Advertisement

Law:”ಬೇಕಾಬಿಟ್ಟಿ ಬಂಧನ, ಆಸ್ತಿ ಧ್ವಂಸಕ್ಕೆ ಸರ್ವೋಚ್ಚ ಪೀಠದಲ್ಲಿ ನ್ಯಾಯ”:ಡಿ.ವೈ.ಚಂದ್ರಚೂಡ್‌

12:27 AM Aug 16, 2023 | Team Udayavani |

ಹೊಸದಿಲ್ಲಿ: ಬೇಕಾಬಿಟ್ಟಿ ಬಂಧನಕ್ಕೊಳಗಾದರೆ, ಆಸ್ತಿ ಧ್ವಂಸವಾಗುವ ಭೀತಿಗೊಳಗಾದರೆ, ಅಕ್ರಮವಾಗಿ ಆಸ್ತಿ ಕಳೆದುಕೊಂಡರೆ, ಅಂತಹ ವ್ಯಕ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಂತ್ವನ ಮತ್ತು ಧ್ವನಿ ದೊರೆಯಬೇಕು ಎಂದು ದೇಶದ ಸರ್ವೋಚ್ಚ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಆದರೆ ಈ ಮಾತುಗಳು ಯಾರನ್ನು ಉದ್ದೇಶಿಸಿವೆ ಎಂಬ ಸುಳಿವನ್ನು ಅವರು ನೀಡಿಲ್ಲ. ತೀರ್ಪುಗಳನ್ನು ಸ್ಥಳೀಯ ಭಾಷೆಗಳಲ್ಲೂ ಲಭ್ಯ ವಾಗುವಂತೆ ಮಾಡಲು ತೆಗೆದುಕೊಂಡ ಕ್ರಮ ಗಳಿಗಾಗಿ ಪ್ರಧಾನಿ ಮೋದಿಯಿಂದಲೇ ಮೆಚ್ಚುಗೆ ಪಡೆದ ಸ್ವಲ್ಪ ಹೊತ್ತಿನಲ್ಲೇ ಚಂದ್ರಚೂಡ್‌ ಈ ಮಾತನ್ನಾಡಿದ್ದಾರೆ.

Advertisement

ಸರ್ವೋಚ್ಚ ನ್ಯಾಯಾಲಯದ ಆವ ರಣದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಉದ್ದೇಶಿಸಿ ಸ್ವಾತಂತ್ರೊéàತ್ಸವ ಭಾಷಣ ಮಾಡಿದ ಅವರು, ಪ್ರತಿಯೊಬ್ಬರಿಗೂ ನ್ಯಾಯ ಸಿಗಲು ಇರುವ ತಡೆಗಳನ್ನು ತೆರವು ಮಾಡುವುದೇ ನ್ಯಾಯಾಂಗದ ಮುಂದಿರುವ ದೊಡ್ಡ ಸವಾಲು. ತಾನು ತನಗೆ ಬರುವ ಪತ್ರಗಳನ್ನಾಗಲೀ, ಸಾಮಾಜಿಕ ತಾಣಗಳಲ್ಲಿ ದಾಖಲಾಗುವ ದುಮ್ಮಾನಗಳನ್ನಾಗಲೀ ಖುದ್ದಾಗಿ ಪರಿಶೀಲಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next