ಕಿನ್ನಿಗೋಳಿ: ಸಂಶೋಧನೆ, ಪತ್ರಿಕೋದ್ಯಮ, ನಾಗಾರಾಧನೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೆ. ಎಲ್. ಕುಂಡಂತಾಯರ ಸಾಧನೆ ಅಭಿನಂದನೀಯವಾದುದು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯಲ್ಲಿ ರವಿವಾರ ನಡೆದ ಅನಂತ ಪ್ರಕಾಶ ಸಂಸ್ಥೆಯ 29ನೇ ವರ್ಷಾಚರಣೆಯ ಸಂಭ್ರಮದ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಹಿತಿ, ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರಿಗೆ 10 ಸಾವಿರ ರೂ. ನಗದು, ಅಭಿನಂದನಾ ಕೃತಿ ಸಮರ್ಪಣೆ ಸಹಿತ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಮಾಡಲಾಯಿತು. ಅನಂತರ ಅವರು ಮಾತನಾಡಿ, ಸಾಧನೆಗೆ ಸಾಧ್ಯತೆಗಳನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಅಧ್ಯಯನಾಸಕ್ತಿ ರೂಢಿಸಿಕೊಳ್ಳುವುದು ಮುಖ್ಯ ಎಂದರು.
ಕೃತಿಗಳನ್ನು ಕೊಂಡು ಓದುವುದಷ್ಟೇ ಅಲ್ಲದೆ ಆ ಬರಹಗಾರರಿಗೆ ಅಭಿಪ್ರಾಯ ತಿಳಿಸುವುದು ಅಗತ್ಯ ಎಂದು ಧರ್ಮದರ್ಶಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು ಹೇಳಿದರು.
ಕುಂಡಂತಾಯರ ಅಭಿನಂದನಾ ಕೃತಿ ಸಹಿತ ಅನಂತ ಪ್ರಕಾಶ ವಿಶೇಷ ಸಂಚಿಕೆ ಹಾಗೂ ‘ವ್ಯಂಗ್ಯ ಬದುಕು’ ಶಿಂಗಣ್ಣ ಖ್ಯಾತಿಯ ಕನ್ನೆಪ್ಪಾಡಿ ರಾಮಕೃಷ್ಣ ಶಾಸ್ತ್ರಿ ಅವರ ವ್ಯಂಗ್ಯಚಿತ್ರಗಳ ನ್ನೊಳಗೊಂಡ ಇಂಗ್ಲೀಷ್ ಅನುವಾದ ‘ಎ ಲೆ„ಫ್ ಟೆ„ಮ್ ಆಫ್ ಸೆಟಾಯರ್’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕೊಡೆತ್ತೂರು ದೇವಸ್ಯಮಠದ ವೇದವ್ಯಾಸ ಉಡುಪ, ಕುಂಡಂತಾಯ ಅವರ ಪತ್ನಿ ಪುಷ್ಪಲತಾ, ಮುಳಿಯ ಗೋಪಾಲಕೃಷ್ಣ ಭಟ್, ಸಾಹಿತಿ ಮನೋರಮಾ ಎಂ. ಭಟ್, ರಾಘವೇಂದ್ರ ಮುಳಿಯ, ಡಾ| ಅರುಣ್ ಎಂ.ಇಸೂರು, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಅನಂತ ಪ್ರಕಾಶ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಉಪಸ್ಥಿತರಿದ್ದರು. ಶಕುನ ಉಡುಪ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ನಿರೂಪಿಸಿದರು. ಮಿಥುನ ಉಡುಪ ವಂದಿಸಿದರು.