Advertisement

30 ವರ್ಷಗಳ ಹಿಂದೆ ತಂದೆ ಮಾಧವರಾವ್ ನಿರ್ವಹಿಸಿದ್ದ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ

07:51 AM Jul 08, 2021 | Team Udayavani |

ಹೊಸದಿಲ್ಲಿ: ಅಂತೂ ಹಲವು ಅಚ್ಚರಿಗಳ  ನಡುವೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದೆ. ಹಲವು ಸಚಿವರ ರಾಜೀನಾಮೆ ಮತ್ತು ಹಲವು ಹೊಸ ಮುಖಗಳ ಪ್ರಮಾಣ ವಚನಕ್ಕೆ ಬುಧವಾರದ ಕಾರ್ಯಕ್ರಮ ಸಾಕ್ಷಿಯಾಗಿದೆ.

Advertisement

ಕಳೆದ ತಿಂಗಳಿನಿಂದ ಸಂಪುಟ ವಿಸ್ತರಣೆ ಮಾತು ಕೇಳಿದಾಗೆಲ್ಲಾ ಮೊದಲ ಕೇಳಿಬರುತ್ತಿದ್ದ ಹೆಸರು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ. ಕಾಂಗ್ರೆಸ್ ನಲ್ಲಿದ್ದ ಸಿಂಧಿಯಾ ಬಿಜೆಪಿಗೆ ಬಂದು ಮಧ್ಯ ಪ್ರದೇಶದಲ್ಲಿ ಬಿಜೆಪಿ  ಸರ್ಕಾರ ರಚನೆಗೆ ನೆರವಾಗಿದ್ದರು. ಹೀಗಾಗಿ ಸಿಂಧಿಯಾಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಗ್ಯಾರಂಟಿ ಎನ್ನಲಾಗಿತ್ತು.

ಅದರಂತೆ ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಮೋದಿ ಕ್ಯಾಬಿನೆಟ್ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸುಮಾರು  30 ವರ್ಷಗಳ ಹಿಂದೆ ಜ್ಯೋತಿರಾದಿತ್ಯ ತಂದೆ ಮಾಧವ ರಾವ್ ಸಿಂಧಿಯಾ ನಿರ್ವಹಿಸಿದ್ದ ವಿಮಾನ ಯಾನ ಖಾತೆಯನ್ನೇ ಪಡೆದಿದ್ದಾರೆ.

ಮಾಧವರಾವ್ ಸಿಂಧಿಯಾ ಅವರು 1991ರಿಂ 1993ರವರೆಗೆ ನರಸಿಂಹ ರಾವ್ ಅವರ ಸರ್ಕಾರದಲ್ಲಿ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಇದೀಗ ಮಗನಿಗೂ ವಿಮಾನಯಾನ ಖಾತೆ ಲಭಿಸಿದೆ.

ಇದನ್ನೂ ಓದಿ:ಈಗ ಎಲ್ಲರನ್ನೊಳಗೊಂಡ ಸಂಪುಟ: ಸಬ್‌ಕಾ ವಿಕಾಸ್‌ ಧ್ಯೇಯದೊಂದಿಗೆ ಪಿಎಂ ಮೋದಿ ಸಂಪುಟ ವಿಸ್ತರಣೆ

Advertisement

ತಂದೆ ಮತ್ತು ಮಗ ಇಬ್ಬರೂ ವಿಮಾನಯಾನ ಖಾತೆ ಪಡೆಯುವ ಮೊದಲು ಕೇಂದ್ರ ಸಚಿವಗಿರಿ ನಿರ್ವಹಿಸಿದ್ದರು. ಮಾಧವರಾವ್ ಅವರು ಅದಕ್ಕೂ ಮೊದಲು ರಾಜೀವ್ ಗಾಂಧಿ ಸರ್ಕಾರದಲ್ಲಿ ರೈಲ್ವೇ  ಸಚಿವರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಂವಹನ ಮತ್ತು ಐಟಿ ಸಹಾಯಕ ಸಚಿವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next