ಸಿಡ್ನಿ: ಕ್ವಾರಂಟೈನ್ ನಿಯಮದಿಂದ ಅನಿಶ್ಚಿತತೆಯಿಂದಲೇ ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಟೆಸ್ಟ್ ಸರಣಿಯಿಂದಲೇ ಕನ್ನಡಿಗ ಕೆ ಎಲ್ ರಾಹುಲ್ ಹೊರಬಿದ್ದಿದ್ದಾರೆ.
ಅಭ್ಯಾಸ ನಡೆಸುವಾಗ ರಾಹುಲ್ ಗಾಯಗೊಂಡಿದ್ದಾರೆ. ಎಡ ಮಣಿಕಟ್ಟು ಉಳುಕಿದ ಕಾರಣ ರಾಹುಲ್ ಸರಣಿಯಿಂದಲೇ ಹೊರ ಬೀಳಬೇಕಾಗಿದೆ. ರಾಹುಲ್ ಭಾರತದ ವಿಮಾನ ಏರಲಿದ್ದು, ಬೆಂಗಳೂರಿನ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಸರಣಿಯಿಂದ ಈಗಾಗಲೇ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹೊರಬಿದ್ದಿದ್ದು, ಈಗ ಮತ್ತೊಂದು ಆಘಾತ ಎದುರಾಗಿದೆ. ಕೆ ಎಲ್ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದೇ ಇದ್ದರೂ ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ:ಒನ್ ಡೇ ಕ್ರಿಕೆಟ್ ಗೆ 50ರ ಸಂಭ್ರಮ: ಉದಯವೇ ವಿಸ್ಮಯ, ಅಚ್ಚರಿ, ಅನಿರೀಕ್ಷಿತ, ರೋಮಾಂಚನ!
ಮೂರನೇ ಟೆಸ್ಟ್ ಪಂದ್ಯ ಜ.7ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಆಸೀಸ್ ಗೆದ್ದರೆ ಎರಡನೇ ಪಂದ್ಯದಲ್ಲಿ ಭಾರತ ಜಯಭೇರಿ ಗಳಿಸಿತ್ತು.