Advertisement

ನ್ಯಾ. ದಿನೇಶ್‌ ಮಹೇಶ್ವರಿ ಅವರಿಗೆ ಬೀಳ್ಕೊಡುಗೆ

12:30 AM Jan 18, 2019 | |

ಬೆಂಗಳೂರು: “ಕರ್ನಾಟಕದ ಜನತೆಯ ಪ್ರೀತಿ ಹೊತ್ತು ಇಲ್ಲಿಂದ ನಿರ್ಗಮಿಸುತ್ತಿದ್ದೇನೆ. ರಾಷ್ಟ್ರಕವಿ ಕುವೆಂಪು ರಚನೆಯ “ಜೈ ಭಾರತ ಜನನಿಯ ತನುಜಾತೆ’ ನಾಡಗೀತೆ ಎಂದೆಂದಿಗೂ ನನ್ನ ಜತೆಗಿರುತ್ತದೆ’.-ಇದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದ ಹೈಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಅವರು ಆಡಿದ ಭಾವುಕ ಮಾತುಗಳು.

Advertisement

 ಪದನ್ನೋತಿ ಹೊಂದಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಕೋರ್ಟ್‌ ಹಾಲ್‌-1ರಲ್ಲಿ ಗುರುವಾರ ರಾಜ್ಯ ವಕೀಲರ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಾನು ಕರ್ನಾಟಕದ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾ.ಯಾಗಿ ಕೇವಲ 11 ತಿಂಗಳಷ್ಟೇ ಕಾರ್ಯನಿರ್ವಹಿಸಿದ್ದೇನೆ.

ಕರ್ನಾಟಕದ ಜನತೆಯ ಸಕರಾತ್ಮಕತೆ ಮತ್ತು ಪ್ರೀತಿ ಹೊತ್ತು ಇಲ್ಲಿಂದ ತೆರಳುತ್ತಿದ್ದೇನೆ’ ಎಂದು ಹೇಳುತ್ತಾ ಭಾವುಕರಾದರು. ಇದೇ ವೇಳೆ ತಮ್ಮ ಕಾರ್ಯನಿರ್ವಹಣೆಗೆ ಕುಟುಂಬದ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸುತ್ತಾ ಕೆಲ ಕ್ಷಣ ಅವರು ದುಖ:ತಪ್ತರಾದರು. ಬಳಿಕ ಸಾವರಿಸಿಕೊಂಡು ಕರ್ನಾಟಕದ ಜನತೆಯ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದರು. ಕರ್ನಾಟಕ ವಕೀಲರ ಪರಿಷತ್‌ ಅಧ್ಯಕ್ಷ ಕೆ.ಬಿ. ನಾಯಕ್‌, ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next