Advertisement

ಸೋತವರಿಗೂ ಸಿಗಬೇಕಿದೆ ನ್ಯಾಯ: ಹೆಬ್ಬಾರ

07:25 AM Jun 06, 2020 | Lakshmi GovindaRaj |

ಕಾರವಾರ: ಉಪ ಚುನಾವಣೆಯಲ್ಲಿ ಎಂ.ಟಿ.ಬಿ. ನಾಗರಾಜ್‌, ಎಚ್‌.ವಿಶ್ವನಾಥ ಸೋಲನ್ನು ಅನುಭವಿಸಿದ್ದರೂ ಅವರ ಜತೆ ನಾವಿದ್ದೇವೆ. ನಾವೆಲ್ಲರೂ ಅವರ ಪರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿನಂತಿ ಮಾಡುತ್ತೇವೆ ಎಂದು  ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಸರ್ಕಾರ ರಚನೆಯಲ್ಲಿ ಮೂವರು ನಮ್ಮ ಸ್ನೇಹಿತ ಶಾಸಕರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಚಿವ ಸ್ಥಾನ ಬಿಟ್ಟು ಬಂದವರು. ಅವರಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು  ಮಾತಿಲ್ಲ. ನಾವೆಲ್ಲ ಅವರನ್ನು ಬಿಟ್ಟು ಹೋಗಿದ್ದೇನೆ ಎಂದುಕೊಂಡಿದ್ದಾರೆ.

Advertisement

ಆದರೆ ಅದು ನಿಜವಲ್ಲ. ನಾವ್ಯಾರೂ ಅವರನ್ನು ಬಿಟ್ಟು ಹೋಗಿಲ್ಲ ಎಂದು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರ ಅಸಮಾಧಾನ, ನೋವಿಗೆ ಸಚಿವ  ಹೆಬ್ಬಾರ ಪ್ರತಿಕ್ರಿಯೆ ನೀಡಿ ದರು. ಉಪ ಚುನಾವಣೆಯಲ್ಲಿ ಅವರು ಸೋತಿರಬಹುದು. ಆದರೆ ಅವರ ಪಾತ್ರ ದೊಡ್ಡದಿದೆ. ನೋವಾದಾಗ ಎಂ.ಟಿ.ಬಿ.ನಾಗರಾಜ್‌ ಹಾಗೆ ಹೇಳಿರಬಹುದು. ಆದರೆ ನಾವು ಅವರ ಜೊತೆ ಇದ್ದೇವೆ.  ಅವರಿಗೆ ನ್ಯಾಯ ಸಿಗಬೇಕು ಎಂದರು.

ಸಿದ್ದರಾಮಯ್ಯನವರು ಕೊರೊನಾ ನಿರ್ವಹಣೆ ವಿಚಾರವಾಗಿ ಸರ್ಕಾರದ ವಿರುದ ಹೇಳಿಕೆ ವಿಚಾರ ಕೆಣಕಿದಾಗ, ಅಷ್ಟು ದೊಡ್ಡವರ ಬಗ್ಗೆ ನಾನ್ಯಾಕೆ ವಿಚಾರ ಮಾಡಲಿ. ಇದಕ್ಕೆ ದೊಡ್ಡವರು ಉತ್ತರ  ಕೊಡುತ್ತಾರೆ. ಸಿದ್ದರಾ ಮಯ್ಯನವರು ಸೇರಿ ವಿರೋಧ ಪಕ್ಷದ ನಾಯ ಕರ ಜತೆ ಮುಖ್ಯಮಂತ್ರಿ ಸಭೆ ಮಾಡಿ ದರು, 4 ಬಾರಿ ನಾನು ಇದ್ದೆ. ಸರ್ಕಾರದ ನಿರ್ಣಯವನ್ನು, ಸರ್ಕಾರದ ಕ್ರಮವನ್ನು ಇಡೀ ವಿರೋಧ ಪಕ್ಷ, ಡಿ.ಕೆ ಶಿವಕುಮಾರ್‌,  ಸಿದ್ದರಾಮಯ್ಯ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಒಳ್ಳೆಯ ಕೆಲಸವನ್ನು ಮಾಡಿದಾಗ ಕೆಟ್ಟದು ಎಂದರೆ ಸಿಟ್ಟುಬರುತ್ತದೆ. ಕೊರೊನಾದಲ್ಲಿ ರಾಜಕೀಯ ಮಾಡಬೇಕಲ್ಲ, ಅಲ್ಪ ಸ್ವಲ್ಪ ಏನೂ ಮಾಡದಿದ್ರೆ ಅವರ ರಾಜಕಾರಣ ನಡೆಯುವುದು ಬೇಡವೇ? ಆ ಕಾರಣಕ್ಕಾಗಿ ರಾಜಕೀಯ ಟೀಕೆ ಮಾಡಿದ್ದಾರೆ. ತರಗತಿ ಯನ್ನು ಕಳೆದು ಕೊಳ್ಳಲು ಸಿದಟಛಿರಿದ್ದೇವೆ. ಮಕ್ಕಳನ್ನು ಕಳೆದುಕೊಳ್ಳಲು ಸಿದವಿಲ್ಲ. ಸಚಿವ ಸಂಪುಟದಲ್ಲಿ ತೀರ್ಮಾನವಾದ ಬಳಿಕ ಶಾಲೆ ಪ್ರಾರಂಭದ  ಬಗ್ಗೆ ನಿರ್ದಿಷ್ಟವಾಗಿ ತಿಳಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next