ನವದೆಹಲಿ: ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ಜಸ್ಟೀಸ್ ನೂಥಲಾಪಾಟಿ ವೆಂಕಟ ರಮಣ ಅವರು ಶನಿವಾರ(ಏಪ್ರಿಲ್ 24) ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಎನ್ ವಿ ರಮಣ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನ ಸಿಜೆಐ ಆಗಿ ಎನ್.ವಿ.ರಮಣ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಿದರು. ಜಸ್ಟೀಸ್ ಎನ್ ವಿ ರಮಣ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು,
ಸುಪ್ರೀಂಕೋರ್ಟ್ ನ ಸಿಜೆಐ ಜಸ್ಟೀಸ್ ಎಸ್ ಎ ಬೋಬ್ಡೆ ಅವರು ಶುಕ್ರವಾರ(ಏ.23) ಸೇವೆಯಿಂದ ನಿವೃತ್ತರಾಗಿದ್ದರು. ತಮ್ಮ ನಿವೃತ್ತಿಗೂ ಮುನ್ನ ಸಂಪ್ರದಾಯದಂತೆ ನೂತನ ಸಿಜೆಐ ಆಗಿ ಎನ್ ವಿ ರಮಣ ಅವರ ಹೆಸರನ್ನು ಬೋಬ್ಡೆ ಶಿಫಾರಸು ಮಾಡಿದ್ದರು.
ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ವೇಳೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಜರಿದ್ದರು.
Related Articles
ಎನ್.ವಿ.ರಮಣ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೃಷಿಕ ಕುಟುಂಬದಲ್ಲಿ 1957ರ ಆಗಸ್ಟ್ 27ರಂದು ಜನಿಸಿದ್ದರು. ಜಸ್ಟೀಸ್ ರಮಣ (63ವರ್ಷ) ಅವರು ಸುಪ್ರೀಂಕೋರ್ಟ್ ನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದು, ಇವರು 2022ರ ಆಗಸ್ಟ್ 26ರವರೆಗೆ ಸೇವೆ ಸಲ್ಲಿಸಲಿದ್ದಾರೆ.