Advertisement

ಜಸ್ಟಿನ್‌ ಲ್ಯಾಂಗರ್‌ ಆಸ್ಟ್ರೇಲಿಯ ಕ್ರಿಕೆಟ್‌ ಕೋಚ್‌

06:00 AM May 04, 2018 | |

ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಮಾಜಿ ಆರಂಭಕಾರ ಜಸ್ಟಿನ್‌ ಲ್ಯಾಂಗರ್‌ ಅವರನ್ನು ನೇಮಿಸ ಲಾಗಿದೆ. ಡ್ಯಾರನ್‌ ಲೇಹ್ಮನ್‌ ಅವರ ಉತ್ತರಾಧಿಕಾರಿಯಾಗಿರುವ ಲ್ಯಾಂಗರ್‌ ಮೇ 22ರಿಂದ  ಈ ಜವಾಬ್ದಾರಿ ವಹಿಸಲಿದ್ದಾರೆ ಎಂದು “ಕ್ರಿಕೆಟ್‌ ಆಸ್ಟ್ರೇಲಿಯ’ ತಿಳಿಸಿದೆ. 

Advertisement

ಕ್ರಿಕೆಟ್‌ ಜಗತ್ತಿನ ಪಾಲಿಗೆ ಕರಾಳ ವಾಗಿ ಗೋಚರಿಸಿದ ಆಸ್ಟ್ರೇಲಿ ಯನ್ನರ ಚೆಂಡು ವಿರೂಪ ಪ್ರಕರಣದ ಬಳಿಕ ಕೋಚ್‌ ಡ್ಯಾರನ್‌ ಲೇಹ್ಮನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಾಯಕ ಸ್ಟೀವನ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ತಲೆದಂಡವಾಗಿದೆ. ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಅವರನ್ನೂ ಅಮಾನತು ಮಾಡಲಾಗಿದೆ. ಸದ್ಯ ಆಸೀಸ್‌ ತಂಡ ಹಳಿ ತಪ್ಪಿದ್ದು, ಲ್ಯಾಂಗರ್‌ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next