Advertisement

Ayodhya; ಶ್ರೀರಾಮನ ಪರವಾಗಿ ವಾದ ಮಂಡಿಸಿದ ಕಾಸರಗೋಡಿನ ಕೆ.ಎನ್‌. ಭಟ್‌

11:21 PM Jan 20, 2024 | Team Udayavani |

ಕುಂಬಳೆ: ರಾಮಜನ್ಮಭೂಮಿ ಅಯೋಧ್ಯೆ ಪ್ರಕರಣವನ್ನು ಅಲಹಾಬಾದ್‌ ಹೈಕೋರ್ಟ್‌ನಲ್ಲಿ 3 ವಷ೯ಗಳ ಕಾಲ ನಿರ್ವಹಣೆ ಮಾಡಿದವರು ಮತ್ತು ಭಗವಾನ್‌ ಶ್ರೀರಾಮನ ಪರವಾಗಿ ವಾದ ಮಂಡಿಸಿದವರು ಕರ್ನಾಟಕದ ಹಿರಿಯ ವಕೀಲ ಕೆ.ಎನ್‌. ಭಟ್‌ ಅವರು. 2010ರಲ್ಲಿ ಅಲಹಾಬಾದ್‌ ಹೈಕೊರ್ಟ್‌ ತೀರ್ಪು ನೀಡಿತ್ತು.

Advertisement

ಕೆ.ಎನ್‌. ಭಟ್‌ ಅವರು ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮತಾಳಿದ್ದನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿಪಾದಿಸಿದ್ದರು ಹಾಗೂ ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದಿಟ್ಟಿದ್ದರು. ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ್ದಕ್ಕೆ ಸಾಕ್ಷ್ಯಗಳು ಪುಷ್ಟೀಕರಿಸಿವೆ ಎಂದು ಉಲ್ಲೇಖಿಸಿದೆ.

ಅಯೋಧ್ಯೆ ಪ್ರಕರಣ ಸುಪ್ರೀಂ ಕೊರ್ಟ್‌ ಮೆಟ್ಟಿಲೇರಿದ ಸಂದರ್ಭದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಧ್ಯಾದೇಶ ಹೊರಡಿಸಬೇಕೆಂಬ ಕೂಗು ದೇಶಾದ್ಯಂತ ಬಲವಾಗಿ ಕೇಳಿ ಬಂದಿತ್ತು. ಆದರೆ ಅಧ್ಯಾದೇಶ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪರಿಹಾರವಲ್ಲ ಎಂದು ಸ್ಪಷ್ಟವಾಗಿ ನುಡಿದವರು ಕೆ.ಎನ್‌. ಭಟ್‌.

1940ರಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದ ಕೆ.ಎನ್‌. ಭಟ್‌ ಅವರು ಸರಕಾರಿ ಕಾನೂನು ಕಾಲೇಜಿನಲ್ಲಿ 1962ರಲ್ಲಿ ಕಾನೂನು ಪದವಿ ಪಡೆದು ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿ ಬಳಿಕ 1986ರಲ್ಲಿ ಸುಪ್ರೀಂ ಕೊರ್ಟ್‌ ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು.

ಅವರನ್ನು 1996ರಲ್ಲಿ ಕೇಂದ್ರ ಸರಕಾರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಿಸಿತ್ತು. 2003ರಿಂದ ಅಯೋಧ್ಯೆ ಪ್ರಕರಣದ ನಿರ್ವಹಣೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನೆಲೆಸಿದ್ದ ಅವರು, ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಭಗವಾನ್‌ ಶ್ರೀರಾಮನನ್ನು ಕಕ್ಷಿದಾರರನ್ನಾಗಿ ಮಾಡಿ ವಾದ ಮಂಡಿಸಿದ್ದರು.ಅಲ್ಲದೆ ದೇಶಾದ್ಯಂತ ಸುತ್ತಿ ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕೋರ್ಟ್‌ ಮುಂದಿಟ್ಟಿದ್ದರು.

Advertisement

ಅವರು ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಇದೀಗ ಅಯೋಧ್ಯೆಯಲ್ಲೇ ಶ್ರೀರಾಮ ಜನಿಸಿದ್ದ ಎಂಬ ವಾದವನ್ನು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಸಾಬೀತುಪಡಿಸಲು ಪೂರಕವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next