Advertisement

ಆಸೀಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಗೈರು ಪರಿಣಾಮ ಬೀರಲಿದೆ: ಲ್ಯಾಂಗರ್

07:54 AM Nov 14, 2020 | keerthan |

ಮೆಲ್ಬರ್ನ್: ತಂದೆಯಾಗಲಿರುವ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ ರಜೆಯಲ್ಲಿ ಹೋಗುವುದನ್ನು ನಾವು ಗೌರವಿಸಬೇಕು, ಆದರೆ ಇದರಿಂದ ಭಾರತ ತಂಡದ ಮೇಲೆ ಖಂಡಿತವಾಗಿಯೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಆಸ್ಟ್ರೇಲಿಯ ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

Advertisement

“ವಿರಾಟ್‌ ಕೊಹ್ಲಿ ನಾನು ಕಂಡ ಅತ್ಯುತ್ತಮ ಆಟಗಾರ. ಇದಕ್ಕೆ ಅನೇಕ ಕಾರಣಗಳಿವೆ. ಕೇವಲ ಬ್ಯಾಟಿಂಗ್‌ ಮಾತ್ರವಲ್ಲ, ಅವರ ಸಾಮರ್ಥ್ಯ ಮತ್ತು ಕ್ರೀಡಾ ಉತ್ಸಾಹವೂ ಇದಕ್ಕೆ ಕಾರಣ’ ಎಂದು ವೀಡಿಯೋ ಕಾನ್ಫರೆನ್ಸ್‌ ಒಂದರಲ್ಲಿ ಲ್ಯಾಂಗರ್‌ ಹೇಳಿದರು.

“ಕೊಹ್ಲಿ ಗೈರು ಖಂಡಿತವಾಗಿಯೂ ಭಾರತ ತಂಡದ ಮೇಲೆ ಪರಿಣಾಮ ಬೀರಲಿದೆ. ಆದರೆ ಭಾರತ ವಿಶ್ವದ ಅತ್ಯುತ್ತಮ ತಂಡ. ಕಳೆದ ಸಲ ನಮ್ಮನ್ನು ಅವರು ಸೋಲಿಸಿದ್ದರು. ಕೊಹ್ಲಿ ಇರಲಿ ಇಲ್ಲದಿರಲಿ, ನಾವಂತೂ ಸರಣಿಯನ್ನು ಲಘುವಾಗಿ ಪರಿಗಣಿಸುವುದಿಲ್ಲ’ ಎಂದರು.

ಡಿ. 21ರಂದು ಸರಣಿಯ ಮೊದಲ ಟೆಸ್ಟ್‌ ಮುಗಿದ ಕೂಡಲೇ ವಿರಾಟ್‌ ಕೊಹ್ಲಿ ಭಾರತಕ್ಕೆ ವಾಪಸಾಗಲಿದ್ದಾರೆ. ಉಳಿದ 3 ಟೆಸ್ಟ್‌ಗಳನ್ನು ಭಾರತ ಅವರ ಗೈರಲ್ಲಿ ಆಡಬೇಕಿದೆ. ಆಗ ಯಾರಿಗೆ ನಾಯಕತ್ವ ನೀಡಬೇಕೆಂಬ ಗೊಂದಲ ಕೂಡ ಭಾರತದ್ದಾಗಿದೆ. ಉಪನಾಯಕ ಅಜಿಂಕ್ಯ ರಹಾನೆಗೆ ಭಡ್ತಿ ಕೊಡುವುದೋ ರೋಹಿತ್‌ ಶರ್ಮ ಅವರನ್ನು ನೇಮಿಸುವುದೋ ಎಂಬುದನ್ನು ಬೇಗನೇ ಬಗೆಹರಿಸಿಕೊಳ್ಳಬೇಕು ಎಂದರು

Advertisement

Udayavani is now on Telegram. Click here to join our channel and stay updated with the latest news.

Next