ಉಡುಪಿ: ಹಿರಿಯ ವಿದ್ವಾಂಸ, ಕಂಪ್ಯೂಟರ್ ಕ್ಷೇತ್ರದ ಸಾಧಕ ಪ್ರೊ| ಕೆ.ಪಿ. ರಾವ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹ ಯೋಗ ದೊಂದಿಗೆ ನಾಡೋಜ ಕೆ.ಪಿ. ರಾವ್ ಅಭಿನಂದನ ಸಮಿತಿ ವತಿಯಿಂದ ಆ. 6ರಂದು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಭಿನಂದನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಉದ್ಘಾಟಿಸುವರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 9.15ರಿಂದ 9.45ರ ವರೆಗೆ ಪರ್ಕಳದ ಸರಿಗಮ ಭಾರತಿ ಅವರಿಂದ ಸಾಂಸ್ಕೃತಿಕ ಸೌರಭ, 9.50ರಿಂದ 10.30ರ ವರೆಗೆ ಉದ್ಘಾಟನೆ, 10.30ರಿಂದ 10.45ರ ವರೆಗೆ ಡಾ| ಯು.ಬಿ. ಪವನಜ ಅವ
ರಿಂದ “ಕಂಪ್ಯೂಟರ್ ಮತ್ತು ಕೆ.ಪಿ. ರಾವ್’ ವಿಷಯದ ಬಗ್ಗೆ ಅಭಿಪ್ರಾಯ ಮಂಡನೆ ನಡೆಯಲಿದೆ. 10.45ರಿಂದ 11ರ ವರೆಗೆ ಪ್ರೊ| ವರದೇಶ ಹಿರೇಗಂಗೆ ಅವರು ಕೆ.ಪಿ. ರಾವ್ ಬದುಕು ಹಾಗೂ ವರ್ಣಕ ಕಾದಂಬರಿ ಬಗ್ಗೆ ಹಾಗೂ 11ರಿಂದ 11.5ರ ವರೆಗೆ ಡಾ| ಎನ್.ಟಿ. ಭಟ್ ಅವರು ಕೆ.ಪಿ. ರಾವ್ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಲಿದ್ದಾರೆ.
11.05ರಿಂದ 12.05ರವರೆಗೆ ಕೆ.ಪಿ. ರಾವ್ ಅವರೊಂದಿಗೆ ಮಾತುಕತೆ ಎಂಬ ವಿಷಯದಲ್ಲಿ ಪಾದೆಕಲ್ಲು ವಿಷ್ಣುಭಟ್, ಡಾ| ಮಹಾಲಿಂಗ ಭಟ್, ಡಾ| ನೀತಾ ಇನಾಂದಾರ್, ಡಾ| ಉದಯ ಶಂಕರ ಎಚ್.ಎನ್., ಸುಶ್ಮಿತಾ ಶೆಟ್ಟಿ, ಪಲ್ಲವಿ ಕೊಡಗು ಭಾಗವಹಿಸಲಿದ್ದಾರೆ. 12.05ರಿಂದ 12.10ರ ವರೆಗೆ ಪಾಡಿಗಾರು ಲಕ್ಷ್ಮೀ
ನಾರಾಯಣ ಉಪಾಧ್ಯ ಅವರಿಂದ ಹಾಡುಗಾರಿಕೆ ಇರಲಿದೆ. 12.15ಕ್ಕೆ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆಯಲ್ಲಿ ಅಭಿನಂದನ ಸಮಾರಂಭ ನಡೆಯಲಿದೆ. ಜಯಂತ ಕಾಯ್ಕಿಣಿ ಅಭಿನಂದನ ಮಾತುಗಳನ್ನಾಡಲಿದ್ದಾರೆ ಎಂದರು.
ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ರವಿರಾಜ್ ಎಚ್.ಪಿ., ಪ್ರೊ| ಮುರಲೀಧರ ಉಪಾಧ್ಯ, ಜನಾರ್ದನ ಕೊಡವೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.