Advertisement

ನ್ಯಾ|ವಿಶ್ವನಾಥ ಶೆಟ್ಟಿಗೆ ಲೋಕಾಯುಕ್ತ  ಪಟ್ಟ

03:45 AM Jan 10, 2017 | Harsha Rao |

ಬೆಂಗಳೂರು: ಕೊನೆಗೂ ಲೋಕಾಯುಕ್ತರ ಹುದ್ದೆಗೆ ಹೆಸರು ಅಂತಿಮಗೊಳಿಸಿರುವ ಸರ್ಕಾರ, ಸುಮಾರು ಒಂದು ವರ್ಷದಿಂದ ಖಾಲಿ ಇರುವ ಈ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಲು
ನಿರ್ಧರಿಸಿದೆ.

Advertisement

ನೂತನ ಲೋಕಾಯುಕ್ತರ ಆಯ್ಕೆ ಸಂಬಂಧ ಸೋಮವಾರ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ವಿಶ್ವನಾಥ ಶೆಟ್ಟಿ, ಎನ್‌.ಕೆ. ಪಾಟೀಲ್‌ ಮತ್ತು ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿ ಆನಂದ್‌ ಬೈರಾರೆಡ್ಡಿ ಅವರ ಹೆಸರುಗಳು ಪ್ರಸ್ತಾಪವಾದವು.

ಈ ಮೂವರ ಪೈಕಿ ನ್ಯಾ| ವಿಶ್ವನಾಥ ಶೆಟ್ಟಿ ಅವರನ್ನು ಅಂತಿಮಗೊಳಿಸಲಾಗಿದೆ. ಸಿಎಂ ಕಚೇರಿ ಮೂಲಗಳ ಪ್ರಕಾರ, ಈ ಕುರಿತ ಶಿಫಾರಸು ಮಂಗಳವಾರ ರಾಜಭವನ ತಲುಪುವ ಸಾಧ್ಯತೆಯಿದೆ. ಸಭೆಯಲ್ಲಿ ಭಾಗವಹಿಸಿದ್ದ ಹೈಕೋರ್ಟ್‌
ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ, ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಪ್ರತಿಪಕ್ಷ ನಾಯಕರಾದ ಜಗದೀಶ
ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಅವರು ನ್ಯಾ| ವಿಶ್ವನಾಥ ಶೆಟ್ಟಿ ಅವರ ನೇಮಕಕ್ಕೆ ಸಮ್ಮತಿ ಸೂಚಿಸಿದರು. 

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಭೆಯಲ್ಲಿ 3 ಹೆಸರು ಗಳು ಪ್ರಸ್ತಾಪವಾದವು. ಸ್ಪೀಕರ್‌ ಕೋಳಿವಾಡ ಅವರು ವಿಶ್ವನಾಥ ಶೆಟ್ಟಿ ಅವರ ಹೆಸರು ಪ್ರಸ್ತಾಪಿಸಿದರು. ನಾನೂ ಅದೇ ಹೆಸರನ್ನು ಉಲ್ಲೇಖೀಸಿದೆ. ಉಳಿದವರೂ ಇದಕ್ಕೆ ಸಮ್ಮತಿಸಿದರು. ಅಂತಿಮವಾಗಿ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು’ ಎಂದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನ್ಯಾ. ಭಾಸ್ಕರ್‌ ರಾವ್‌ 2015ರ
ಡಿಸೆಂಬರ್‌ 8ರಂದು ಲೋಕಾಯುಕ್ತ ಹು¨ªೆಗೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಛತ್ತೀಸ್‌ಗಢ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಕನ್ನಡಿಗ ನ್ಯಾ.ಎಸ್‌.ಆರ್‌. ನಾಯಕ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲು ಸರ್ಕಾರ ಮುಂದಾಗಿತ್ತು.

ಆದರೆ, ನ್ಯಾ. ಎಸ್‌.ಆರ್‌. ನಾಯಕ್‌ ಅವರು ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂ ಸಿ ನಿವೇಶನ ಪಡೆದುಕೊಂಡಿ¨ªಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ನ್ಯಾ. ನಾಯಕ್‌ ನೇಮಕದ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಮುಖ ನಿರ್ಧಾರ ಕೈಗೊಂಡಿದೆ ಎಂದು ಆಕ್ಷೇಪಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರಿಗೆ ದೂರು ಕೊಟ್ಟಿತ್ತು. ಇದರಿಂದಾಗಿ ರಾಜ್ಯಪಾಲರು ಎರಡು ಬಾರಿ ನ್ಯಾ.ನಾಯಕ್‌ ಅವರ ನೇಮಕದ ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಿದ್ದರು. ಇದರಿಂದ ಲೋಕಾಯುಕ್ತರ ನೇಮಕ ಕಗ್ಗಂಟಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next