Advertisement

ಕೆ ಕೆ ವೇಣುಗೋಪಾಲ್‌ ದೇಶದ ಹೊಸ ಅಟಾರ್ನಿ ಜನರಲ್‌

07:57 PM Jun 30, 2017 | Team Udayavani |

ಹೊಸದಿಲ್ಲಿ : ಮುಕುಲ್‌ ರೋಹಟಗಿ ಅವರು ಭಾರತದ ಅಟಾರ್ನಿ ಜನರಲ್‌ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವ ಕಾರಣ ಈ ಹುದ್ದೆಗೆ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್‌ ಅವರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. 

Advertisement

86ರ ಹರೆಯದ ವೇಣುಗೋಪಾಲ್‌ ಅವರನ್ನು ರೋಹಟಗಿ ಅವರ ಉತ್ತರಾಧಿಕಾರಿಯಾಗಿ ನೇಮಿಸುವ ನಿರ್ಧಾರವನ್ನು  ಪ್ರಧಾನಿ ನರೇಂದ್ರ ಮೋದಿ ಅವರು ತ್ರಿರಾಷ್ಟ್ರ ಭೇಟಿ ಕೈಗೊಳ್ಳುವ ಮುನ್ನವೇ ಚರ್ಚಿಸಲಾಗಿತ್ತು. ಮೂಲಗಳ ಪ್ರಕಾರ ವೇಣುಗೋಪಾಲ್‌ ಅವರು ಖುದ್ದಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.

ಅಟಾರ್ನಿ ಜನರಲ್‌ ಆದಾಗ ನಿಮ್ಮ ಆದ್ಯತೆಗಳೇನು ಎಂಬ ಮಾಧ್ಯಮದ ಪ್ರಶ್ನೆಗೆ ವೇಣುಗೋಪಾಲ್‌ “ಅಧಿಸೂಚನೆ ಜಾರಿಗೊಂಡ ಬಳಿಕವೇ ಆ ಬಗ್ಗೆ ನಾನು ಮಾತನಾಡುತ್ತೇನೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next