Advertisement

100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕೆ.ಎಲ್. ರಾಹುಲ್

01:04 AM Apr 17, 2022 | Team Udayavani |

ಮುಂಬಯಿ : ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

Advertisement

ನೂರನೇ ಐಪಿಎಲ್ ಪಂದ್ಯವಾಡಿದ ರಾಹುಲ್ ಐಪಿಎಲ್ ಇತಿಹಾಸದಲ್ಲಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.

ರಾಹುಲ್ 60 ಬಾಲ್ ಗಳಲ್ಲಿ 9 ಬೌಂಡರಿಗಳು ಮತ್ತು 5 ಸಿಕ್ಸರ್ ಒಳಗೊಂಡು 103 ರನ್ ಗಳಿಸಿ ಅಜೇಯರಾಗಿ ಉಳಿದರು.

ತಂಡ ರಾಹುಲ್ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು.

ರಾಹುಲ್ ಗೆ ಸಾಥ್ ನೀಡಿದ ಡಿ ಕಾಕ್ 24 , ಮನೀಶ್ ಪಾಂಡೆ 38 , ಸ್ಟೋಯಿನಿಸ್ 10, ದೀಪಕ್ ಹೂಡಾ 15 ರನ್ ಕೊಡುಗೆ ಸಲ್ಲಿಸಿದರು.

Advertisement

ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ ಗಳ ಜಯ ಸಾಧಿಸಿದೆ. ಮುಂಬೈ ಇಂಡಿಯನ್ಸ್ ಸತತ ಆರನೇ ಸೋಲನ್ನು ಅನುಭವಿಸಿತು.

ಮುಂಬೈ ಒಂಬತ್ತು ವಿಕೆಟ್‌ಗೆ 181 ರನ್ ಗಳಿಸಲು ಮಾತ್ರ ಶಕ್ತವಾಯಿತು. ಲಕ್ನೋ ಪರ ಅವೇಶ್ ಖಾನ್ ನಾಲ್ಕು ಓವರ್‌ಗಳಲ್ಲಿ30 ರನ್ ನೀಡಿ 3 ವಿಕೆಟ್ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್

ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 199

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 181 (ಸೂರ್ಯಕುಮಾರ್ ಯಾದವ್ 37, ಅವೇಶ್ ಖಾನ್ 3/30).

Advertisement

Udayavani is now on Telegram. Click here to join our channel and stay updated with the latest news.

Next