲ್ಲಿ ನಮ್ಮ ಸಂಘದವತಿಯಿಂದ ಪ್ರಯಾಣಿಕರ ವಾಹನಓಡಿಸಲಾಗುತ್ತಿದೆ.

ಯಾರಿಗೆ ವಾಹನದಅವಶ್ಯಕತೆ ಇರುತ್ತದೆಯೋ ಅವರು ನಮ್ಮಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾತಾಲೂಕು ಯೋಜನಾಧಿಕಾರಿಗಳಿಗೆ ಕರೆಮಾಡಿದರೆ ನಾವು ಅವರ ಮನೆ ಬಾಗಿಲಿಗೆವಾಹನ ಕಳುಹಿಸಿ ಆರೋಗ್ಯ ಚಿಕಿತ್ಸೆ ಕೊಡಿಸಲುವ್ಯವಸ್ಥೆ ಮಾಡುತ್ತೇವೆ.ಜೊತೆಗೆ ಯಾರಿಗಾದರೂ ಊಟದಸಮಸ್ಯೆ ಇದ್ದರೂ ಮುಂದಿನ ದಿನಗಳಲ್ಲಿವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಶ್ರೀಕ್ಷೇತ್ರ ಯೋಜನೆಯಮೇಲ್ವಿಚಾರಕಿ ಅನ್ನಪೂರ್ಣ, ಮಹಾದೇವಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next