Advertisement

ಸರ್ಕಾರಿ ಶಾಲೆ ದತ್ತು ಪಡೆಯಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಚಿವ ಕೆ. ಗೋಪಾಲಯ್ಯ ಕರೆ

09:02 PM Nov 17, 2021 | Team Udayavani |

ಬೆಂಗಳೂರು ; ಅಬಕಾರಿ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕೆಲಸ ಮಾಡುವಂತೆ ಇಲಾಖೆ ಸಚಿವ ಕೆ.ಗೋಪಾಲಯ್ಯ ಸೂಚನೆ ನೀಡಿದರು.

Advertisement

ನಗರದ ಜೆ.ಸಿ.ರಸ್ರೆಯಲ್ಲಿರುವ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿಂದು ಸಂಜೆ ಅಬಕಾರಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ.ಅದು ಸಿಗುವುದು ಅಪರೂಪ. ಇಂಥಹ ಸರ್ಕಾರಿ ಕೆಲಸ ಪಡೆದು ಉನ್ನತ ಸೇವೆಯಲ್ಲಿರುವ ನೀವು ನಿಮ್ಮ ಊರಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಬೇಕು. ಅಂತೆಯೇ ಅಬಕಾರಿ ಇಲಾಖೆ ಅಧಿಕಾರಿಗಳು ಕೂಡ ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವಂತೆ ತಿಳಿಸಿದರು.

ದೆಹಲಿಯಲ್ಲಿ ಈ ರೀತಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುವುದಾದರೆ ನಮ್ಮಲ್ಲಿ ಏಕೆ‌ ಸಾಧ್ಯವಿಲ್ಲ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಜನ್ಮಸ್ಥಳ ಕಾಮಾಕ್ಷಿಪಾಳ್ಯದಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಸರ್ವಾಂಗೀಣ ಅಭಿವೃದ್ಧಿ ಪಡಿಸಿದ್ದೇನೆ. ಇದೇ ಮಾದರಿಯಲ್ಲಿ ‌ಎಲ್ಲ ಸರ್ಕಾರಿ ‌ನೌಕರರು ಹುಟ್ಟೂರಿನ ಶಾಲೆಗಳಿಗೆ ಸೌಲಭ್ಯಗಳನ್ನು ನೀಡುವ ಮೂಲಕ ಅಕ್ಷರ ಕಲಿಸಿದ ಶಾಲೆಗಳ ಋಣತೀರಿಸುವ ಕೆಲಸ ಮಾಡಿ ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ : ಒಳ ಹರಿವು ಹೆಚ್ಚಳದಿಂದ ರಸ್ತೆಗೆ ಹರಿದ ನೀರು: ಕೊಚ್ಚಿಕೊಂಡು ಹೋದ ನಿಲ್ಲಿಸಿದ್ದ ಕಾರು

Advertisement

ಕನ್ನಡಕ್ಕೆ ಬಂದಿರುವ ಜ್ಞಾನಪೀಠ ಪ್ರಶಸ್ತಿ ಡಾ.ಚಂದ್ರಶೇಖರ್ ಕಂಬಾರ ಸೇರಿದಂತೆ ಅನೇಕರು ಕನ್ನಡದ ಖ್ಯಾತಿಯನ್ನು ಹೆಚ್ವಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಂಬಾರರು ಮತ್ತು ವೈ.ಕೆ.ಮುದ್ದುಕೃಷ್ಣ ಅವರು ಭಾಗಿ ಯಾಗಿರುವುದೇ ನಮ್ಮ ದೊಡ್ಡ ಆಸ್ತಿ ಎಂದರು

ಸನ್ಮಾನ ಸ್ವೀಕರಿಸಿದ ಜ್ಞಾನಪೀಠ ಮತ್ತು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ‌ ಮಾತನಾಡಿ, ಅಬಕಾರಿ ಇಲಾಖೆಯಿಂದ ಆತ್ಮೀಯ ಸನ್ಮಾನ ಸ್ವೀಕರಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಸಚಿವ ಕೆ.ಗೋಪಾಲಯ್ಯ ಅವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next